ಜೂ.16ರಿಂದ ಹೊಸ ಎಲ್‌ಪಿಜಿ ಸಂರ್ಪಕ ದರ ಏರಿಕೆ
ನವದೆಹಲಿ, ಜೂನ್ 16: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರ ಪರಿಣಾಮ ಭಾರತದಲ್ಲೂ ಕಂಡುಬಂದಿದೆ. ನಾಲ್ಕು ತಿಂಗಳ ಬಳಿಕ ಇಂಧನ ದರ ಪರಿಷ್ಕರಣೆ ಮಾಡಿದರೂ ಮತ್ತೆ ತೈಲ ಉತ್ಪನ್ನಗಳ ದರ ಸ್ಥಿರವಾಗಿದೆ. ಆದರೆ, ಅಡುಗೆ ಅನಿಲ ಸಿಲಿಂಡರ್ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಈಗ ಹೊಸ ಎಲ್‌ಪಿಜಿ ಸಂರ್ಪಕ ದರ ಏರಿಕೆ ಮಾಡಲಾಗಿದೆ.
ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗದಿದ್ದರೂ, ವಾಣಿಜ್ಯ ಬಳಕೆಯ ಸಿಲಿಂಡರ್‌ನ ಬೆಲೆಗಳನ್ನು ಸತತವಾಗಿ ಪ್ರತಿ ತಿಂಗಳ ಮೊದಲ ದಿನ ಏರಿಕೆ ಮಾಡಲಾಗುತ್ತಿದೆ.
ಜಾಗತಿಕ ಅನಿಲ ಬಿಕ್ಕಟ್ಟಿನಿಂದಾಗಿ ಅಡುಗೆ ಅನಿಲಗಳ ಬೆಲೆಗಳು ಏರಿಕೆ ಆಗುವ ಸಾಧ್ಯತೆ ಇದೆ. ಜಾಗತಿಕ ಬಿಕ್ಕಟ್ಟಿನೊಂದಿಗೆ, ಸಿಎನ್‌ಜಿ, ಪಿಎನ್‌ಜಿ ಮತ್ತು ವಿದ್ಯುತ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದು ಸಾರಿಗೆ ವೆಚ್ಚ ಮತ್ತು ಕೈಗಾರಿಕೆಗಳ ಕಾರ್ಯಾಚರಣೆಯ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಸರ್ಕಾರದ ರಸಗೊಬ್ಬರ ಸಬ್ಸಿಡಿ ಬಿಲ್ ಕೂಡ ಏರಿಕೆ ಕಾಣಬಹುದು. ಈ ಎಲ್ಲಾ ಅಂಶಗಳ ನೇರ ಪರಿಣಾಮವನ್ನು ಗ್ರಾಹಕರು ಎದುರಿಸಬಹುದು. ರಷ್ಯಾ ಹಾಗೂ ಉಕ್ರೇನ್ ನಡುವಿನ ಬಿಕ್ಕಟ್ಟು ಇಂಧನ ಪೂರೈಕೆಯನ್ನು ಅಡ್ಡಿಯಾಗಿದೆ. ಕೋವಿಡ್ -19 ಸಾಂಕ್ರಾಮಿಕದ ಪರಿಣಾಮ ಜಾಗತಿಕ ಆರ್ಥಿಕತೆ ಕುಸಿತ ಕಂಡರೂ ಕ್ರಮೇಣ ಚೇತರಿಸಿಕೊಳ್ಳುತ್ತಿದೆ.

ಹೊಸ ಕನೆಕ್ಷನ್ ಪಡೆಯುವ ಮುನ್ನ
ತೈಲ ಮಾರುಕಟ್ಟೆ ಕಂಪನಿಗಳು ಇತ್ತೀಚಿಗೆ ಬೆಲೆ ಪರಿಷ್ಕರಣೆ ಮಾಡಿದ್ದು, ಜೂನ್ 16 ರಿಂದ ಹೊಸ ದರಗಳು ಜಾರಿಗೆ ಬರಲಿದೆ. ಹೊಸ ಎಲ್‌ಪಿಜಿ ಸಂಪರ್ಕಗಳ ಮೇಲಿನ ಭದ್ರತಾ ಠೇವಣಿಯನ್ನು 750 ರೂ.ಗಳಷ್ಟು ಹೆಚ್ಚಿಸಿವೆ. ಹೀಗಾಗಿ, ಹೊಸ ಬೆಲೆ ಪ್ರತಿ ಸಂಪರ್ಕಕ್ಕೆ 2,200 ರೂ ಆಗಲಿದೆ. ಇದಕ್ಕೂ ಮುನ್ನ ಪ್ರತಿ ಹೊಸ ಸಂಪರ್ಕಕ್ಕೆ 1450 ರೂ ಪಾವತಿಸಬೇಕಾಗಿತ್ತು.

ಎರಡು ಸಿಲಿಂಡರ್ ಹೊಸ ಕನೆಕ್ಷನ್ ದರ
ಇದಲ್ಲದೆ, ಗ್ರಾಹಕರು ಹೊಸ ಸಂಪರ್ಕವನ್ನು ತೆಗೆದುಕೊಳ್ಳುವಾಗ ಎರಡು ಸಿಲಿಂಡರ್‌ಗಳನ್ನು ತೆಗೆದುಕೊಳ್ಳಲು 4,400 ರೂ ಭದ್ರತಾ ಠೇವಣಿ ಮಾಡಬೇಕಾಗುತ್ತದೆ. ಅಂದರೆ ತಲಾ 14.2 ಕೆ.ಜಿ ತೂಕದ ಎರಡು ಸಿಲಿಂಡರ್‌ಗಳನ್ನು ತೆಗೆದುಕೊಂಡರೆ ಗ್ರಾಹಕರು 1500 ರೂಪಾಯಿ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಪೈಪ್ ಮತ್ತು ಪಾಸ್‌ಬುಕ್ ಬೆಲೆ
ಎಲ್‌ಪಿಜಿ ಬೆಲೆಗಳ ಜೊತೆಗೆ ಗ್ಯಾಸ್ ರೆಗ್ಯುಲೇಟರ್‌ಗಳ ಬೆಲೆಯೂ ಏರಿಕೆಯಾಗಿದೆ. ಗ್ರಾಹಕರು ನಿಯಂತ್ರಕವನ್ನು ಪಡೆಯಲು ರೂ 250, ಹಿಂದಿನ 150 ಮೊತ್ತವನ್ನು ಪಾವತಿಸಬೇಕಾಗುತ್ತದೆ. 5 ಕೆಜಿ ಸಿಲಿಂಡರ್‌ಗೆ 800 ರೂಪಾಯಿ ಬದಲು 1150 ರೂಪಾಯಿಯನ್ನು ಗ್ರಾಹಕರು ಭದ್ರತಾ ಹಣವಾಗಿ ಪಾವತಿಸಬೇಕಾಗುತ್ತದೆ. ಪ್ರತಿ ಹೊಸ ಸಂಪರ್ಕದೊಂದಿಗೆ ಬರುವ ಪೈಪ್ ಮತ್ತು ಪಾಸ್‌ಬುಕ್‌ಗೆ ಕ್ರಮವಾಗಿ 150 ಮತ್ತು 25 ರೂ.
Recommended Video

ಗೃಹಬಳಕೆಯ ಅಡುಗೆ ಅನಿಲ ಎಲ್‌ಪಿಜಿ ದರ
ಗೃಹಬಳಕೆಯ ಅಡುಗೆ ಅನಿಲ ಎಲ್‌ಪಿಜಿ ದರವನ್ನು ತಿಂಗಳಲ್ಲಿ ಎರಡು ಬಾರಿ ದರ ಏರಿಕೆ ಮಾಡಲಾಗುತ್ತದೆ. ಈ ಹಿಂದಿನ ಬೆಲೆ ಪರಿಷ್ಕರಣೆಯಂತೆ ಪ್ರತಿ ಸಿಲಿಂಡರ್‌ಗೆ 3.50 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ತಿಂಗಳ ಎರಡನೇ ದರ ಏರಿಕೆಯಾಗಿದೆ. ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಸಬ್ಸಿಡಿ ರಹಿತ ಎಲ್‌ಪಿಜಿ ಈಗ ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿ ಸಿಲಿಂಡರ್‌ಗೆ 1,101 ರೂ.ಆಗಿದೆ. ಭಾರತದ ಪ್ರಮುಖ ನಗರಗಳ ಸಿಲಿಂಡರ್ ಬೆಲೆ ತಿಳಿಯಲು ಕ್ಲಿಕ್ ಮಾಡಿ












Click it and Unblock the Notifications