ಇನ್ಫೋಸಿಸ್: ನೌಕರರಿಗೆ ಮತ್ತೊಂದು ಛಡಿಯೇಟು

ಅಷ್ಟೇ ಅಲ್ಲ- 2011ರ ಕೊನೆಯ ತ್ರೈಮಾಸಿಕದಲ್ಲಿ variable pay ಪ್ರಮಾಣದ ಮೇಲೂ ಭಾರಿ ಕತ್ತರಿ ಪ್ರಯೋಗಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದಿರುವ ಉದ್ಯೋಗಿಗಳು ಹಸಿರು ಪ್ರದೇಶಗಳತ್ತ ಗುಳೆಹೋಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಇನ್ಫಿ ಕ್ಯಾಂಪಸ್ಸಿನಲ್ಲಿ ಅದಾಗಲೇ ಗುಸುಗುಸು ಆರಂಭವಾಗಿದೆ.
ಭಾರತದ ಎರಡನೆಯ ಅತಿ ದೊಡ್ಡ ಐಟಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇನ್ಫಿ, ಜನವರಿ-ಮಾರ್ಚ್ 2012ರ ತ್ರೈಮಾಸಿಕದಲ್ಲಿ ನಿರೀಕ್ಷಿತ ಲಾಭ ಕಾಣದಿರುವುದರಿಂದ ಶೇ. 70ರಷ್ಟು ಮಾತ್ರವೇ variable pay ಪಡೆಯಲಿದ್ದಾರೆ. ಅಂದರೆ ಶೇ. 30ರಷ್ಟು ಭಾರಿ ಕಡಿತಕ್ಕೊಳಗಾಗಿದ್ದಾರೆ.
ಟೈಟಲ್ ಟ್ಯಾಗ್ ಹೊತ್ತ 300 ಮಂದಿ ಟಾಪ್ ಉದ್ಯೋಗಿಗಳು ಇದರಿಂದ ಸಂತ್ರಸ್ತರಾಗಲಿದ್ದಾರೆ. ಆತಂಕದ ವಿಷಯವೆಂದರೆ ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಫಲಿತಾಂಶದಲ್ಲೂ ಇದೇ ಸಿಬ್ಬಂದಿಗೆ ಶೇ. 50ರಷ್ಟು variable pay ಕಟ್ ಮಾಡಲಾಗಿತ್ತು.












Click it and Unblock the Notifications