• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಯರ ಆರಾಧನೆ: ಮಂತ್ರಾಲಯದಲ್ಲಿ ಜನಸಾಗರ

|

ಬೆಂಗಳೂರು, ಆ 2: ಶ್ರೀಗುರುರಾಘವೇಂದ್ರ ಸ್ವಾಮಿಗಳ 341ನೇ ಆರಾಧನಾ ಮಹೋತ್ಸವ ಶುಕ್ರವಾರದಿಂದ (ಆ 3) ಆರಂಭವಾಗಲಿದೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತಾರಾರಾಧನೆ ಹೀಗೆ ಭಾನುವಾರದ (ಆ 5) ವರೆಗೆ ನಾಡಿನೆಲ್ಲಡೆ ಇರುವ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಆರಾಧನೆ ಭಕ್ತಿ, ಸಡಗರದಿಂದ ನಡೆಯಲಿದೆ.

ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೂ ಭವ್ಯ ಆರಾಧನೆ ನಡೆಯುತ್ತದೆ. ರಾಯರ ಮೂಲ ಬೃಂದಾವನವಿರುವ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳು ಆಗಸ್ಟ್ ಒಂದರಿಂದ ವಿದ್ಯುಕ್ತವಾಗಿ ಆರಂಭವಾಗಿದೆ. ರಾಯಚೂರಿನ ಮಠದಲ್ಲಿ ಬುಧವಾರದಿಂದ ಆರಾಧನಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಗಳು ಆರಂಭವಾಗಿದೆ.

ಪುಣ್ಯಕ್ಷೇತ್ರ ಮಂತ್ರಾಲಾಯಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಕ್ಷೇತ್ರದ ಎಲ್ಲಾ ವಸತಿಗೃಹಗಳು ತುಂಬಿದ್ದು ಯಾತ್ರಾರ್ಥಿಗಳಿಗೆ ಮಠದ ಹಾಲ್, ಭೋಜನಶಾಲೆ ಮುಂತಾದ ಕಡೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕರ್ನೂಲ್ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡಿದೆ.

ಆ. 3ರಿಂದ 5ರವರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗ ಹುಬ್ಬಳ್ಳಿಯಿಂದ ಮಂತ್ರಾಲಯಕ್ಕೆ ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಿದೆ. ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ ಕೂಡಾ ಮಂತ್ರಾಲಯಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಮಂಗಳೂರು, ಮೈಸೂರು, ಬಳ್ಳಾರಿಯಿಂದ ಸಾರಿಗೆ ಸಂಸ್ಥೆ ಈ ಮೂರು ದಿನಗಳಲ್ಲಿ ಹೆಚ್ಚವರಿ ಬಸ್ ಓಡಿಸಲಿದೆ.

ಪೂರ್ವಾರಧನೆಯ ದಿನವಾದ ಆಗಸ್ಟ್ ಮೂರರಂದು ವಿದ್ವಾನ್ ರಾಜಾ ಎಸ್ ಗುರುರಾಜಾಚಾರ್ಯ ಅವರಿಗೆ ಮರಣೋತ್ತರವಾಗಿ ಮತ್ತು ನ್ಯಾ. ಎಂ ಎನ್ ವೆಂಕಟಾಚಲಯ್ಯ ಅವರಿಗೆ 'ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ' ಮತ್ತು ಸಂಗೀತ ವಿದ್ವಾಂಸ ಪಿ ಎಸ್ ಸತ್ಯನಾರಾಯಣ ಸ್ವಾಮಿ ಅವರಿಗೆ 'ಆಸ್ಥಾನ ವಿದ್ವಾನ್' ಪ್ರಶಸ್ತಿ ಮಠದ ಕಡೆಯಿಂದ ನೀಡಲಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 3 day Sri Raghavendra Aradhana Mahotsava will be held from 3 Aug to 5 Aug. Mantralaya Matt braced up for annual festival. The matt will honor 3 eminent persons on this occasion. Vidwan Gururajacharya ( Posthumous), former Lokayukta Justica M N Venkatachalaiah and Music maestro P S Satyanarayana Swamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more