ಶೆಟ್ಟರ್, ಯಡಿಯೂರಪ್ಪ ದೇಹ ಒಂದು ಜೀವ ಎರಡು

Jagadish Shettar and Yeddyurappa flex issue
ಬೆಂಗಳೂರು, ಸೆ 13: ಇದು ವಿಚಿತ್ರವಾದರೂ ನಿಜ. ಅಲ್ಪಸಂಖ್ಯಾತರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದ ಬ್ಯಾನರ್ ನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೇಹಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರುಂಡ ಸೇರಿಸಲಾಗಿದೆ.

ನಗರದ ಜ್ಞಾನಜ್ಯೋತಿ ಸಂಭಾಂಗಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಮತ್ತು ಕ್ರಿಶ್ಚಿಯನ್ ಅಭಿವೃದ್ದಿ ಪರಿಷತ್ ಅಲ್ಪಸಂಖ್ಯಾತರಿಗೆ ಚೆಕ್ ವಿತರಿಸುವ ಕಾರ್ಯಕ್ರಮ ಬುಧವಾರ (ಸೆ 12) ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕಾಗಿ ಹಾಕಿರುವ ಬ್ಯಾನರ್ ನಲ್ಲಿ ಈ ರೀತಿಯ ಆವಾಂತರ ನಡೆದಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮುಖ್ಯಮಂತ್ರಿ ಶೆಟ್ಟರ್ ಈ ಬ್ಯಾನರ್ ನೋಡಿ ಒಂದು ಕ್ಷಣ ಅವಕ್ಕಾದರು. ಆದರೂ ಮಿತ ಭಾಷಿಯಾದ ಶೆಟ್ಟರ್ ಕಣ್ಣಲ್ಲೇ ಅಧಿಕಾರಿಗಳಿಗೆ ಅದೇನೋ ಸನ್ನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ರೋಶನ್ ಬೇಗ್ ಭಾಗವಹಿಸಿದ್ದರು.

ಬ್ಯಾನರ್ ನಲ್ಲಿ ಶೆಟ್ಟರ್ ಜೊತೆ ಯೆಡಿಯೂರಪ್ಪ, ಈಶ್ವರಪ್ಪ ನವರ ಫೋಟೋ ಕೂಡಾ ಇದ್ದವು. ಆದರೆ ಅದೆಲ್ಲವೂ ಸರಿಯಾಗಿಯೇ ಇದ್ದವು. ಯಡಿಯೂರಪ್ಪ ಸಾಮಾನ್ಯವಾಗಿ ಧರಿಸುವ ಬಿಳಿ ಸೂಟ್, ಕಪ್ಪು ಶೂ, ಕೈಬೆರಳಲ್ಲಿ ಉಂಗುರವಿರುವ, ಎಡಗೈ ಮತ್ತು ಎಡಗಾಲನ್ನು ಮುಂದೆ ವಾಲಿದ ಅವರ ದೇಹಕ್ಕೆ ಶೆಟ್ಟರ್ ರುಂಡ ಸೇರ್ಪಡೆಯಾಗಿತ್ತು.

ಕೆಲ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಈ ಹಿಂದೆಯೊಮ್ಮೆ ಸದಾನಂದ ಗೌಡರ ದೇಹಕ್ಕೆ ಶೆಟ್ಟರ್ ಮುಖ ಜೋಡಿಸಿ ಫ್ಲೆಕ್ಸ್ ರಾರಾಜಿಸುತ್ತಿದ್ದವು. ಸದಾನಂದರ ನಗು ಮುಖವೇ ಅವರ ಆಕರ್ಷಣೆಯಲ್ಲವೇ? ಅವರ ದೇಹಕ್ಕೆ ಶೆಟ್ಟರ್ ಮುಖ ಜೋಡಿಸುವುದೆಂದರೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+