ಕಾಂಗೈಗೆ ರುದ್ರಭೂಮಿಯಾದ ಇಂದಿರಾ ಕರ್ಮಭೂಮಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಚುನಾವಣಾ Rally ನಡೆಸಿದ ರಾಹುಲ್ ಗಾಂಧೀ, ಅವರ ಸ್ವಂತ ಕ್ಷೇತ್ರದಲ್ಲೇ ಕಾಂಗ್ರೆಸ್ ಮಣ್ಣು ಮುಕ್ಕಿದ್ದು ದಿನೇದಿನೇ ಕ್ಷೀಣಿಸುತ್ತಿರುವ ಕಾಂಗ್ರೆಸ್ ಪಕ್ಷದ ಜನಪ್ರಿಯತೆಗೆ ಕನ್ನಡಿ ಹಿಡಿದಿದೆ.
ರಾಯ್ ಬರೇಲಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯ ಹಿನ್ನಡೆ ಅನುಭವಿಸುತ್ತಿದೆ. ಅಮೇಠಿ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದೆ. ರಾಯ್ ಬರೇಲಿ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧೀ ಮತ್ತು ಅಮೇಠಿ ಕ್ಷೇತ್ರವನ್ನು ರಾಹುಲ್ ಗಾಂಧೀ ಪ್ರತಿನಿಧಿಸುತ್ತಿದ್ದಾರೆ.
ಅಮೇಠಿ ಒಟ್ಟು ಐದು ವಿಧಾನಸಭಾ ಕ್ಷೇತ್ರವನ್ನು (ತಿಲೋಲಿ, ಸಲೋನ್, ಜಗದೀಶಪುರ್, ಗೌರಿಗಂಜ್ ಮತ್ತು ಅಮೇಠಿ) ಹೊಂದಿದೆ. 1980 ರಿಂದ ಕಳೆದ ಲೋಕಸಭಾ ಚುನಾವಣೆಯವರೆಗೆ ಒಂದು ಬಾರಿ ಮಾತ್ರ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಸೋತಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಂಜಯ್ ಗಾಂಧೀ, ರಾಜೀವ್ ಗಾಂಧೀ, ಸೋನಿಯಾ ಗಾಂಧೀ ಮತ್ತು ಈಗ ರಾಹುಲ್ ಗಾಂಧೀ ಎಂಪಿ ಆಗಿದ್ದಾರೆ.
ಇನ್ನು ರಾಯ್ ಬರೇಲಿ ಕ್ಷೇತ್ರ ಐದು ಅಸೆಂಬ್ಲಿ ಕ್ಷೇತ್ರವನ್ನು ಹೊಂದಿದೆ. ಬಚ್ಚರವಾನ್, ಹರಿಚಂದ್ಪುರ್, ರಾಯ್ ಬರೇಲಿ, ಸಾರೇನಿ ಮತ್ತು ಉಂಚಾಹಾರ್. 1951 ರಿಂದ ಇದುವರೆಗೆ ಎರಡು ಬಾರಿ ಮಾತ್ರ ಕಾಂಗ್ರೆಸ್ ಪಕ್ಷ ಈ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿತ್ತು. ಫಿರೋಜ್ ಗಾಂಧೀ, ಇಂದಿರಾಗಾಂಧಿ, ಅರುಣ್ ನೆಹರೂ ಮತ್ತು ಈಗ ಸೋನಿಯಾ ಗಾಂಧೀ ಈ ಕ್ಷೇತ್ರದಿಂದ ಆಯ್ಕೆಯಾದ ಸಂಸದೆ.
ಅಮೇಠಿ
1. ಅಮೇಠಿ - ಗಾಯತ್ರಿ ಪ್ರಸಾದ್, ಎಸ್ಪಿ- ಮುನ್ನಡೆ
2. ತಿಲೋನಿ - ಮಾಯಾಂಕೆಶ್ವರಶರ್ಮಾ, ಎಸ್ಪಿ - ಮುನ್ನಡೆ
3. ಸಲೋನ್ - ಆಶಾಕಿಶೋರ್, ಎಸ್ಪಿ- ಮುನ್ನಡೆ
4. ಜಗದೀಶಪುರ್ - ರಾಧೇ ಶ್ಯಾಮ್, ಕಾಂಗ್ರೆಸ್ - ಮುನ್ನಡೆ
5. ಗೌರಿಗಂಜ್ - ಲಭ್ಯವಿಲ್ಲ
ರಾಯ್ ಬರೇಲಿ
1. ಬಚ್ಚರವಾನ್ - ರಾಮ್ ಲಾಲ್ ಅಕೇಲ , ಎಸ್ಪಿ - ಜಯ
2. ಹರಿಚಂದ್ಪುರ್ - ಸುರೇಂದ್ರ ವಿಕ್ರಂಸಿಂಗ್ , ಎಸ್ಪಿ- ಮುನ್ನಡೆ
3. ರಾಯ್ ಬರೇಲಿ - ಅಖಿಲೇಶ್ ಕುಮಾರ್ ಸಿಂಗ್ , ಪಿಎಸ್ಪಿ - ಮುನ್ನಡೆ
4. ಸಾರೇನಿ - ದೇವೇಂದ್ರ ಪ್ರತಾಪ್ ಸಿಂಗ್ , ಎಸ್ಪಿ - ಜಯ
5. ಉಂಚಾಹಾರ್ - ಅಜಿತ್ ಪಾಲ್ ಸಿಂಗ್, ಕಾಂಗ್ರೆಸ್ - ಮುನ್ನಡೆ












Click it and Unblock the Notifications