ಕಾಳಿಕಾಮಾತೆ ಅಶ್ಲೀಲ ಗೇಮ್: ಹಿಂದೂಗಳ ಉಗ್ರಾವತಾರ

goddess-kali-online-video-game-irks-hindu-groups
ವಾಷಿಂಗ್ಟನ್‌, ಜುಲೈ 20: SMITE ಎಂಬ ಇಂಟರ್ ನೆಟ್ ಗೇಮಿಂಗ್ ನಲ್ಲಿ ಕಾಳಿಕಾ ಮಾತೆಯನ್ನು ಕೀಳುಮಟ್ಟದಲ್ಲಿ, ಅಶ್ಲೀಲ ಭಂಗಿಗಳಲ್ಲಿ ಬಿಂಬಿಸಿರುವುದಕ್ಕೆ ಹಿಂದೂ ಸಂಘಟನೆಗಳು ರೌದ್ರಾವತಾರ ತೋರಿ, ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ. Hi-Rez Studios ಎಂಬ ಸಂಸ್ಥೆ SMITE ಗೇಮಿಂಗ್ ಆಟದಲ್ಲಿ ಕಾಳಿಕಾ ದೇವಿಯನ್ನು ಅಶ್ಲೀಲವಾಗಿ ಚಿತ್ರಿಸಿದೆ.

SMITE ಎಂಬುದು ಆನ್ ಲೈನ್ ವಿಡಿಯೋ ಗೇಮ್ ಆಗಿದ್ದು, ಅನೇಕ ಹಿಂದೂ ದೇವ-ದೇವತೆಗಳನ್ನು ಅದರಲ್ಲಿ ಕೆಟ್ಟದ್ದಾಗಿ ಚಿತ್ರಿಸಿದೆ. ವಾಮನ, ಅಗ್ನಿಯನ್ನು ಸಹ ಹೀಗೇ ಚಿತ್ರೀಕರಿಸಲಾಗಿದೆ.

ಅಶ್ಲೀಲ ಶೈಲಿಯಲ್ಲಿ ಹಿಂದೂ ದೇವತೆಗಳನ್ನು ಚಿತ್ರೀಕರಿಸಿರುವುದರಿಂದ ನಮ್ಮ ಭಾವ-ಭಕ್ತಿಗೆ ಧಕ್ಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ನೇವಡಾದ Universal Society of Hinduism ಅಧ್ಯಕ್ಷ ರಾಜನ್ ಜೆಡ್ ಅವರು ತಕ್ಷಣ ಇಂತಹ ವಿಡಿಯೋಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಸೂಚಿಸಿದೆ. ಅಮೆರಿಕದಲ್ಲಿನ ಇನ್ನೂ ಅನೇಕ ಸಂಘಟನೆಗಳು ಇದೇ ರೀತಿಯ ಪ್ರತಿಭಟನೆಗಳನ್ನು ದಾಖಲಿಸಿವೆ.

'ಧರ್ಮ, ದೇವರುಗಳಿಗೆ ಸಂಬಂಧಪಟ್ಟಂತೆ ವಿಡಿಯೋಗಳನ್ನು ಮಾಡುವಾಗ ಅದರ ತಯಾರಕರು ಹೆಚ್ಚು ಸೂಕ್ಷ್ಮವಾಗಿರಬೇಕು. ಧರ್ಮಸೂಕ್ಷ್ಮಗಳನ್ನು ಅರಿತುಕೊಳ್ಳಬೇಕು. ಈ ಗೇಮುಗಳನ್ನು ಹೆಚ್ಚಾಗಿ ಆಡುವುದು ಎಳೆವಯಸ್ಸಿನ ಮಕ್ಕಳು. ಅವರ ಮನಸ್ಸುಗಳು ತುಂಬಾ ಸೂಕ್ಷ್ಮವಾಗಿರುತ್ತದೆ.

ಅವರು ಧರ್ಮ, ದೇವರ ಬಗ್ಗೆ ತಪ್ಪು ಅಭಿಪ್ರಾಯ ಹೊಂದುವ ಸಾಧ್ಯತೆಯಿರುತ್ತದೆ. ಅಂತಹುದರಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ, ಇಂತಹವುಗಳನ್ನು ಸಿದ್ಧಪಡಿಸಬೇಕು' ಎಂದು Universal Society of Hinduism ಪ್ರಕಟಣೆಯಲ್ಲಿ ಕಿಡಿಕಾರಿದೆ.

ಗಮನಾರ್ಹವೆಂದರೆ ಇತರೆ ಧರ್ಮಗಳ ಮುಖಂಡರೂ ಹಿಂದೂಗಳ ಭಾವನೆಗೆ ಧಕ್ಕೆಯೊದಗಿರುವುದಕ್ಕೆ Hi-Rez Studios ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+