ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಬಲೆಗೆ ಬಿದ್ದ ಐವರು ಹೊಟ್ಟೆಬಾಕರು

By Mahesh
|
Google Oneindia Kannada News

ಬೆಂಗಳೂರು, ಜೂ.22: ಸರ್ಕಾರಿ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಲೋಕಾಯುಕ್ತಸಂಸ್ಥೆ ಶುಕ್ರವಾರ ಭರ್ಜರಿ ಬೇಟೆಯಾಡಿದೆ. ಒಬ್ಬ ಐಎಎಸ್ ಅಧಿಕಾರಿ ಹಾಗೂ ನಾಲ್ವರು ಭಾರಿ ಕುಳಗಳು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಶುಕ್ರವಾರ ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ದಾಳಿ ಲೋಕಾಯುಕ್ತ ಎಸ್ಪಿ ಶಿವಶಂಕರ್ ನೇತೃತ್ವದಲ್ಲಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವಿವಿಧ ಇಲಾಖಾ ಅಧಿಕಾರಿಗಳ ಮನೆ, ಕಚೇರಿಯಿಂದ ಮಹತ್ವದ ದಾಖಲೆ ಪತ್ರಗಳು, ಬ್ಯಾಂಕ್ ಖಾತೆ ವಿವರ, ಬೇನಾಮಿ ಆಸ್ತಿ ವಿವರ, ನಗದು, ನಗನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಲ್ವರು ಡಿವೈಎಸ್ಪಿಗಳನ್ನೊಳಗೊಂಡ ಸುಮಾರು 60ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು. ಲೋಕಾಯುಕ್ತ ದಾಳಿಗೆ ಸಿಲುಕಿದವರಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿ ಐಎಎಸ್ ಆಧಿಕಾರಿ ಜಮೀರ್ ಪಾಷಾ, ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮೃತ್ಯುಂಜಯ ಬುರ್ಚಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣರಾವ್ ಪೇಶ್ವೆ, ಯಲಹಂಕ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕೆಂಚೇಗೌಡ ಹಾಗೂ ಬೆಸ್ಕಾಂ ಲೆಕ್ಕ ನಿಯಂತ್ರಣಾಧಿಕಾರಿ ನಾಗರಾಜ್ ಅವರು ಪ್ರಮುಖರು. ಒಟ್ಟು ಐವರಿಂದ 11 ಕೋಟಿಗೂ ಅಧಿಕ ಮೊತ್ತ ಸಿಕ್ಕಿದೆ. * ನಾಗರಾಜ್, ಕೋಲಾರ: 1 ಕೋಟಿ 41 ಲಕ್ಷ ,ಕೆಂಚೇಗೌಡ, ಯಲಹಂಕ : 1 ಕೋಟಿ 21 ಲಕ್ಷ ಉಳಿದವರ ಮೊತ್ತ ಕೆಳಗಿನಂತಿದೆ:

ಸೈಯದ್ ಜಮೀರ್ ಪಾಷಾ : 3 ಕೋಟಿ 44 ಲಕ್ಷ ರು
* ರಿಚ್ಮಂಡ್ ಟೌನ್ ನ ವೆಲ್ಲಿಂಗ್ಟನ್ ರಸ್ತೆಯಲ್ಲಿ 25 ಲಕ್ಷ ರು ಮೌಲ್ಯದ ಮನೆ.
* ಹಾಜಿ ಸಯ್ಯದ್ ಮುನೀರ್ ಹೆಸರಿನಲ್ಲಿ 25 ಲಕ್ಷ ರು ಮೌಲ್ಯದ ಮತ್ತೊಂದು ಮನೆ.
* ಕಮರ್ಷಿಯಲ್ ಲ್ಯಾಕ್ಸ್ ಟೌನ್ ನಲ್ಲಿ 1.15 ಕೋಟಿ ರು ಮೌಲ್ಯದ ಫ್ಲಾಟ್.
* ಕೋರಮಂಗಲದಲ್ಲಿ 65 ಲಕ್ಷದ ಮೌಲ್ಯದ ಮೆಟ್ರೋ ಪಾಲಿಟನ್ ಫ್ಲಾಟ್.
* ಮಾಗಡಿಯಲ್ಲಿ 10 ಲಕ್ಷ ರು ಮೌಲ್ಯದ ಮನೆ
* 10 ಲಕ್ಷ ವಿನ್ನರ್ ಇಂಟರ್ ನ್ಯಾಷನಲ್ ಸ್ಕೂಲ್
* 10 ಲಕ್ಷ ಮೌಲ್ಯದ ಮೌಲಾನಾ ಆಜಾದ್ ವಸತಿ ಶಾಲೆ.
* ರಾಮನಗರದಲ್ಲಿ 20 ಲಕ್ಷ ಮೌಲ್ಯದ ಎಂಎಂಯು ಫಾರ್ಮಸಿ ಕಾಲೇಜು
* 5 ಲಕ್ಷ ಮೌಲ್ಯದ ಎಂಎಂಯು ಹೈಸ್ಕೂಲ್
* ಮಾಗಡಿಯ ಮೋಟಗಾನಹಳ್ಳಿಯಲ್ಲಿ 25 ಎಕರೆ ಕೃಷಿ ಭೂಮಿ (5 ಲಕ್ಷ ರು ಮೌಲ್ಯ)
* 4.50 ಲಕ್ಷ ರು ಮೌಲ್ಯದ ಸ್ಯಾಂಟ್ರೋ ಕಾರು
* 19 ಲಕ್ಷ ರು ಮೌಲ್ಯದ ಸ್ಕೋಡಾ ಕಾರು
* 1.25 ಲಕ್ಷ ರು ನ ಬೈಕು
* ಒಟ್ಟು 7 ಬ್ಯಾಂಕ್ ಖಾತೆ 1 ಲಾಕರ್ ಇದೆ.

ಎನ್ ಲಕ್ಷ್ಮಣರಾವ್ ಪೇಶ್ವೆ
: 4 ಕೋಟಿ 11 ಲಕ್ಷ
* 26 ಲಕ್ಷ ರೂ ಮೌಲ್ಯದ ಜಯನಗರದ ಒಂದು ಫ್ಲಾಟ್
* 35 ಲಕ್ಷ ರು ಮೌಲ್ಯದ ಮಂತ್ರಿ ಗಾರ್ಡನ್ ಜಯನಗರದಲ್ಲಿ ಫ್ಲಾಟ್
* 42 ಲಕ್ಷ ರು ಮೌಲ್ಯದ ಜೈನ್ ಪ್ರಕೃತಿ ಅಪಾರ್ಟ್ಮೆಂಟ್ ನಲ್ಲಿ ಒಂದು ಫ್ಲಾಟ್
* 15 ಲಕ್ಷ ರು ಮೌಲ್ಯದ ಬಿಎಚ್ ಇಎಲ್ ಕೆಂಗೇರಿಯಲ್ಲಿ ತಲಾ ಎರಡು ಮನೆ
* 1 ಕೋಟಿ 48 ಲಕ್ಷ ರು ಮೌಲ್ಯದ ಹೆಣ್ಣೂರು-ಬಾಣಸವಾಡಿಯಲ್ಲಿ 4 ನಿವೇಶನ
* 16 ಲಕ್ಷ 84 ಸಾವಿರ ರು ಮೌಲ್ಯದ ಹೊರಮಾವು, ಕೆಆರ್ ಪುರಂನಲ್ಲಿ ಒಂದು ನಿವೇಶನ
* ಮೂರು ನಿಶ್ಚಿತ ಠೇವಣಿಯಲ್ಲಿ 32,58,953 ರು.
* ಉಳಿತಾಯ ಬ್ಯಾಂಕ್ ಖಾತೆಯಲ್ಲಿ 92,76,150 ರು, ನಗದು
* ದಾಳಿ ವೇಳೆ ಸಿಕ್ಕ ನಗದು 4,78,330 ರು ಪತ್ತೆಯಾಗಿದೆ.
* 4 ಲಕ್ಷ ರು ಮೌಲ್ಯದ 4 ಕೆಜಿ ಬೆಳ್ಳಿ, ನಾಲ್ಕೂವರೆ ಲಕ್ಷ ಮೌಲ್ಯದ ವಜ್ರಗಳು
* ಹೋಂಡಾ ಗೆಟ್ಜ್, ಕೈನಟಿಕ್ ಹೋಂಡಾ, ಹೋಂಡಾ ಸಿಬಿಆರ್ ವಾಹನಗಳಿದೆ.
* 365 ಗ್ರಾಂ ಬಂಗಾರ, 24 ಸಾವಿರ ಶ್ರೀಲಂಕಾ ಕರೆನ್ಸಿ, 3057 ಅಮೆರಿಕನ್ ಡಾಲರ್ ಸಿಕ್ಕಿದೆ

ಮೃತ್ಯುಂಜಯ ಬುರ್ಚಿ : 82 ಲಕ್ಷ ರು
* 65 ಲಕ್ಷ ರು ಮೌಲ್ಯದ ನಾಗರಬಾವಿ 3 ನೇ ಬ್ಲಾಕಿನಲ್ಲಿ 1 ಮನೆ
* ಚಂದ್ರಾಲೇಔಟ್ ನಲ್ಲಿ 50 ಲಕ್ಷ ರು ಮೌಲ್ಯದ ನಿವೇಶನ
* ಕೆಂಗೇರಿಯಲ್ಲಿ 1 ಫಾರ್ಮ್ ಹೌಸ್ ಪತ್ತೆಯಾಗಿದೆ.

ಇದಲ್ಲದೆ ಎಲ್ಲಾ ಅಧಿಕಾರಿಗಳ ಮನೆಯಲ್ಲಿ ಅನಾಮಧೇಯ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಗಳು, ಭೂ ವ್ಯವಹಾರ, ನಗದು, ಒಡವೆಗಳು, ಆಸ್ತಿ ಪಾಸ್ತಿ ಪತ್ರಗಳು ಸಿಕ್ಕಿದೆ. ಲೋಕಾಯುಕ್ತ ಎಸ್ಪಿ ಶಿವಶಂಕರ್, ಡಿವೈಎಸ್ಪಿಗಳಾದ ಗಿರೀಶ್, ಪ್ರಸನ್ನರಾಜು, ಅಹ್ಮದ್, ಪಾಲಾಕ್ಷಯ್ಯ, ಮಂಜುನಾಥ್ ಸೇರಿದಂತೆ 50 ಮಂದಿ ಸಿಬ್ಬಂದಿ ತಂಡ ಯಶಸ್ವಿ ದಾಳಿ ನಡೆಸಿದರು. (ಗಮನಿಸಿ: ಆಸ್ತಿ ಮೌಲ್ಯ ಅಪೂರ್ಣ..ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮೌಲ್ಯಮಾಪನ ಜಾರಿಯಲ್ಲಿದೆ)

English summary
Karnataka Lokayukta raids on government officials home and office in 5 places across the State which yields assets worth crores. The officials are 1) Syed Zameer pasha, Secretary Karnataka Minority Commission 2) Lakshman Rao Peshwe, MD Irrigation Dept 3) Mruthyunjaya Burji addl secretary, PWD 4) Kenche Gowda Police Inspector, Yelahanka 5) Nagaraj, Accounts officer BESCOM Kolar. The raids conducted by a team lead by SP Shivashankar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X