• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ: ಏಪ್ರಿಲ್‌ನಲ್ಲಿ ಎಲ್‌ಪಿಜಿ ಬೆಲೆ ದುಪ್ಪಟ್ಟು ಸಾಧ್ಯತೆ!, ಕಾರಣ ಇಲ್ಲಿದೆ..

|
Google Oneindia Kannada News

ನವದೆಹಲಿ, ಫೆಬ್ರವರಿ 22: ಏರುತ್ತಿರುವ ಹಣದುಬ್ಬರವು ಭಾರತೀಯ ಗ್ರಾಹಕರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕುವ ಸಾಧ್ಯತೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈಗಾಗಲೇ ಜನರ ತಿಂಗಳ ಬಜೆಟ್‌ಗೆ ಹಾನಿ ಉಂಟು ಮಾಡಿದೆ. ಈಗ ಅಡುಗೆ ಅನಿಲವು ಕೂಡಾ ನಿಮ್ಮ ಮನೆಯ ಮಾಸಿಕ ಬಜೆಟ್‌ ಮೇಲೆ ಪೆಟ್ಟು ನೀಡುವ ಸಾಧ್ಯತೆ ಇದೆ.

ಜಾಗತಿಕ ಅನಿಲ ಬಿಕ್ಕಟ್ಟಿನಿಂದಾಗಿ ಅಡುಗೆ ಅನಿಲಗಳ ಬೆಲೆಗಳು ಏರಿಕೆ ಆಗುವ ಸಾಧ್ಯತೆ ಇದೆ. ಏಪ್ರಿಲ್‌ನಿಂದ ಹೆಚ್ಚು ದುಬಾರಿಯಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿದೆ. ಈ ಜಾಗತಿಕ ಅನಿಲ ಬಿಕ್ಕಟ್ಟಿನ ಪರಿಣಾಮಗಳು ಶೀಘ್ರದಲ್ಲೇ ಭಾರತದಲ್ಲಿನ ದೇಶೀಯ ಅನಿಲ ಬೆಲೆಗಳ ಮೇಲೆ ಬೀರಬಹುದು. ಅಡುಗೆ ಅನಿಲ ಬೆಲೆ ಇದು ಏಪ್ರಿಲ್‌ನಿಂದ ದ್ವಿಗುಣಗೊಳ್ಳಬಹುದು ಎಂದು ಝೀ ನ್ಯೂಸ್ ಹಿಂದಿ ವರದಿ ಮಾಡಿದೆ.

 ದೇಶದಲ್ಲಿ ದೀಪಾವಳಿ ವೇಳೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ ದೇಶದಲ್ಲಿ ದೀಪಾವಳಿ ವೇಳೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ

ಕಳೆದ ಅಕ್ಟೋಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಹದಿನೈದು ರೂಪಾಯಿ ಹೆಚ್ಚಳವಾಗಿದೆ. ಈಗ ಬೆಂಗಳೂರಿನಲ್ಲಿ ಈಗಿನ ದರ 903 ರೂಪಾಯಿ ಆಗಿದೆ. ರಾಯಚೂರಿನಲ್ಲಿ 926 ರೂಪಾಯಿ ಇದ್ದು, ಕೊಪ್ಪಳದಲ್ಲಿ 936 ರೂಪಾಯಿ ಆಗಿದೆ. ಬಿಜಾಪುರದಲ್ಲಿ 924 ರೂಪಾಯಿ ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 912 ರೂಪಾಯಿ ಆಗಿದೆ. ಈ ನಡುವೆ ಈ ಜಾಗತಿಕ ಬಿಕ್ಕಟ್ಟಿನಿಂದಾಗಿ ಅಡುಗೆ ಅನಿಲ ದರ ಹೆಚ್ಚಾದರೆ ಜನರ ಜೇತು ತೂತಾಗುವುದಂತೂ ಖಂಡಿತ. ಹಾಗಾದರೆ ಅಡುಗೆ ಅನಿಲ ಹೆಚ್ಚಳವಾಗಲು ಕಾರಣವೇನು ಎಂದು ತಿಳಿಯೋಣ ಮುಂದೆ ಓದಿ...

ಜಾಗತಿಕ ಅನಿಲ ಬಿಕ್ಕಟ್ಟು

ಜಾಗತಿಕ ಬಿಕ್ಕಟ್ಟಿನೊಂದಿಗೆ, ಸಿಎನ್‌ಜಿ, ಪಿಎನ್‌ಜಿ ಮತ್ತು ವಿದ್ಯುತ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದು ಸಾರಿಗೆ ವೆಚ್ಚ ಮತ್ತು ಕೈಗಾರಿಕೆಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಕೂಡ ಏರಿಕೆ ಕಾಣಬಹುದು. ಈ ಎಲ್ಲಾ ಅಂಶಗಳ ನೇರ ಪರಿಣಾಮವನ್ನು ಗ್ರಾಹಕರು ಎದುರಿಸಬಹುದು.

ಬೇಡಿಕೆಯನ್ನು ಪೂರೈಕೆಗೆ ತೊಂದರೆ ಸಾಧ್ಯತೆ

ರಷ್ಯಾ ಯುರೋಪಿನಾದ್ಯಂತ ಅನಿಲದ ಪ್ರಮುಖ ಪೂರೈಕೆದಾರ ರಾಷ್ಟ್ರವಾಗಿದೆ. ಸದ್ಯ ರಷ್ಯಾ ಹಾಗೂ ಉಕ್ರೇನ್‌ ನಡುವಿನ ಬಿಕ್ಕಟ್ಟು ಉಕ್ರೇನ್ ಬಿಕ್ಕಟ್ಟು ಪೂರೈಕೆಯನ್ನು ಅಡ್ಡಿಪಡಿಸಬಹುದು. ಜಾಗತಿಕ ಆರ್ಥಿಕತೆಯು ಕೋವಿಡ್ -19 ಸಾಂಕ್ರಾಮಿಕದ ಪರಿಣಾಮಗಳನ್ನು ಕ್ರಮೇಣವಾಗಿ ನಿವಾರಿಸುತ್ತಿರುವಾಗ, ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಶಕ್ತಿಯ ಬೇಡಿಕೆಗಳು ಬೆಲೆ ಹೆಚ್ಚಳಕ್ಕೆ ಕಾರಣವಾಗಬಹುದು.

ಸಿಹಿಸುದ್ದಿ: ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ; ಪರಿಶೀಲಿಸುವುದು ಹೇಗೆ? ಸಿಹಿಸುದ್ದಿ: ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ; ಪರಿಶೀಲಿಸುವುದು ಹೇಗೆ?

ಮನೆಯ ವಸ್ತುಗಳ ಮೇಲೆ ಪರಿಣಾಮ

ಉಕ್ರೇನ್‌ನಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯು ಯುದ್ಧದ ಭಯವನ್ನು ಹೆಚ್ಚಿಸಿದೆ. ಇದು ಅನಿಲದ ವೆಚ್ಚವನ್ನು ಒಳಗೊಂಡಂತೆ ಬಹುವಿಧದ ಪರಿಣಾಮವನ್ನು ಬೀರಬಹುದು. ಅಡುಗೆ ಅನಿಲದ ಬೆಲೆಗಳನ್ನು ಪರಿಷ್ಕರಿಸಿದಾಗ ಏಪ್ರಿಲ್ ವೇಳೆಗೆ ಈ ಪರಿಣಾಮವು ಕಾಣಿಸಿಕೊಳ್ಳಬಹುದು.

ಇನ್ನು ಇವೆಲ್ಲದರ ನಡುವೆ ಸಬ್ಸಿಡಿ ಹಣ ಗ್ರಾಹಕರ ಖಾತೆಗೆ ಬೀಳುವುದೂ ಸ್ಥಗಿತಗೊಂಡಿದೆ. ಕೊರೊನಾ ಮೊದಲನೇ ಅಲೆಯ ಸಮಯದಲ್ಲಿ ಅಂದರೆ, ಕಳೆದ ವರ್ಷದ ಮಾರ್ಚ್/ಏಪ್ರಿಲ್ ತಿಂಗಳವರೆಗೂ ಸಬ್ಸಿಡಿ ಹಣ ಅಕೌಂಟಿಗೆ ಬೀಳುತ್ತಿತ್ತು. ಇತ್ತೀಚೆಗೆ ಗ್ರಾಹಕರೊಬ್ಬರ ಟ್ವೀಟ್ ಒಂದಕ್ಕೆ ಪೆಟ್ರೋಲಿಯಂ ಇಲಾಖೆ ಉತ್ತರವನ್ನು ನೀಡಿದೆ.

ಸಿ.ಎಲ್. ಶರ್ಮಾ ಎನ್ನುವವರು ಹಿಂದಿಯಲ್ಲಿ MoPNG e-Seva ಅಕೌಂಟ್ ಅನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. "ಎಲ್‌ಪಿಜಿಯ ಮೇಲಿನ ಸಬ್ಸಿಡಿಯನ್ನು ಮೋದಿ ಸರ್ಕಾರ ರದ್ದುಗೊಳಿಸಿದೆಯೇ ಎಂದು ನಾವು ಮತ್ತೊಮ್ಮೆ ತಿಳಿಯಲು ಬಯಸುತ್ತೇವೆ. ಯಾಕೆಂದರೆ ಕಳೆದ 18 ತಿಂಗಳಲ್ಲಿ ನಮ್ಮ ಬ್ಯಾಂಕ್ ಅಕೌಂಟಿಗೆ ಒಂದು ಪೈಸೆ ಕೂಡಾ ಸಬ್ಸಿಡಿ ಬಂದಿಲ್ಲ, ಆದರೆ ಗ್ಯಾಸ್ ಏಜೆನ್ಸಿ ಸಬ್ಸಿಡಿ ಸಿಲಿಂಡರ್ ಎಂದು ವೋಚರ್ ನಲ್ಲಿ ಬರೆಯುತ್ತಿದೆ" ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ಪೆಟ್ರೋಲಿಯಂ ಇಲಾಖೆ ನೀಡಿದ ಉತ್ತರ ಹೀಗಿದೆ, "ಪ್ರಿಯ ಗ್ರಾಹಕರೇ, ಸಬ್ಸಿಡಿ ನೀಡುವುದನ್ನು ಈಗಿನವರೆಗೂ ನಿಲ್ಲಿಸಲಾಗಿಲ್ಲ. ಆದರೆ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ. ಡಿಬಿಟಿಎಲ್ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್ ಫಾರ್ ಎಲ್‌ಪಿಜಿ ಕನ್ಸೂಮರ್) 2014ರ ಸ್ಕೀಂ ಪ್ರಕಾರ, 'ಸಬ್ಸಿಡಿ ಸಿಲಿಂಡರ್' ಮತ್ತು 'ಸಬ್ಸಿಡಿ ರಹಿತ ಸಿಲಿಂಡರಿನ ನಾಲ್ಕನೇ ಒಂದು ಭಾಗವನ್ನು ವಿವಿಧ ಮಾರುಕಟ್ಟೆಗೆ ಅನ್ವಯವಾಗುವಂತೆ ಸಬ್ಸಿಡಿ ನೀಡಲಾಗುತ್ತಿದೆ" ಎಂದು ಇಲಾಖೆ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದೆ.

Recommended Video

   ಯುದ್ಧದ ಆತಂಕದಲ್ಲಿ ಉಕ್ರೇನ್ ನಿಂದ ಭಾರತಕ್ಕೆ ಮರಳಿದ 242 ಭಾರತೀಯರು | Oneindia Kannada
   English summary
   LPG price update: Cost of cooking gas may double from April, Why Reason Here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X