ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಪಾಪರ್ ಆಗಿಲ್ಲ, ಕಿಂಗ್ ಫಿಷರ್ ಮುಚ್ಚಲ್ಲ

By Mahesh
|
Google Oneindia Kannada News

Kingfisher Airlines Crisis
ಮುಂಬೈ, ಫೆ.21: ಖಾಸಗಿ ವಿಮಾನಯಾನ ಕ್ಷೇತ್ರದ ದಿಗ್ಗಜ ವಿಜಯ್ ಮಲ್ಯ ಅವರು ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಮುಚ್ಚುವ ಬಗ್ಗೆ ಬಂದಿರುವ ವರದಿಯನ್ನು ಅಲ್ಲಗೆಳೆದಿದ್ದಾರೆ. ನಮ್ಮ ಸಂಸ್ಥೆ ಪಾಪರ್ ಆಗಿಲ್ಲ. ಸಂಸ್ಥೆ ಮುಚ್ಚುವ ಸ್ಥಿತಿ ತಲುಪಿಲ್ಲ ಎಂದಿದ್ದಾರೆ.

'ಸರ್ಕಾರಕ್ಕೂ ನಮ್ಮ ಸಂಸ್ಥೆ ಮುಚ್ಚುವುದು ಬೇಕಿಲ್ಲ. ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ನಮ್ಮ ಸಂಸ್ಥೆ ಉಳಿಯುವುದು ಅನಿವಾರ್ಯವಾಗಿದೆ' ಎಂದು ಮಲ್ಯ ಹೇಳಿದ್ದಾರೆ.

ಬ್ಯಾಂಕ್ ಗಳಿಂದ ಹೆಚ್ಚಿನ ಹಣ ನಿರೀಕ್ಷಿಸಿದ್ದೇವೆ. ಆದರೆ, ಸರ್ಕಾರದ ಸಹಾಯ ಹಸ್ತ ಬೇಡಿಲ್ಲ. ಸರ್ಕಾರವನ್ನು ಈ ಬಗ್ಗೆ ಕೇಳುವುದೂ ಇಲ್ಲ. ವಿಮಾನಯಾನಕ್ಕೆ ಬೇಕಾದ ಅಗತ್ಯ ಇಂಧನ, ಬಂಡವಾಳ ಸಿಕ್ಕರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ನಮ್ಮ ಸಂಸ್ಥೆ ಮೇಲೆ ನಂಬಿಕೆ ಇಟ್ಟರೆ ವಿಮಾನಯಾನ ಉತ್ತಮ ಸ್ಥಿತಿ ತಲುಪುತ್ತದೆ ಎಂದು ಮಲ್ಯ ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಸಂಸ್ಥೆ ಮೇಲೆ ಸಾಲ ಇರುವುದು ನಿಜ. ಅದರೆ, ಆದಾಯ ತೆರಿಗೆ ಇಲಾಖೆ ಅವರು ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡ ಕ್ರಮ ಸರಿಯಿಲ್ಲ. ತೆರಿಗೆ ಬಾಕಿ ಉಳಿಸಿಕೊಂಡಿರುವ ಹಲವು ಪ್ರಕರಣಗಳು ಕಣ್ಮುಂದೆ ಇರುವಾಗ ನಮ್ಮ ಸಂಸ್ಥೆಯನ್ನೇ ಟಾರ್ಗೆಟ್ ಮಾಡಲಾಗಿದೆ. ಇದರಿಂದಾಗಿ ನಮ್ಮ ಯೋಜನೆಗಳಿಗೆ ಹೊಡೆತ ಬಿತ್ತು ಎಂದು ಮಲ್ಯ ಹೇಳಿದರು.

ನಮ್ಮ ಬಳಿ ಸಾಕಷ್ಟು ಹಣವಿದೆ. ಆದರೆ, ಎಲ್ಲವನ್ನೂ ಸಿಬ್ಬಂದಿ ಸಂಬಳಕ್ಕೆ ವಿನಿಯೋಗಿಸಲು ಬರುವುದಿಲ್ಲ. ಖಾತೆಗಳು ಮುಟ್ಟುಗೋಲು ಹಾಕಿದ ಪರಿಣಾಮ ಡಿಜಿಸಿಎಗೆ ಮುಂಚಿತವಾಗಿ ತಿಳಿಸಲು ಆಗಲಿಲ್ಲ ಎಂದು ಮಲ್ಯ ತಿಳಿಸಿದರು.

2010-11 ರಲ್ಲಿ 1,027 ಕೋಟಿ ರು ಕಳೆದುಕೊಂಡಿರುವ ಕಿಂಗ್ ಫಿಷರ್ ಸಂಸ್ಥೆ, 7,057.08 ಕೋಟಿ ರು ಸಾಲ ತೀರಿಸಬೇಕಿದೆ.

English summary
Vijay Mallya, airline baron, Kingfisher airlines, talking on the crisis that the cash strapped airline is currently undergoing, said that the airlines will not close down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X