ಆಸ್ತಿ ತೆರಿಗೆ ವಿನಾಯತಿ ವಿಸ್ತರಣೆ : ಮೇಯರ್ ವೆಂಕಟೇಶ್
ಬೆಂಗಳೂರು,
ಮೇ.1: ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿಸುವಲ್ಲಿ ನಗರದ ಸಾರ್ವಜನಿಕರು ಉತ್ಸಾಹ ತೋರಿಸುತ್ತಿದ್ದಾರೆ. ಆನ್ ಲೈನ್ ಮೂಲಕ, ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸುಲಭವಾಗಿ ತೆರಿಗೆ ಕಟ್ಟುವ ವಿಧಾನ ಜನಪ್ರಿಯತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಶೇ.5ರ ರಿಯಾಯಿತಿಯನ್ನು ಮೇ ತಿಂಗಳ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಹೊಸ ಮೇಯರ್ ವೆಂಕಟೇಶ ಮೂರ್ತಿ ಘೋಷಿಸಿದ್ದಾರೆ. id="toptextpromo">ಮಹಾನಗರ
ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಏ.1 ರಿಂದ ಆಸ್ತಿ ತೆರಿಗೆ ಪಾವತಿಗೆ ಸೂಚಿಸಲಾಗಿತ್ತು, ಈ ತಿಂಗಳ ಅಂತ್ಯದವರೆಗೆ ತೆರಿಗೆ ಪಾವತಿಸಿದಲ್ಲಿ ಶೇ.5ರಷ್ಟು ರಿಯಾಯಿತಿ ಘೋಷಿಸಲಾಗಿತ್ತು. ಇದರಿಂದ ಪಾಲಿಕೆಗೆ ಏ..28ರ ವೇಳೆಗೆ 410 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹವಾಗಿದೆ. 4.75 ಲಕ್ಷ ಮನೆ ಮಾಲೀಕರು ತೆರಿಗೆ ಪಾವತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೂ ಒಂದು ತಿಂಗಳ ಕಾಲ ರಿಯಾಯಿತಿ ನೀಡುವುದು ಎಂದರು. id='are-slot-1' class='oiad oi-axt oiadv'> id='top-searched-articles'>ಏಪ್ರಿಲ್
ತಿಂಗಳು ಮಧ್ಯಮ ವರ್ಗದವರಿಗೆ ಮಕ್ಕಳ ಶಾಲಾ ಶುಲ್ಕದ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಆಸ್ತಿ ತೆರಿಗೆ ಪಾವತಿಗೆ ಮೇ ತಿಂಗಳವರೆಗೆ ವಿಸ್ತರಣೆ ಮಾಡುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದರು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:http://bbmp.gov.in/











Click it and Unblock the Notifications