ಎಚ್ಚರಾ! ಯಡಿಯೂರಪ್ಪ 'ಮಾನವ ಬಾಂಬ್' ಇದ್ದಂಗೆ

ಪಕ್ಷ ಯಡಿಯೂರಪ್ಪನವರಿಂದ ಬಲಿದಾನ ಬಯಸುತ್ತಿದೆಯೇ?: ಕಳೆದ ವಾರ ಮುಂಬೈನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದ ಯಡಿಯೂರಪ್ಪ ಅವರ ಮನವೊಲಿಸಿ ಸಭೆಗೆ ಕರೆಸಿಕೊಂಡಿದ್ದು ಮತ್ತು ಸಂಜಯ್ ಜೋಷಿ ಅವರಿಂದ ರಾಜೀನಾಮೆ ಪಡೆದಿದ್ದು ಒಳ್ಳೆಯ ಬೆಳವಣಿಗೆಯಲ್ಲ.
ಗಡ್ಕರಿ ಗಮನಿಸಬೇಕಾದ ಸಂಗತಿಯೆಂದರೆ ಅವರ ಮುಂದಿನ ಹಾದಿ ನೆಲಬಾಂಬುಗಳಿಂದಲೇ ತುಂಬಿದೆ. ಹೆಚ್ಚೂಕಮ್ಮಿಯಾದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯದಲ್ಲಿ ಠಾಕ್ರೆ ಕಿಡಿಕಾರಿದ್ದಾರೆ.
ಆದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಭೆಗೆ ಹಾಜರಾಗಿದ್ದನ್ನು ಠಾಕ್ರೆ ಸ್ವಾಗತಿಸಿದ್ದಾರೆ. ಇದೇ ವೇಳೆ, ಉಪನಗರ ಬಾಂದ್ರಾದಲ್ಲಿರುವ ಮತೋಶ್ರಿ ನಿವಾಸದಲ್ಲಿ ಠಾಕ್ರೆಯನ್ನು ನಿತೀನ್ ಗಡ್ಕರಿ ಶನಿವಾರ ಭೇಟಿಯಾಗಿದ್ದರು. ಇದು ಗಡ್ಕರಿ ಅವರ ಸೌಜನ್ಯದ ಭೇಟಿಯಾಗಿದೆ ಎಂದು ಬಿಜೆಪಿ ತಿಳಿಸಿದೆ.
ಬಾಳ್ ಠಾಕ್ರೆ ತಮ್ಮನ್ನು 'ಮಾನವ ಬಾಂಬ್' ಎಂದು ಬಣ್ಣಿಸಿರುವುದಕ್ಕೆ ಯಡಿಯೂರಪ್ಪ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆಎಸ್ ಈಶ್ವರಪ್ಪ ಹೀಗೆ ಪ್ರತಿಕ್ರಿಯಿಸಿದ್ದಾರೆ - ಹೌದು, ಯಡಿಯೂರಪ್ಪನೋರು ಬಾಂಬ್. ಈ ಬಾಂಬನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಧೂಳೀಪಟ ಮಾಡುತ್ತೇವೆ. ಬಿಜೆಪಿಯ ಶಕ್ತಿ ಹೆಚ್ಚಿಸಲು ಬಳಸಿಕೊಳ್ಳುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಕ್ಷಣ ಪತ್ರಕರ್ತರೊಬ್ಬರು 'ಹಾಗಾದರೆ ಪಕ್ಷ ಯಡಿಯೂರಪ್ಪನವರಿಂದ ಬಲಿದಾನ ಬಯಸುತ್ತಿದೆಯೇ?' ಎಂದು ಕೇಳಿದ ಪ್ರಶ್ನೆಗೆ ಈಶ್ವರಪ್ಪನವರು ಕಣ್ ಮಿಟುಕಿಸಿದರು !











Click it and Unblock the Notifications