ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಮೇರಿ ಕೋಮ್

ಲಂಡನ್, ಆ.8 : ಐದು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಕಣಕ್ಕಿಳಿದಿದ್ದ ಮೇರಿ ಕೋಮ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಪದಕದೊಂದಿಗೆ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಬುಧವಾರ (ಆ.8)ರಂದು ನಡೆದ ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಗ್ರೇಟ್ ಬಿಟನ್ ನ ಯುರೋಪ್ ಚಾಂಪಿಯನ್ ನಿಕೋಲ್ ಆಡಮ್ ಅವರ ವಿರುದ್ಧ 11-6 ಅಂಕಗಳ ಅಂತರದಿಂದ ಮೇರಿ ಸೋಲುಂಡರು.

ಮೊದಲ ಸುತ್ತಿನಲ್ಲಿ ನಿಕೋಲ್ 3-1ರ ಮುನ್ನಡೆ ಪಡೆದ ನಂತರ ಮತ್ತೆ ಹಿಂತಿರುಗಿ ನೋಡಲಿಲ್ಲ, ಭಾರತದ ಬಾಕ್ಸಿಂಗ್ ಚಾಂಪಿಯನ್ ಮೇರಿ ಮೇಲೆ ಪಂಚ್ ಮೇಲೆ ಪಂಚ್ ಹೋಡೆದು ಎರಡನೇ ಸುತ್ತಿನಲ್ಲಿ 5-2 ರ ಮುನ್ನಡೆ ಕಾಯ್ದುಕೊಂಡರು. ಮೂರನೇ ಸುತ್ತಿನಲ್ಲಿ ಮೇರಿ ಉತ್ತಮ ಆಟ ಪ್ರದರ್ಶಿಸಿದರು 8-4 ಅಂತರದ ಹಿನ್ನೆಡೆ ಅನುಭವಿಸಿದರು. ಒಟ್ಟಾರೆ ನಿಕೋಲ್ 11-6 ಅಂತರದಿಂದ ಜಯ ಗಳಿಸಿದರು.

ಮೇರಿ ಕ್ವಾಟರ್ ಫೈನಲ್ ನಲ್ಲಿ ಟುನೀಶಿಯಾದ ಮರೊವು ರಾಹಿಲ್ ವಿರುದ್ಧ 15-6 ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರಿಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಮೇರಿ ಅವರು ಪೋಲೆಂಡ್ ನ ಕ್ಯಾರೊಲಿನಾ ಮಿಚಾಲ್ ಜುಕ್ ಅವರನ್ನು 19-14ರ ಅಂತರದಲ್ಲಿ ಸೋಲಿಸಿದ್ದರು. ನಿಕೋಲ್ ಅವರು ಬಲ್ಗೇರಿಯಾ ಸ್ಟೊಯ್ಕಾ ಪೆಟ್ರೋವಾ ಅವರನ್ನು 16-7 ಅಂತರದಿಂದ ಸೋಲಿಸಿ ಸೆಮಿಸ್ ಪ್ರವೇಶಿಸಿದ್ದರು.

ವೆಲ್ ಡನ್ ಮೇರಿ: ಚಿನ್ನ ಗೆಲ್ಲುವ ಎಲ್ಲ ಕುರುಹು ತೋರಿದ್ದ ಮೇರಿ ಅವರಿಗೆ ಕನಿಷ್ಠ ಕಂಚಿನ ಪದಕ ಸಿಕ್ಕಿದೆ. ಸೆಮಿಫೈನಲ್ ನಲ್ಲಿ ಭಾಗವಹಿಸುವ ಇಬ್ಬರೂ ಸ್ಪರ್ಧಿಗಳಿಗೆ ಪದಕ ಖಚಿತವಾಗಿ ದೊರೆಯಲಿದೆ.

ಒಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿಗೆ ಪಾದಾರ್ಪಣೆ ಮಾಡಿರುವ 29 ವರ್ಷದ ಮೇರಿ ಕೋಮ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲಿರುವ ಮೂರನೇ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಮೇರಿ ಪಾತ್ರರಾಗಿದ್ದಾರೆ. 2000ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದಿದ್ದರು. ಸೈನಾ ನೆಹ್ವಾಲ್ ಲಂಡನ್ ಒಲಿಂಪಿಕ್ಸ್ 2012 ರ ಕಂಚಿನ ಪದಕ ಗೆದ್ದಿದ್ದಾರೆ.

46 ಹಾಗೂ 48 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರು ಈ ಬಾರಿ ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಅವರು ಪೋಲೆಂಡ್ ನ ಕ್ಯಾರೊಲಿನಾ ಮಿಚಾಲ್ ಜುಕ್ ಅವರ ವಿರುದ್ಧ ಸೆಣಸುವ ಮೂಲಕ ಒಲಂಪಿಕ್ಸ್ ಗೆ ಪಾದರ್ಪಣೆ ಮಾಡಿದ್ದರು.

2 ಮಕ್ಕಳ ತಾಯಿ 29 ವರ್ಷದ ತಾಯಿ ಮೇರಿ ಕೋಮ್ ಅವರು 2 ಪಂದ್ಯ ಗೆದ್ದರೆ ಪದಕ ಖಾತ್ರಿಯಾಗಿತ್ತು. 46,48 ಕೆಜಿ ವಿಭಾಗದಲ್ಲಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಆಗಿದ್ದರು. ಒಲಿಂಪಿಕ್ಸ್ ನಲ್ಲಿ ಈ ಎರಡು ವಿಭಾಗ ಇಲ್ಲದ ಕಾರಣ 51 ಕೆಜಿ ವಿಭಾಗ ಸ್ಪರ್ಧಿಸಿದ್ದಾರೆ.

ಭಾರತದ ಬಾಕ್ಸಿಂಗ್ ಕ್ಷೇತ್ರದಲ್ಲಿ "Magnificent Mary", ಎಂದೇ ಕರೆಯಲ್ಪಡುವ ಮೇರಿ ಅವರು ಪಂದ್ಯಕ್ಕೂ ಮುನ್ನ "Ready for my match. Thanks all for your wishes. Hope to make my country proud. Jai Hind!" ಎಂದು ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+