• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣ್ಯರಿಂದ ಎಲ್ ಪಿಜಿ 'ಮಾಯಾ', ಬೊಕ್ಕಸಕ್ಕೆ ನಷ್ಟ

By Mahesh
|
VIPs misuse LPG subsidy
ನವದೆಹಲಿ, ಜೂ.24: ದೇಶದಲ್ಲಿ ಎಲ್‌ಪಿಜಿ ತೀವ್ರ ಅಭಾವ ಉಂಟಾಗಲು ಕಾರಣ ಏನು? ಎಂದು ಹುಡುಕಿಕೊಂಡು ಹೋದರೆ ಗಣ್ಯಾತಿಗಣ್ಯರು ಅದರಲ್ಲೂ ಪ್ರಮುಖ ಸಚಿವರು, ಕಾರ್ಪೊರೇಟರ್ ಗಳು, ಶಾಸಕರು ಎಲ್ ಪಿಜಿ ದುರ್ಬಳಕೆ ಮಾಡಿರುವುದು ಕಂಡು ಬಂದಿದೆ. ಎಲ್ ಪಿಜಿ ಸಿಲೆಂಡರ್ ಸಬ್ಸಿಡಿ ದುರ್ಬಳಕೆ ತಡೆಗಟ್ಟಲು ಹೊಸ ವೆಬ್ ತಾಣದ ಮೂಲಕ ನಿಯಂತ್ರಣಕ್ಕೆ ಇಂಧನ ಸಚಿನ ಜೈಪಾಲ್ ರೆಡ್ಡಿ ಮುಂದಾಗಿದ್ದರು.

ಆದರೆ, ವರ್ಷಕ್ಕೆ ಒಂದು ಕುಟುಂಬಕ್ಕೆ 6ಕ್ಕಿಂತ ಹೆಚ್ಚು ಸಬ್ಸಿಡಿ ಸಹಿತ ಎಲ್‌ಪಿಜಿ ಪೂರೈಸಬಾರದು ಎಂದು ಸಲಹೆ ನೀಡುವ ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್‌ ರೆಡ್ಡಿ ಬಳಸಿದ್ದು 26 ಸಿಲಿಂಡರ್‌!

5 ತಿಂಗಳಲ್ಲಿ 1 ಮನೆಗೆ ಎಷ್ಟು ಎಲ್‌ಪಿಜಿ ಸಿಲಿಂಡರ್‌ ಬಳಸಬಹುದು? ದೆಹಲಿಯಲ್ಲಿ ನಿವಾಸ ಹೊಂದಿರುವ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಕಳೆದ 5 ತಿಂಗಳಲ್ಲಿ ಬಳಸಿದ ಸಬ್ಸಿಡಿ ಸಹಿತ ಸಿಲಿಂಡರ್‌ಗಳ ಸಂಖ್ಯೆ ಬರೋಬ್ಬರಿ 171! ಸಂಸದ ನವೀನ್‌ ಜಿಂದಾಲ್‌ ಬಳಸಿದ್ದು 369. ಇನ್ನು ವಿದೇಶಾಂಗ ಖಾತೆ ರಾಜ್ಯ ಸಚಿವೆ ಪ್ರಣೀತ್‌ ಕೌರ್‌ ಬಳಸಿದ್ದು 161 ಸಿಲಿಂಡರ್‌.

ಇಂತಹದ್ದೊಂದು ಅಚ್ಚರಿಯ ಮಾಹಿತಿ ಶುಕ್ರವಾರ ಬಹಿರಂಗವಾಗಿದೆ. ಇದಕ್ಕಿಂತ ವಿಚಿತ್ರವೆಂದರೆ ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪೆಟ್ರೋಲಿಯಂ ಸಚಿವಾಲಯ ಹೊರತಂದಿರುವ ಯೋಜನೆಯಲ್ಲಿ ಸ್ವತಃ ಜೈಪಾಲ್‌ ರೆಡ್ಡಿ ಅವರೇ ತಪ್ಪಿತಸ್ಥರ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬಯಲಾಗಿದ್ದು ಹೇಗೆ?: ಸಿಲಿಂಡರ್‌ ವಿತರಣೆ ಮಾಡುವ ಸಂಸ್ಥೆಗಳ ಅಕ್ರಮ ತಡೆಯುವ ನಿಟ್ಟಿನಲ್ಲಿ ಇತ್ತೀಚೆಗೆ ಪೆಟ್ರೋಲಿಯಂ ಕಂಪನಿಗಳು ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತಂದಿವೆ. ಇದರಲ್ಲಿ ದೇಶದ ಪ್ರತಿಯೊಂದು ಎಲ್‌ಪಿಜಿ ವಿತರಣಾ ಸಂಸ್ಥೆಗಳಲ್ಲಿ ಎಷ್ಟು ಗ್ರಾಹಕರಿದ್ದಾರೆ ಅವರ ಸಂಪೂರ್ಣ ಮಾಹಿತಿ ಇದೆ.

ಜೊತೆಗೆ ಪ್ರತಿ ಗ್ರಾಹಕ ಆಯಾ ವರ್ಷದಲ್ಲಿ ಎಷ್ಟು ಸಿಲಿಂಡರ್‌ ಬುಕ್‌ ಮಾಡಿದ್ದಾನೆ. ಆತನಿಗೆ ಸರ್ಕಾರದಿಂದ ಸಿಕ್ಕ ಸಹಾಯಧನ ಎಷ್ಟು ಎಂಬ ಮಾಹಿತಿಯೂ ಇರುತ್ತದೆ. ದೇಶದ ಯಾವುದೇ ವ್ಯಕ್ತಿ ಅಂತರ್ಜಾಲದಲ್ಲಿ ಈ ಮಾಹಿತಿ ಪಡೆದುಕೊಳ್ಳಬಹುದು.

ಪೆಟ್ರೋಲಿಯಂ ಕಂಪನಿಗಳ ವೆಬ್‌ಸೈಟ್‌ನಲ್ಲಿ ಇರುತ್ತಿದ್ದ ಮಾಹಿತಿಯ ಜೊತೆಗೆ ಶುಕ್ರವಾರ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಟ್ರಾನ್ಸ್‌ಪರೆನ್ಸಿ ಪೋಟಲ್‌ ಎಂಬ ಹೊಸ ವೆಬ್‌ಸೈಟ್‌ ಆರಂಭಿಸಿದೆ. ಇದರಲ್ಲಿಯೂ ಇದೇ ರೀತಿ ಮಾಹಿತಿ ಇದೆ.

ಇದರಲ್ಲಿನ ಮಾಹಿತಿ ಹುಡುಕಿದಾಗ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಕಳೆದ ಮೇ ತಿಂಗಳವರೆಗೆ ಅಂದರೆ 5 ತಿಂಗಳಲ್ಲಿ ಬರೋಬ್ಬರಿ 171 ಸಿಲಿಂಡರ್‌ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಸಂಸದ ನವೀನ್‌ ಜಿಂದಾಲ್‌ ತಮ್ಮ ಹೆಸರಲ್ಲಿ ಒಂದು ಮತ್ತು ತಮ್ಮ ತಂದೆ ದಿವಂಗತ ಒ.ಪಿ. ಜಿಂದಾಲ್‌ ಹೆಸರಲ್ಲಿ ತಲಾ ಒಂದೊಂದು ಎಲ್‌ಪಿಜಿ ಸಂಪರ್ಕ ಹೊಂದಿದ್ದಾರೆ. ಇವುಗಳ ಮೂಲಕ ಅವರು 5 ತಿಂಗಳಲ್ಲಿ 369 ಸಿಲಿಂಡರ್‌ ಪಡೆದುಕೊಂಡಿದ್ದಾರೆ. ಅಂದರೆ ದಿನಕ್ಕೆ 2ಕ್ಕಿಂತ ಹೆಚ್ಚು!

ಇದೇ ರೀತಿ ಸಬ್ಸಿಡಿ ದರದಲ್ಲಿ ಮನಬಂದಂತೆ ಸಿಲಿಂಡರ್‌ ಪಡೆದುಕೊಂಡ ಇನ್ನಿತರೆ ಗಣ್ಯರೆಂದರೆ ಉತ್ತರಾಖಂಡ ಮುಖ್ಯಮಂತ್ರಿ ವಿಜಯ್‌ ಬಹುಗುಣ (83), ಬಿಜೆಪಿ ನಾಯಕ ರಾಜ್‌ನಾಥ್‌ ಸಿಂಗ್‌ (80), ಮಾಜಿ ಸಚಿವ ಎಂ.ಎಸ್‌.ಗಿಲ್‌ (79), ಮನೇಕಾ ಗಾಂಧಿ (63), ಸುರೇಶ್‌ ಕಲ್ಮಾಡಿ (58), ಮಾಯಾವತಿ (45), ರಾಂ ವಿಲಾಸ್‌ ಪಾಸ್ವಾನ್‌ (49).

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಎಲ್ ಪಿಜಿ ಸುದ್ದಿಗಳುView All

English summary
The new LPG portal data of just revealed data enough to embarrass the ministers, MPs and corporates. Uttar Pradesh chief minister Mayawati has a whopping 91 cylinders to her name costing the government Rs 31,318 in the past one year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more