ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

New Rules: ಭಾರತದಲ್ಲಿ ಸೆ.1ರಿಂದ ಯಾವೆಲ್ಲ ನಿಯಮಗಳು ಬದಲಾವಣೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 01: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಹೊಸ ನಿಯಮಗಳಿಂದ ಅಗತ್ಯ ಸೇವೆಗಳು ಮತ್ತು ಸರಕುಗಳ ಮೇಲಿನ ದರದಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಇನ್ನು ಕೆಲವು ಸೇವೆಗಳಲ್ಲಿ ನಿಯಮಗಳ ಬದಲಾವಣೆಯು ಸಾರ್ವಜನಿಕರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಸಾಮಾನ್ಯವಾಗಿ ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುವ ವಿವಿಧ ನೀತಿಗಳು ಮತ್ತು ನಿಯಮಗಳ ಕುರಿತು ಹಲವಾರು ಬದಲಾವಣೆಗಳು ಸೆಪ್ಟೆಂಬರ್ 1ರ, ಗುರುವಾರದಿಂದಲೇ ಜಾರಿಗೆ ಬರಲಿವೆ. ಇದರಿಂದ ನಿಮ್ಮ ಆದಾಯ ಮತ್ತು ವೆಚ್ಚದಲ್ಲಿ ಏರಿಳಿತ ಆಗಬಹುದು, ನಿಮ್ಮ ಜೇಬಿಗೆ ಕತ್ತರಿಯೂ ಬೀಳಬಹುದು.

ಯಮುನಾ ಎಕ್ಸ್​​ಪ್ರೆಸ್​ ವೇಗೆ ಮಾಜಿ ಪ್ರಧಾನಿ ಹೆಸರಿಡಲು ಮುಂದಾದ ಆದಿತ್ಯನಾಥ್ ಸರ್ಕಾರ!?ಯಮುನಾ ಎಕ್ಸ್​​ಪ್ರೆಸ್​ ವೇಗೆ ಮಾಜಿ ಪ್ರಧಾನಿ ಹೆಸರಿಡಲು ಮುಂದಾದ ಆದಿತ್ಯನಾಥ್ ಸರ್ಕಾರ!?

ಭಾರತೀಯ ಜೀವ ವಿಮಾ ಕಂಪನಿ, ಎಲ್‌ಪಿಜಿ ಗ್ಯಾಸ್, ಟೋಲ್ ಗೇಟ್ ದರ, ರಾಷ್ಟ್ರೀಯ ಪಿಂಚಣಿ ಯೋಜನೆ ಸೇರಿದಂತೆ ಹಲವು ವಲಯಗಳಲ್ಲಿ ನಿಯಮಗಳ ನವೀಕರಣವಾಗಿದೆ. ಅವುಗಳು ಸೆಪ್ಟೆಂಬರ್‌ನಲ್ಲಿ ಜಾರಿಗೆ ಬರಲಿದ್ದು, ಹೊಸ ನಿಯಮಗಳು ಮತ್ತು ನೀತಿ ನವೀಕರಣಗಳ ಪಟ್ಟಿಯನ್ನು ಮುಂದೆ ಓದಿ ತಿಳಿಯಿರಿ.

ಐಆರ್‌ಡಿಎಐ ಏಜೆಂಟರಿಗೆ ನೀಡುವ ಕಮಿಷನ್ ವಿಷಯ

ಐಆರ್‌ಡಿಎಐ ಏಜೆಂಟರಿಗೆ ನೀಡುವ ಕಮಿಷನ್ ವಿಷಯ

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಏಜೆಂಟರ ಕಮಿಷನ್ ಅನ್ನು ಶೇ 20ಕ್ಕೆ ಮಿತಿಗೊಳಿಸಲು ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ವಿಮಾ ಪೂರೈಕೆದಾರರನ್ನು ಅವಲಂಬಿಸಿ ಕಮಿಷನ್ 30 ರಿಂದ 35 ಪ್ರತಿಶತಕ್ಕೆ ಹೋಗಬಹುದು. ಈ ಪ್ರಸ್ತಾವನೆಯು ಸೆಪ್ಟೆಂಬರ್ ಮಧ್ಯಭಾಗದಿಂದ ಜಾರಿಗೆ ಬರುವ ಸಾಧ್ಯತೆಯಿದೆ, ಇದರ ಪರಿಣಾಮವಾಗಿ ವಿಮಾ ಕಂತುಗಳು ಕಡಿಮೆಯಾಗಲಿವೆ.

ಯಮುನಾ ಎಕ್ಸ್‌ಪ್ರೆಸ್‌ವೇ ಟೋಲ್ ದರದಲ್ಲಿ ವ್ಯತ್ಯಾಸ

ಯಮುನಾ ಎಕ್ಸ್‌ಪ್ರೆಸ್‌ವೇ ಟೋಲ್ ದರದಲ್ಲಿ ವ್ಯತ್ಯಾಸ

ಯಮುನಾ ಎಕ್ಸ್‌ಪ್ರೆಸ್‌ವೇ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (YEIDA) ಎಕ್ಸ್‌ಪ್ರೆಸ್‌ವೇಯಲ್ಲಿ ಲಘು ಮೋಟಾರು ವಾಹನಗಳಿಗೆ ಪ್ರತಿ ಕಿಲೋಮೀಟರ್‌ಗೆ 10 ರಿಂದ 15 ಪೈಸೆಗಳಷ್ಟು ಟೋಲ್ ತೆರಿಗೆಯನ್ನು ಹೆಚ್ಚಿಸಲಾಗಿದೆ. ಕಾರುಗಳು, ಜೀಪ್‌ಗಳು ಮತ್ತು ಇತರ ಎಲ್‌ಎಂವಿಗಳಿಗೆ, ಟೋಲ್ ತೆರಿಗೆಯು ಪ್ರತಿ ಕಿಲೋಮೀಟರ್‌ಗೆ 2.50 ರಿಂದ 2.65ಕ್ಕೆ ಏರಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್‌ಗಳು ಮತ್ತು ಟ್ರಕ್‌ಗಳು ಪ್ರತಿ ಕಿಲೋಮೀಟರ್‌ಗೆ 7.90 ಬದಲಿಗೆ 8.45 ಪಾವತಿಸಬೇಕಾಗುತ್ತದೆ. ಮೂರರಿಂದ ಆರು ಆಕ್ಸಲ್‌ಗಳಿರುವ ವಾಹನಗಳಿಗೆ ಪ್ರತಿ ಕಿಲೋಮೀಟರ್‌ಗೆ 12.05 ರ ಬದಲಿಗೆ 12.90 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಳಿತ ಹೇಗಿರುತ್ತೆ?

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಳಿತ ಹೇಗಿರುತ್ತೆ?

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನವೀಕರಿಸಲಾಗುತ್ತದೆ. ಅದೇ ರೀತಿ ಬೆಲೆಗಳಲ್ಲಿನ ಯಾವುದೇ ಬದಲಾವಣೆಯ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿರುವಾಗ ಬೆಲೆಗಳ ಏರಿಳಿತದ ಬಗ್ಗೆ ಪ್ರಕಟಿಸಲಾಗುತ್ತದೆ. ಸೆಪ್ಟೆಂಬರ್ 1ರಂದು ವಾಣಿಜ್ಯ ಸಿಲಿಂಡರ್ ದರದಲ್ಲಿ 91.50 ರೂಪಾಯಿ ಇಳಿಕೆಯಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 91.50 ರೂಪಾಯಿ ಇಳಿಕೆಯಾಗಿದೆ. ಈಗ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1,976 ರೂ ಬದಲಿಗೆ 1,885 ರೂಪಾಯಿ ಆಗುತ್ತದೆ.

ಆಡಿ ಕಾರುಗಳ ಬೆಲೆ ಏರಿಕೆ

ಆಡಿ ಕಾರುಗಳ ಬೆಲೆ ಏರಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಆಡಿ ತನ್ನ ಅಸ್ತಿತ್ವದಲ್ಲಿರುವ ಕಾರುಗಳ ಬೆಲೆಗಳಲ್ಲಿ ಶೇಕಡಾ 2.4 ರಷ್ಟು ಹೆಚ್ಚಳವನ್ನು ಘೋಷಿಸಿದೆ. ಸೆಪ್ಟೆಂಬರ್ 20 ರಿಂದ ಹೊಸ ದರಗಳು ಜಾರಿಗೆ ಬರಲಿದೆ ಎಂದು ಕಂಪನಿಯು ಹೇಳಿಕೊಂಡಿದೆ. ಅದರಂತೆ A4, A6, A8 L, Q5, Q7, Q8, S5 Sportback, RS 5 Sportback ಮತ್ತು RS Q8 ಪೆಟ್ರೋಲ್ ಮಾದರಿಗಳನ್ನು ಆಡಿ ಇಂಡಿಯಾ ಮಾರಾಟ ಮಾಡುತ್ತದೆ. ಜರ್ಮನ್ ವಾಹನ ತಯಾರಕರ EV ಪೋರ್ಟ್‌ಫೋಲಿಯೊವು e-tron 50, e-tron 55, e-tron Sportback 55, e-tron GT ಮತ್ತು RS ಇ-ಟ್ರಾನ್ GT ಗಳನ್ನು ಸಹ ಒಳಗೊಂಡಿದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ನಿಯಮ ಬದಲಾವಣೆ

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ನಿಯಮ ಬದಲಾವಣೆ

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕ್ರೆಡಿಟ್ ಕಾರ್ಡ್‌ಗಳ ಮೂಲಕ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಶ್ರೇಣಿ-II ಖಾತೆಗಳಿಗೆ ಕೊಡುಗೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಆದಾಗ್ಯೂ, ಖಾತೆದಾರರು ನೆಟ್ ಬ್ಯಾಂಕಿಂಗ್ ಮತ್ತು ಇತ್ತೀಚೆಗೆ ಬಳಸಿದ UPI ವಿಧಾನದ ಮೂಲಕ ಕೊಡುಗೆಗಳನ್ನು ನೀಡುವುದನ್ನು ಮುಂದುವರಿಸಬಹುದು.

English summary
Rules Changing from September 1, 2022: Here's a list of new rules and policy updates that will come into effect in September. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X