ನೆಲಕಚ್ಚಿದ ಕಿಂಗ್, ಗಗನಕ್ಕೇರಿದ ಟಿಕೆಟ್ ದರ

ದೆಹಲಿ-ಮುಂಬೈ ಮಾರ್ಗದಲ್ಲಿ ಸಾಮಾನ್ಯವಾಗಿ ಟಿಕೆಟ್ ಬೆಲೆ 4,500-5,000 ಇರುತ್ತದೆ. ಆದರೆ, ಕಿಂಗ್ ಫಿಷರ್ ಬಿಕ್ಕಟ್ಟಿನ ದೆಸೆಯಿಂದ ಇತರೆ ವಿಮಾನಯಾನ ದರ 6,555 ದಿಂದ 7,305 ಕ್ಕೆ ಏರಿದೆ.
ಅದೇ ರೀತಿ ದೆಹಲಿ-ಬೆಂಗಳೂರು ಭಾಗದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು 6,000-7,500 ರು ಸಾಕಾಗುತ್ತಿತ್ತು. ಆದರೆ, ಈಗ 12,000-14,000 ರು ತೆರಬೇಕಿದೆ. ದೆಹಲಿ-ಕೋಲ್ಕತ್ತಾ ವಿಮಾನಯಾನ ದರ 5,000 ರು ನಿಂದ 6,500 ರು.ಗೆ ಏರಿಕೆಯಾಗಿದೆ.
ಕಿಂಗ್ ಫಿಷರ್ ವಿಮಾನಯಾನದ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು 2,000 ದಿಂದ 3,000 ರು ಹೆಚ್ಚುವರಿ ಪಾವತಿಸಿ ಪುನಃ ಬುಕ್ಕಿಂಗ್ ಮಾಡಬೇಕಾಫ಼ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟ್ರಾವೆಲ್ ಏಜೆಂಟ್ ಗಳು ಹೇಳಿದ್ದಾರೆ.
ಕಡಿಮೆ ದರದ ಪ್ರಯಾಣ ಸದ್ಯಕ್ಕಂತೂ ಲಭ್ಯವಿಲ್ಲ. ಕಿಂಗ್ ಫಿಷರ್ ವಿಮಾನಯಾನ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಖಾಸಗಿ ವಿಮಾನಯಾನ ಕ್ಷೇತ್ರದ ಟಿಕೆಟ್ ದರ ಏರಿಕೆ ಪ್ರಯಾಣಿಕರಗೆ ಹೊರೆಯಾಗಿದೆ.
ವಿಮಾನ ಹಾರಾಟ ರದ್ದಾದ ಬಗ್ಗೆ ಪ್ರಯಾಣಿಕರಿಗೆ ಹಾಗೂ ಟ್ರಾವೆಲ್ ಏಜೆಂಟ್ ಗಳಿಗೆ ತಿಳಿಸದೆ ದಿಢೀರ್ ಎಂದು ವಿಮಾನ ಹಾರಾಟ ರದ್ದು ಮಾಡಿರುವ ಕಿಂಗ್ ಫಿಷರ್ ಸಂಸ್ಥೆಗೆ Directorate General of Civil Aviation (ಡಿಜಿಸಿಎ) ನೋಟಿಸ್ ಜಾರಿ ಮಾಡಿದೆ.












Click it and Unblock the Notifications