ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇನ್ಫೋಸಿಸ್ ಕ್ಯಾಂಪಸ್ಸಿನಲ್ಲಿ ಎಲ್ಲವೂ ಸರಿಯಿಲ್ಲ'

By Srinath
|
Google Oneindia Kannada News

infosys-employees-pay-cut-all-is-not-well
ಬೆಂಗಳೂರು, ಏ.21: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ. ಕಳೆದೊಂದು ವರ್ಷದಿಂದ ಕಂಪನಿ Loss-making ನಲ್ಲಿದೆ. ಹೂಡಿಕೆದಾರರು, ಷೇರುದಾರರು ಮತ್ತು ವಿಶ್ಲೇಷಕರಿಗೆ ಇದು ನುಂಗಲಾರದ ತುತ್ತಾಗಿದೆ. ಹಾಗಾಗಿ, ಮೇಲಿನ ಮೂರೂ ವರ್ಗದವರನ್ನು ಸಂತುಷ್ಟಗೊಳಿಸಲು ಕಮ್ಮಾರನ ಬಡಿಗಲ್ಲು (anvil) ಮೇಲೆ ಇನ್ಫಿ ಕಂಪನಿ ಉದ್ಯೋಗಿಗಳ ಕೈಕಾಲು ಕಟ್ಟಿಟ್ಟಿದ್ದಾರೆ.

ವೆಚ್ಚ ನಿಯಂತ್ರಣ ಸಾಧಿಸುವುದೆಂದರೆ ಸಂಬಳ ಕಡಿತ ಎಂಬುದು ಇನ್ಫಿ CEO ಮಂತ್ರವಾಗಿದೆ. ಅಂದಹಾಗೆ, ಸಾಫ್ಟ್ ವೇರ್ ಕಂಪನಿಗಳಲ್ಲಿ ಒಟ್ಟಾರೆ ಖರ್ಚಿನ ಪ್ರಮಾಣದಲ್ಲಿ ಶೇ. 25ರಷ್ಟು ನೌಕರರ ಸಂಬಳಿಗೆ ವಿನಿಯೋಗವಾಗುತ್ತದೆ rather ವೃಥಾ ಖರ್ಚಾಗುತ್ತದೆ.

ಉಗ್ರ 'ಗೋಡೆ'ಬರಹಗಳು: 2008ರಲ್ಲಿಯೂ ಹೀಗೇ ಆಗಿತ್ತು. ಈಗ ಮತ್ತೆ ... ಇದರಿಂದ ಉದ್ಯೋಗಿಗಳು ಎಷ್ಟು ನಿರಾಶೆಗೊಂಡಿದ್ದಾರೆ ಅಂದರೆ ಇಂಟರ್ ನೆಟ್ ಸಾಮಾಜಿಕ ತಾಣಗಳಲ್ಲಿ ತಮ್ಮ ಕೋಪತಾಪವನ್ನು ಉಗ್ರವಾಗಿ ಹೊರಹಾಕುತ್ತಿದ್ದಾರೆ. ಅಸಂತುಷ್ಟ ಉದ್ಯೋಗಿಗಳು ಫೇಸ್ ಬುಕ್, ಈಮೇಲ್ ... ಹೀಗೆ ಸಿಕ್ಕ ಸಿಕ್ಕ ಅಂತರ್ಜಾಲ ತಾಣಗಳಲ್ಲಿ ಇಂತಹುದೇ 'ಗೋಡೆ'ಬರಹಗಳು ರಾರಾಜಿಸುತ್ತಿವೆ.

ಸದ್ಯಕ್ಕೆ ಅಸಂತುಷ್ಟ ಉದ್ಯೋಗಿಗಳು ತಮ್ಮ ಕೋಪತಾಪ ಹೊರಹಾಕುತ್ತಿರಬಹುದು. ಆದರೆ ಕಾಲಾಂತರದಲ್ಲಿ ಕಂಪನಿಯ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಆಶಾಭಾವ ಕಂಪನಿಯ ಆಡಳಿತ ಮಂಡಳಿಯದ್ದು.

ಹಾಗೆಂದೇ, ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿ ವೃಂದಕ್ಕೆ ಮೊನ್ನೆ ಗುರುವಾರ ಮತ್ತು ಶುಕ್ರವಾರ ಈ ಬಗ್ಗೆ ಮನನ ಮಾಡಿಕೊಡಲಾಗಿದೆ. ಆದರೆ Job portal ಗಳ ಪ್ರಕಾರ ಇನ್ಫಿ ಉದ್ಯೋಗಿಗಳು ಭರ್ಜರಿ ಉದ್ಯೋಗ ಬೇಟೆಯಲ್ಲಿದ್ದಾರೆ. ಈ ಪ್ರಮಾಣ ಶೇ. 10ರಷ್ಟು ಹೆಚ್ಚಾಗಿದೆ.

ಇನ್ನು, ಕಂಪನಿಯ ಹಳೆಯ ಉದ್ಯೋಗಿಗಳ ಪ್ರಕಾರ ಎಲ್ಲ ಉದ್ಯೋಗಿಗಳಿಗೂ ಸಂಬಳ ಏರಿಕೆಯನ್ನು ಸ್ಥಗಿತಗೊಳಿಸುವುದು wrong decision. ಹಿರಿಯ ಸಿಬ್ಬಂದಿಗೆ ಮಾತ್ರ ಸ್ವಲ್ಪಮಟ್ಟಿಗೆ ಸಂಬಳ ಏರಿಕೆ ಕಡಿತಗೊಳಿಸಿದ್ದರೆ ಸಾಕಾದೀತು ಎನ್ನಲಾಗಿದೆ. 2008ರಲ್ಲಿ ಘಟಿಸಿದ್ದು ಜಾಗತಿಕ ವಿಷಯದ್ದಾಗಿತ್ತು.

ಆದರೆ ಈಗಿನದು ಕಂಪನಿಯ ಮಟ್ಟದಲ್ಲಾಗಿದೆ. ಇದಕ್ಕೆ ಉದ್ಯೋಗಿಗಳನ್ನು ಹೊಣೆಯಾಗಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಬಿಲಿಯನ್ ಡಾಲರ್ ಪ್ರಶ್ನೆ ಕಾಡುತ್ತಿದೆ. ಅನೇಕರು ಈ ಬಾರಿ ಕ್ಯಾಂಪಸ್ಸಿಗೆ ಗುಡ್ ಬೈ ಹೇಳುವುದು (attrition) ಖಚಿತ ಎಂಬುದು ಹಳಬರ ಅನಿಸಿಕೆ.

English summary
Infosys employees all set for variable pay cut. Infosys has told that there will be steep cuts to employees variable pay for the Jan-March quarter, risking an exodus of talent to greener pastures. It seems all is not well with the India's second-largest software exporter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X