ಬೆಂಗಳೂರು ಏರ್‌ಪೋರ್ಟ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ನೀಲಿ ಮೆಟ್ರೋ ರೈಲಿನಲ್ಲಿದೆ ಲಗೇಜ್ ರ್‍ಯಾಕ್, ಒಳಾಂಗಣ ಲುಕ್ ಹೀಗಿದೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಅಪಾರ ಕೊಡುಗೆ ನೀಡಲಿರುವ ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ (Bengaluru Metro Blue Line) ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಸಿಕ್ಕಿದೆ. ಜೂನ್ 4ರಂದು ಮೊದಲ ನೀಲಿ ಮಾರ್ಗದ ರೈಲು ಬೈಯಪ್ಪನಹಳ್ಳಿ ಡಿಪೋಗೆ ಆಗಮಿಸಿದೆ. ಆದರೆ ಈ ರೈಲು ಈವರೆಗೆ ನಗರಕ್ಕೆ ಬಂದ ನೇರಳೆ, ಹಸಿರು ಹಾಗೂ ಹಳದಿ ಮಾರ್ಗದ ರೈಲಿಗಿಂತ ಭಿನ್ನವಾಗಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‍‌ ಪೋರ್ಟ್‌ಗೆ (KIA) ಸಂಪರ್ಕಿಸುವ ಈ ನೀಲಿ ಮಾರ್ಗದ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ಒದಗಿಸಲಿದೆ. ಈ ರೈಲಿನ ಒಳಾಂಗಣ ವಿಶೇಷ ವಿನ್ಯಾಸ ಹೇಗಿದೆ? ಎಂಬ ಮಾಹಿತಿ ಇಲ್ಲಿದೆ.

ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ (Silk Board-KR Puram Metro Line) ಮಾರ್ಗವಾಗಿ ಬೆಂಗಳೂರು ವಿಮಾನ ನಿಲ್ದಾಣವರೆಗೂ ಎರಡು ಹಂತಗಳಲ್ಲಿ ಸಂಪರ್ಕ ಕಲ್ಪಿಸುತ್ತದೆ. ಮೊದಲ ಹಂತವಾದ ಸಿಲ್‌ಬೋರ್ಡ್- ಕೆ.ಆರ್.ಪುರಂವರೆಗಿನ ಮಾರ್ಗವು ಇದೇ 2026ರ ಡಿಸೆಂಬರ್‍‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಸಂಬಂಧ ಸಿದ್ಧತೆಗಳು ಆರಂಭವಾಗಿದ್ದು, ಅದರ ಭಾಗವಾಗಿ ಬೆಂಗಳೂರಿಗೆ ಬಂದ ಡ್ರೈವರ್‍‌ಲೆಸ್ ನೀಲಿ ರೈಲಿನಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರು ಲಗೇಜ್ ಇಡಲು ರ್‍ಯಾಕ್ ಒದಗಿಸಲಾಗಿದೆ. ಅದರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

First Look

ಸಾಮಾಜಿಕ ಜಾಲತಾಣ ಎಕ್ಸ್ (@ever_pessimist) ಖಾತೆಯಲ್ಲಿ ರೈಲಿನ ಓಳಾಂಗಣದ ಕುರಿತ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರು ಅರ್ಥ್ ಮೂವರ್ಸ್ ಲಿಮಿಟೆಡ್ (BEML) ತಯಾರಿಸಿದ ಈ ರೈಲು ಹೊರಗಿನಿಂದ ಸಾಮಾನ್ಯ ಮೆಟ್ರೋ ರೈಲಿನಂತೆಯೇ ಇದೆ. ಆದರೆ ಒಳಗೆ ಒಂದಷ್ಟು ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.

Silk Board-KR Puram Metro Line: ಪ್ರಯಾಣಿಕರಿಗೆ ಗುಡ್‌ನ್ಯೂಸ್, ಮೊದಲ ಡ್ರೈವರ್‌ಲೆಸ್ ನೀಲಿ ಮೆಟ್ರೋ ಆಗಮನ
Silk Board-KR Puram Metro Line: ಪ್ರಯಾಣಿಕರಿಗೆ ಗುಡ್‌ನ್ಯೂಸ್, ಮೊದಲ ಡ್ರೈವರ್‌ಲೆಸ್ ನೀಲಿ ಮೆಟ್ರೋ ಆಗಮನ

ದೂರದ ಊರುಗಳಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಲಗೇಜ್ ಒಯ್ಯುವವರಿಗೆ ಈ ರೈಲು ಉತ್ತಮ ಸೇವೆ ಒದಗಿಸಲಿದೆ. ಸಹ ಪ್ರಯಾಣಿಕರಿಗೆ ತೊಂದರೆ ಆಗದಂತೆ ಕಾಲಡಿ, ಬಾಗಿಲು ಬದಿ ಲಗೇಜ್ ಇಡದೇ, ಅದಕ್ಕಾಗಿಯೇ ಇರುವ ರ್‍ಯಾಕ್ ನಲ್ಲಿ ಇಡಬಹುದು. ಒಳಗೆ ಎಸಿ ವ್ಯವಸ್ಥೆ, ಪ್ರಕಾಶಮಾನವಾದ ವಿದ್ಯುತ್, ಮಾರ್ಗ ಫಲಕ, ವಿಶಾಲ ಒಳಾಂಗಣ ಇದೆ. ಸದ್ಯ ಲಗೇಜ್ ರ್‍ಯಾಕ್ ಒಳಗೊಂಡ ಮೊದಲ ಮೆಟ್ರೋ ಮಾರ್ಗ ಇದಾಗಿದೆ.

ಶೀಘ್ರವೇ 2 ಮೆಟ್ರೋ ನೀಲಿ ರೈಲು ಆಗಮನ

ನೀಲಿ ಮಾರ್ಗದ 2ಎ ಹಂತಕ್ಕಾಗಿ ಮೊದಲ ಡ್ರೈವರ್ ಲೆಸ್ ಆಗಮಿಸಿದ ಬೆನ್ನಲ್ಲೆ ಆದಷ್ಟು ಶೀಘ್ರವೇ ಎರಡನೇ ರೈಲನ್ನು ಪೂರೈಸಲು ಬಿಇಎಂಎಲ್ ಪ್ಲ್ಯಾನ್ ಮಾಡಿಕೊಂಡಿದೆ. ಒಟ್ಟು 16 ಚಾಲಕ ರಹಿತ ಮೆಟ್ರೋ ರೈಲುಗಳನ್ನು ಪೂರೈಸಲು ಬೆಂಗಳೂರು ಮೆಟ್ರೋ ರೈಲು ನಿಗಮವು 3177 ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಂಡಿದೆ. ಅದರಲ್ಲಿ ಮೊದಲ ರೈಲು ಬಂದಿದ್ದು, ಮಾರ್ಗ ಓಪನ್ ಆಗುತ್ತಿದ್ದಂತೆ ಆರಂಭದಲ್ಲಿ ಚಾಲಕ ಸಹಿತವಾಗಿಯೇ ಈ ರೈಲುಗಳನ್ನು ಓಡಿಸಲಾಗುತ್ತದೆ.

2026ರ ವರ್ಷಾಂತ್ಯಕ್ಕೆ ನೀಲಿ ಮಾರ್ಗ ಓಪನ್

ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್.ಪುರಂ ವರೆಗಿನ ಕಾಮಗಾರಿಯಲ್ಲಿ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಏಪಿಲ್ 2026ಹೊತ್ತಿಗೆ ಶೇಕಡಾ 86 ರಷ್ಟು ಕೆಲಸ ಪೂರ್ಣಗೊಂಡಿದ್ದು, ಇದೇ ವರ್ಷ ಡಿಸೆಂಬರ್ ಅಂತ್ಯಕ್ಕೆ ಹೊತ್ತಿಗೆ ಮಾರ್ಗ ಲೋಕಾರ್ಪಣೆ ಆಗಲಿದೆ ಎಂದು ಬಿಎಂಆರ್ ಸಿಎಲ್ ಮೂಲಗಳು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+