ಕಾರ್ಪೊರೇಟ್ ಕಂಪನಿಗಳಿಗೆ ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ

india-employers-unable-to-find-highly-qualified
ಬೆಂಗಳೂರು, ಅ. 19: ಹೆಚ್ಚು ಶಿಕ್ಷಣ ಪಡೆದ ಅರ್ಹ ಅಭ್ಯರ್ಥಿಗಳಿಗಾಗಿ ದೇಶದಲ್ಲಿ ತೀವ್ರ ಅಭಾವ ತಲೆದೋರಿದೆ. ಭಾರತೀಯ ಕಂಪನಿಗಳು ಮತ್ತು ನೇಮಕಾತಿ ಸಂಸ್ಥೆಗಳು ಅರ್ಹ ಅಭ್ಯರ್ಥಿಗಳಿಗಾಗಿ ಕಣ್ಣಲ್ಲಿ ಕಣ್ಣಿಟ್ಟು ಜಾಲಾಡುತ್ತಿದೆ. ಆದರೆ ಹೆಚ್ಚಿನ ಫಲ ಸಿಗುತ್ತಿಲ್ಲ.

ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಶೇ. 65 ರಷ್ಟು ಕಂಪನಿಗಳು ಸಮರ್ಥ ಅಭ್ಯರ್ಥಿಗಳು ಸಿಗದೇ ನಿರಾಶೆಗೊಂಡಿವೆ. ಶೋಚನೀಯ ವಿಚಾರವೆಂದರೆ ಇನ್ನೂ ಮೂರು ವರ್ಷ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ಸುಮಾರು 5,000 ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಾಗಿದೆ. ಇಷ್ಟಾದರೂ ಸೂಕ್ತ ಉದ್ಯೋಗಿಗಳು ದೊರಕುತ್ತಿಲ್ಲ. ಆದರೆ ವಿಶ್ವ ಸ್ತರದಲ್ಲಿ ಪರಿಸ್ಥಿತಿ ಇಷ್ಟೊಂದು ಶೋಚನೀಯವಾಗಿಲ್ಲ.

ರಾಷ್ಟ್ರ ಆರ್ಥಿಕತೆ ಮತ್ತಷ್ಟು ಪ್ರಗತಿಮುಖವಾಗಿ ಸಾಗಿದಂತೆ ನೇಮಕಾತಿ ವಿಷಯದಲ್ಲಿ ಕಂಪನಿಗಳ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಹೆಚ್ಚು ಹೆಚ್ಚು ಅರ್ಹ ಉದ್ಯೋಗಿಗಳು ಅಗತ್ಯ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ಅಭ್ಯರ್ಥಿಗಳು ಸಂಖ್ಯೆ ಕುಗ್ಗುತ್ತಾ ಸಾಗುತ್ತದೆ. ಹಾಗಾಗಿ ಕಂಪನಿಗಳು ಸ್ವಯಂ ಆಗಿ ಹಾಲಿ ಉದ್ಯೋಗಿಗಳಿಗೆ ತರಬೇತಿ ಮತ್ತು ಅಭಿವೃದ್ಧಿಯನ್ನೊದಗಿಸುವುದು ಅನಿವಾರ್ಯ ಎಂದು ಸಮೀಕ್ಷೆ ವೇಳೆ ಅಭಿಪ್ರಾಯ ವ್ಯಕ್ತವಾಗಿದೆ.

ಕಂಪನಿಗಳಿಗೆ ಆಘಾತಕಾರಿಯಾಗಿರುವ ಮತ್ತೊಂದು ವಿದ್ಯಾಮಾನವೆಂದರೆ ಸಿಗುವ ಕೆಲವೇ ಅಭ್ಯರ್ಥಿಗಳು ಆರೇಳು ತಿಂಗಳು ಅನುಭವ ಪಡೆದು ಮತ್ತೊಂದು ಕಂಪನಿಗೆ ಹಾರುತ್ತಿರುವುದು.

ಈ ಹಿನ್ನೆಲೆಯಲ್ಲಿ ಅರ್ಹ/ಸಮರ್ಥ ಅಭ್ಯರ್ಥಿಗಳಿಗಾಗಿ ಹುಡುಕಾಟದ ಸಮರ ಇನ್ನೂ ತೀವ್ರವಾಗಲಿದೆ ಎಂದು India Randstad ಸಮೀಕ್ಷೆ ಎಚ್ಚರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+