IIT-H ಟೆಕ್ ಪದವೀಧರನಿಗೆ 35 ಲಕ್ಷ ಸಂಬಳ

ಪ್ರಸಕ್ತ ನೇಮಕ ಋತುವಿನಲ್ಲಿ IIT-Hನ 115 ವಿದ್ಯಾರ್ಥಿಗಳಿಗೆ ಉದ್ಯೋಗ ಭಾಗ್ಯ ಲಭಿಸಿದೆ. ಅಂದಹಾಗೆ ಇವರಲ್ಲಿ ಅನೇಕ ವಿದ್ಯಾರ್ಥಿಗಳು ಇನ್ನೂ ಮೊದಲ ಬಿಟೆಕ್ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನು ಕೆಲವರು ಪಿಜಿ ಮಾಡುತ್ತಿದ್ದಾರೆ. ಇವರ ಸಂಬಳ ವಾರ್ಷಿಕ 7 ಲಕ್ಷ ರು.
ಟೆಕ್ಕಿಗೆ ಫೇಸ್ ಬುಕ್ ಸಂಬಳ 65 ಲಕ್ಷ ರು.: ಮೊನ್ನೆ ಫೆಬ್ರವರಿಯಲ್ಲಿ IIT-Delhiಯ ಅಂಕುರ್ ದಹಿಯಾ ಎಂಬ ಟೆಕ್ಕಿಯನ್ನು ಸಾಮಾಜಿಕ ಅಂತರ್ಜಾಲ ತಾಣ ಫೇಸ್ ಬುಕ್ 65 ಲಕ್ಷ ರು. ಸಂಬಳಕ್ಕೆ ನೇಮಕ ಮಾಡಿಕೊಂಡಿತ್ತು.
ಹರಿಯಾಣಾದ ರೋಹ್ಟಕ್ ಮೂಲದ 21 ವರ್ಷದ ಅಂಕುರ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ. ಮುಂದಿನ ವರ್ಷ ಕೋರ್ಸ್ ಕಂಪ್ಲೀಟ್ ಮಾಡಿದ ಮೇಲೆ ಅಂಕುರ್ ದಹಿಯಾ ಕ್ಯಾಲಿಫೋರ್ನಿಯಾದ ಪಾಲೊ ಅಲ್ಟೋದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಂಕುರ್ ಅಖಿಲ ಭಾರತ IIT-JEE examನಲ್ಲಿ 56ನೇ ಸ್ಥಾನ ಪಡೆದಿದ್ದರು.
2004ರ ಫೆಬ್ರವರಿಯಲ್ಲಿ ಸ್ಥಾಪನೆಯಾದ ಫೇಸ್ ಬುಕ್ ಕಳೆದ ವರ್ಷ ಚೆನ್ನೈನ IIT-Chennai ವಿದ್ಯಾರ್ಥಿಯೊಬ್ಬನನ್ನು ಇದೇ ರೀತಿ ನೇಮಕ ಮಾಡಿಕೊಂಡಿತ್ತು. ಈ ಬಾರಿ ಇನ್ನೂ ಅನೇಕ ಟೆಕ್ಕಿಗಳನ್ನು ಭಾರತದ ಪ್ರತಿಷ್ಠಿತ IITಗಳಿಂದ ನೇಮಕ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.












Click it and Unblock the Notifications