ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಸರ್ಕಾರದಿಂದಲೇ ಉಚಿತ ಎಲ್‌ಪಿಜಿ ಸಂಪರ್ಕ, ಪಡೆಯುವುದು ಹೇಗೆ?

|
Google Oneindia Kannada News

ಕರ್ನಾಟಕದಲ್ಲಿ ಹಿಂದುಳಿದ ಜಿಲ್ಲೆಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಪ್ರಾರಂಭಿಸುವುದಕ್ಕೆ ಚಿಂತನೆ ನಡೆಸಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಉಚಿತವಾಗಿ ಎಲ್ ಪಿಜಿ ಸಿಲಿಂಡರ್ ಸಂಪರ್ಕವನ್ನು ಪಡೆಯಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದರ ಮೂಲಕ ಸುಲಭವಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಜುಲೈ ತಿಂಗಳ ಮಧ್ಯಭಾಗದಿಂದ ಯೋಜನೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ದೇಶಾದ್ಯಂತ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ ದೇಶಾದ್ಯಂತ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ

ಅನಿಲ ಭಾಗ್ಯ ಯೋಜನೆಗಾಗಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್‌ಸೈಟ್ (karnataka.gov.in) ಅಥವಾ ಮೀಸಲಾದ ಸ್ಕೀಮ್ ಪೋರ್ಟಲ್‌ನಲ್ಲಿ ಆಹ್ವಾನಿಸಲಾಗುತ್ತದೆ. ಈ ಹಂತದಲ್ಲಿ ಅರ್ಜಿ ಸಲ್ಲಿಸುವವರು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಎಲ್ ಪಿಜಿ ಸಂಪರ್ಕವನ್ನು ಪಡೆದುಕೊಂಡಿರಬಾರದು.

ಇದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅರ್ಜಿದಾರರ ವಿವರಗಳು SECC-2011 ಅಂಕಿ-ಅಂಶಗಳ ಜೊತೆಗೆ ಹೊಂದಿಕೆ ಆಗಬೇಕು. ಒಂದು ವೇಳೆ ಕೇಂದ್ರದ ಯೋಜನೆಯಡಿ ಪ್ರಯೋಜನ ಪಡೆದುಕೊಂಡಿದ್ದರೆ, ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಕರ್ನಾಟಕ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಿಲಿಂಡರ್ ಸಂಪರ್ಕ ಪಡೆಯುವುದಕ್ಕೆ ಏನೆಲ್ಲಾ ಅರ್ಹತೆಗಳಿರಬೇಕು?, ಈ ಯೋಜನೆಯ ವೈಶಿಷ್ಟ್ಯತೆಗಳೇನು?, ಯಾವ ದಾಖಲೆ ಹೊಂದಿರಬೇಕು?, ಅರ್ಜಿ ಸಲ್ಲಿಸುವ ವಿಧಾನ ಹೇಗಿರಬೇಕು? ಈ ಯೋಜನೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳನ್ನು ಮುಂದೆ ಓದಿ.

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ವೈಶಿಷ್ಟ್ಯತೆ

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ವೈಶಿಷ್ಟ್ಯತೆ

* ಉಜ್ವಲ ಯೋಜನೆಯಡಿ ಒಳಪಡದ ವ್ಯಕ್ತಿಗಳಿಗೆ ಮಾತ್ರ ಈ ಉಚಿತ LPG ಸಂಪರ್ಕವನ್ನು ನೀಡಲಾಗುವುದು

* ಕೇಂದ್ರದ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳಿಗೆ ಉಚಿತವಾಗಿ ಒಲೆಯನ್ನು ನೀಡಲಾಗುವುದು

* ಉಜ್ವಲದಡಿ 1600 ಪಡೆಯುವ ಕುಟುಂಬಕ್ಕೆ ಹೋಲಿಸಿದರೆ ಈ ಯೋಜನೆ ಅಡಿ ಒಂದು ಕುಟುಂಬಕ್ಕೆ 1,920 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ

* ಕರ್ನಾಟಕ ಮುಖ್ಯ ಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆಯುವ ಅಂದಾಜು ಹಾಕಿಕೊಳ್ಳಲಾಗಿದೆ

* LPG ಎಂಬುದು ಹೊಗೆರಹಿತ ಅಡುಗೆಯ ತಂತ್ರವಾಗಿದ್ದು ಅದು ಆರೋಗ್ಯದ ಪ್ರಯೋಜನಗಳನ್ನು ಹೆಚ್ಚಿಸುತ್ತದೆ

* ಇದು ಅಡುಗೆಯ ಆರ್ಥಿಕ, ಸಮರ್ಥನೀಯ ವಿಧಾನವಾಗಿದ್ದು, ಪರಿಸರ ಹಾನಿಯನ್ನು ಕಡಿಮೆ ಮಾಡುತ್ತದೆ

ಯೋಜನೆ ಮಾನದಂಡ ಹಾಗೂ ದಾಖಲೆಗಳು

ಯೋಜನೆ ಮಾನದಂಡ ಹಾಗೂ ದಾಖಲೆಗಳು

* ಕರ್ನಾಟಕದ ನಾಗರಿಕರಾಗಿರುವ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗಲಿದೆ

* LPG ಸಂಪರ್ಕವನ್ನು ಹೊಂದಿರದ PHH (ಆದ್ಯತಾ ಕುಟುಂಬ) ಮತ್ತು AAY (ಅಂತ್ಯೋದಯ ಅನ್ನ ಯೋಜನೆ) ಪಡಿತರ ಚೀಟಿದಾರರು ಅರ್ಹರಾಗಿರುತ್ತಾರೆ

* ಎಲ್‌ಪಿಜಿ ಸಂಪರ್ಕವನ್ನು ಹೊಂದಿರದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ನೋಂದಾಯಿಸಿದ ಎಲ್ಲಾ ನಿರ್ಮಾಣ ಕಾರ್ಮಿಕರು ಸೇರುತ್ತಾರೆ

* ಆಧಾರ್ ಸಂಖ್ಯೆಯನ್ನು ಹೊಂದಿರುವ ಅರ್ಜಿದಾರರು ಅರ್ಜಿ ಸಲ್ಲಿಸಬಹುದು

* ಉಜ್ವಲ ಯೋಜನೆಯ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ

* ಈ ಯೋಜನೆಗಾಗಿ ಅರ್ಜಿ ಸಲ್ಲಿಸಿದ ನಂತರ, ಫಲಾನುಭವಿಯ ಹೆಸರನ್ನು ಸಾಮಾಜಿಕ-ಆರ್ಥಿಕ ಜಾತಿ ಗಣತಿ 2011ರ ಡೇಟಾದೊಂದಿಗೆ ಮರುಪರಿಶೀಲನೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವುದಕ್ಕೆ ಯಾವ ದಾಖಲೆ ಬೇಕು?

ಅರ್ಜಿ ಸಲ್ಲಿಸುವುದಕ್ಕೆ ಯಾವ ದಾಖಲೆ ಬೇಕು?

ಕರ್ನಾಟಕ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಿಲಿಂಡರ್ ಸಂಪರ್ಕವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವವರು ಕೆಲವು ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಈ ದಾಖಲೆಗಳನ್ನು ಕಳೆಗೆ ಪಟ್ಟಿ ಮಾಡಲಾಗಿದೆ.

* ಬಿಪಿಎಲ್ ಕುಟುಂಬದ ಪಡಿತರ ಚೀಟಿ

* ಆಧಾರ್ ಕಾರ್ಡ್

* ನಿವಾಸದ ಪುರಾವೆ (Leaving Certificate)

* ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಯೋಜನೆ ಕುರಿತು ಹೆಚ್ಚುವರಿ ಮಾಹಿತಿ ಪಡೆಯಿರಿ

ಯೋಜನೆ ಕುರಿತು ಹೆಚ್ಚುವರಿ ಮಾಹಿತಿ ಪಡೆಯಿರಿ

ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಕುರಿತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮುಂದೆ ತಿಳಿದುಕೊಳ್ಳೋಣ.

* ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು ಈ ಯೋಜನೆಯಡಿ ಫಲಾನುಭವಿ ಆಗಬಹುದು

* ಹೆಚ್ಚುವರಿ ಸಹಾಯಕ್ಕಾಗಿ ನಿಮ್ಮ ಹತ್ತಿರದ ಸರ್ಕಾರ ಕಚೇರಿಗೆ ತೆರಳಿ ಮಾಹಿತಿ ಪಡೆದುಕೊಳ್ಳಬಹುದು

* ಈ ಯೋಜನೆಗೆ ಒಳಪಡುವ ಎಲ್ಲಾ ಫಲಾನುಭವಿಗಳಿಗೂ ಗ್ಯಾಸ್ ಸ್ಟವ್ ಅನ್ನು ನೀಡಲಾಗುವುದು, ಆದರೆ ಯಾವ ಬಗೆ ಸ್ಟವ್ ಅನ್ನು ನೀಡಲಾಗುವುದು ಎಂಬುದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿಯನ್ನು ನೀಡಿಲ್ಲ

* ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ

* ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಯಾವುದೇ ರೀತಿ ನೆರವು ಪಡೆದುಕೊಳ್ಳುತ್ತಿಲ್ಲ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಉಚಿತ LPG ಸಂಪರ್ಕವನ್ನು ಪಡೆದುಕೊಳ್ಳುವುದಕ್ಕೆ ನೀವು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಓದಿ ತಿಳಿದುಕೊಳ್ಳಿರಿ.

* ಮೊದಲಿಗೆ ನೀವು ಅರ್ಜಿ ನಮೂನೆಯನ್ನು ಸಲ್ಲಿಸಬೇಕು

* ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ಈ ಯೋಜನೆಯ ಮಾನದಂಡಗಳನ್ನು ಪೂರ್ಣವಾಗಿ ಭರ್ತಿ ಮಾಡಬೇಕು

* ಅರ್ಜಿಯನ್ನು ಸಲ್ಲಿಸಿದ ನಂತರ ಸರ್ಕಾರ ಉಚಿತ LPG ಸಂಪರ್ಕಗಳಿಗೆ ನಿಮ್ಮ ಅರ್ಹತೆ ನಿರ್ಧರಿಸಿದ ದಿನಾಂಕವನ್ನು ನಿರ್ದಿಷ್ಟಪಡಿಸುತ್ತದೆ

* ಗ್ರಾಮೀಣ ಪ್ರದೇಶದ ಜನರು ಉಚಿತ ಎಲ್‌ಪಿಜಿ ಸಂಪರ್ಕ ಪಡೆಯಲು ತಮ್ಮ ಅರ್ಜಿಯನ್ನು ಹತ್ತಿರದ ಗ್ರಾಮ ಪಂಚಾಯಿತಿಗೆ ಸಲ್ಲಿಸುವುದು

* ನಗರ ಪ್ರದೇಶದಲ್ಲಿ ವಾಸಿಸುವ ಜನರು ಆಯಾ ಪ್ರದೇಶದ ವಾರ್ಡ್ ಕಚೇರಿಗೆ ಭೇಟಿ ನೀಡಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು

* ಈ ಅರ್ಜಿಗಳ ದೃಢೀಕರಣವನ್ನು ಪರಿಶೀಲಿಸಲು SECC-2011 ಹೆಸರಿನ ಡೇಟಾ ಪಟ್ಟಿಯನ್ನು ಬಳಸಲಾಗುತ್ತದೆ

* ಉಚಿತ ಎಲ್‌ಪಿಜಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಮಾಹಿತಿಯನ್ನು ಅಪ್ಲಿಕೇಶನ್ ಒದಗಿಸುತ್ತದೆ

* ಅಪ್ಲಿಕೇಷನ್ ಮೂಲಕ ಅರ್ಜಿದಾರರು ಮೊದಲೇ ಉಚಿತ ಸಂಪರ್ಕವನ್ನು ಪಡೆದುಕೊಂಡಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಹಕಾರಿ ಆಗಿರಲಿದೆ

* ಯಾವುದೇ ಅರ್ಜಿದಾರರು ಎರಡು ಬಾರಿ ಅರ್ಜಿ ಸಲ್ಲಿಸಿದರೆ, ಅವರ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಹಾಗೂ ಅಂಥವರಿಗೆ ಉಚಿತ LPG ಸಂಪರ್ಕ ನೀಡಲಾಗುವುದಿಲ್ಲ

English summary
Karnataka Mukhyamantri Anila Bhagya Scheme Apply Online for Free LPG Connection Yojana; Know features, registration, eligibility, documents required and how to apply in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X