ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕುಗಳಿಗೆ ಇನ್ಮುಂದೆ ವಾರಕ್ಕೆ ಎರಡುದಿನ ರಜೆ?

|
Google Oneindia Kannada News

SBI Groups
ಮುಂಬೈ, ಮಾ 7: ರಾಷ್ಟ್ರೀಕೃತ ಬ್ಯಾಂಕ್ ಗಳು ಇನ್ನು ಮುಂದೆ ವಾರಕ್ಕೆ ಐದು ದಿನ ಮಾತ್ರ ಕೆಲಸ ಮಾಡಲಿದೆ. ಬರುವ ಹಣಕಾಸು ವರ್ಷದಿಂದ ಅಂದರೆ ಏಪ್ರಿಲ್ 1, 2012 ರಿಂದ ಈ ಹೊಸ ಪದ್ಧತಿ ಜಾರಿಗೆ ಬರಲಿದೆ ಎನ್ನುತ್ತವೆ ಖಚಿತ ಮೂಲಗಳು.

ಮೊದಲಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಬ್ಯಾಂಕ್ ಗಳು ಬರುವ ತಿಂಗಳಿನಿಂದ ಈ ಪದ್ಧತಿ ಅಳವಡಿಸಿಕೊಳ್ಳಲು ಈಗಾಗಲೇ ನಿರ್ಧರಿಸಿದೆ. ಇಂಡಿಯನ್ ಬ್ಯಾಂಕ್ ಅಸೋಷಿಯೇಶನ್ (IBA) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಕೇಂದ್ರ ಸರಕಾರಕ್ಕೆ ಈ ನಿರ್ಧಾರದ ಅನುಮೋದನೆಗೆ ಕಳುಹಿಸಿ ಕೊಟ್ಟಿದೆ ಎನ್ನಲಾಗಿದೆ.

ಕೇಂದ್ರ ಸರಕಾರದ ಅಂತಿಮ ಅಂಕಿತ ನಿರೀಕ್ಷಿಸಲಾಗಿದ್ದು ಅನುಮೋದನೆ ಹೆಚ್ಚು ಕಮ್ಮಿ ಖಚಿತ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಅದಾದ ಮೇಲೆ ಬ್ಯಾಂಕ್ ತನ್ನ ಹೊಸ ಹಣಕಾಸು ವ್ಯವಹಾರದ (cash hours) ಸಮಯವನ್ನು ಪ್ರಕಟಿಸಲಿದೆ.

ಕೇಂದ್ರ ಸರಕಾರದ ಸ್ವಾಮ್ಯದ ಬಹಳಷ್ಟು ಕಛೇರಿಗಳು ವಾರಕ್ಕೆ ಐದು ದಿನ ಕೆಲಸ ಮಾಡುತ್ತಿವೆ. ರಾಜ್ಯ ಸರಕಾರ ವ್ಯಾಪ್ತಿಯ ಕಚೇರಿಗಳಿಗೆ ಎರಡನೇ ಶನಿವಾರ ರಜೆ ಇರುವುದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಬದಲಾವಣೆ ತರಲು ಬಹಳ ಹಿಂದೆಯೇ ಬ್ಯಾಂಕ್ ಅಸೋಷಿಯೇಶನ್ ಗಳು ರಿಸರ್ವ್ ಬ್ಯಾಂಕ್ ಗೆ ಮನವಿ ಸಲ್ಲಿಸಿದ್ದವು.

English summary
According to the bank sources, SBI and their subsidiary banks will work 5 days in a week. The new system is expected to be implemented from the new financial year i.e. effective from April 2012 onward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X