Peddi: ಜಾನ್ವಿ ಕಪೂರ್ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ?: ತಪ್ಪೊಪ್ಪಿಕೊಂಡ ನಿರ್ದೇಶಕ ಬುಚ್ಚಿ ಬಾಬು ಸನಾ ರಿಯಾಕ್ಟ್
Peddi Movie: ತೆಲುಗಿನ RRR ಸಿನಿಮಾ ಬಳಿಕ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಪ್ಯಾನ್ ಇಂಡಿಯಾ 'ಪೆದ್ದಿ' (Peddi Film) ಸಿನಿಮಾ 150 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಬಾಲಿವುಡ್ ಬೆಡಗಿ ನಟಿ ಜಾನ್ವಿ ಕಪೂರ್ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಅಪಾರ ನಿರೀಕ್ಷೆಗಳಿದ್ದ ಸಿನಿಮಾ ಜೂನ್ 4ರಂದು ಬಿಡುಗಡೆ ಆಗಿದ್ದು, ಆ ಬಳಿಕ ಒಂದಷ್ಟು ವಿವಾದ ಎದುರಿಸಿತು. 'ಪೆದ್ದಿ'ಯಲ್ಲಿ ಮುಖ್ಯವಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೆಲೆ ಕಾಣಲು ಬಯಸಿದ್ದ ನಟಿ ಜಾನ್ವಿ ಅವರನ್ನು ತೋರಿಸಿದ ರೀತಿಗೆ ನಿರ್ದಶಕ ಬುಚ್ಚಿ ಬಾಬು ಸನಾ ವಿರುದ್ಧ ನೆಟ್ಟಿಗರು ಬೇಸರ ವ್ಯಕ್ತಪಡಿಸಿದರು. ಮಹಿಳೆಯರನ್ನು ಸಿನಿಮಾಗಾಗಿ ಬಳಸಿಕೊಂಡ ರೀತಿಯ ಬಗ್ಗೆ ಯುವತಿಯರಿಂದ ಟೀಕೆಗಳು ಕೇಳಿ ಬಂದವು. ಇದರ ಬೆನ್ನಲ್ಲೆ ಶನಿವಾರ ನಿರ್ದೇಶಕರು ಬಹಿರಂಗ ಕ್ಷಮೆಯಾಚಿಸಿದ್ದಾರೆ. ಹಾಗಾದ್ರೆ ಚಿತ್ರದ ಆ ದೃಶ್ಯಗಳಿಗೆ ಬೀಳುತ್ತಾ ಕತ್ತರಿ...?
ಹೌದು, "ಪೆದ್ದಿ'ಯಲ್ಲಿ ನಟಿ ಜಾನ್ವಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ, ಸುಖಾ ಸುಮ್ಮನೆ ಬೋಲ್ಡ್ ಆಗಿ ತೋರಿಸಲಾಗಿದೆ. ಅವರ ಮುಖಕ್ಕಿಂತ ಸೊಂಟವನ್ನು ಹೈಲೈಟ್ ಮಾಡಲಾಗಿದೆ. ಸಿನಿಮಾದಲ್ಲಿ ರಾಜಕಾರಣಿಯೊಬ್ಬಳರ ಮಗಳು ಹೀಗೆ ಮೈಮಾಟ ಪ್ರದರ್ಶಿಸುವುದು, ಅನುಮತಿ ಇಲ್ಲದೇ ಹಿರೋ ನಟಿಗೆ ಮುತ್ತಿಡುವ ದೃಶ್ಯಗಳು ಮಹಿಳೆಯರಿಗೆ ಅಗೌರವ ತೋರಿಸುವಂತಿದೆ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಕೆಲವು ಮಹಿಳೆಯರು ಈ ಆಕ್ಷೇಪಣೆಯನ್ನು ಬೆಂಬಲಿಸಿ ಅಸಮಾಧಾನ ಹೊರ ಹಾಕಿದ್ದಾರೆ. ಇದೆಲ್ಲ ವಿವಾದದ ಬೆನ್ನಲ್ಲೆ 'ಪೆದ್ದಿ' ನಿರ್ದೇಶಕ ಬುಚ್ಚಿ ಬಾಬು ಕ್ಷಮೆ ಕೇಳಿ ಶನಿವಾರ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ನಟಿಯೊಬ್ಬರನ್ನು ಹೀಗೆ ಹೆಚ್ಚು ರೋಮ್ಯಾಟಿಂಕ್, ಬೋಲ್ಡ್ ಆಗಿ ತೋರಿಸುವ ಮೂಲಕ ನಿರ್ದೇಶಕರು ಯಾವ ಸಂದೇಶ ನೀಡುತ್ತಿದ್ದಾರೆ?. ಸಿನಿಮಾದಲ್ಲಿ ಜಾನ್ವಿ ಅವರನ್ನು ತೋರಿಸಿದ ರಿತಿ ಭಿನ್ನವಾಗಿದೆ. ಕಥೆಗೆ ಸರಿ ಹೊಂದವಂತಿಲ್ಲ ಎಂದು ಅಭಿಪ್ರಾಯ ಹಂಚಿಕೊಳ್ಳಲಾಗಿದೆ. ಟೀಕಿಸಿದ ವಿಡಿಯೋ ಪೈಕಿ ಒಂದಕ್ಕೆ ಸ್ವತಃ ನಟಿ ಜಾನ್ವಿ ಅವರೇ ಲೈಕ್ ಮಾಡಿದ್ದು ಉರಿಯು ಬೆಂಕಿಗೆ ತುಪ್ಪ ಸುರಿದಂತಾಗಿದೆ. ತಾವು ನಟಿಸಿದ ಸಿನಿಮಾದ ಕುರಿತು ಟೀಕೆಗಳು ವ್ಯಕ್ತವಾದ ಪೋಸ್ಟ್ಗೆ ಅದೇ ಚಿತ್ರದ ನಟಿ ಲೈಕ್ ಮಾಡಿದ್ದಾರೆಂದರೆ ಅವರಿಗೂ ಅಸಮಾಧಾನ ಇದೆ ಎಂದಾಯಿತು ಎಂಬ ಚರ್ಚೆಗಳು ಜೋರಾಗಿವೆ.
ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವೇಳೆ ಒಂದಷ್ಟು ಬೋಲ್ಡ್ ಸೀನ್ಗಳ ಕುರಿತು ನಟಿ ಜಾನ್ವಿ ಆಕ್ಷೇಪಿಸಿದ್ದರು ಎನ್ನಲಾಗಿತ್ತು. ಕೊನೆಗೆ ನಿರ್ದೇಶಕರು ಸೇರಿ ಚಿತ್ರತಂಡ ಅವರನ್ನು ಸಮಾಧಾನಪಡಿಸಿದ್ದರು ಎನ್ನುವ ಮಾಹಿತಿ ಇದೆ.
ಬೋಲ್ಡ್ ದೃಶ್ಯಗಳಿಗೆ ಕತ್ತರಿಸುವ ಭರವಸೆ ಕೊಟ್ಟ, ನಿರ್ದೇಶಕ
ಎಕ್ಸ್ ಪೋಸ್ಟ್ನಲ್ಲಿ ಬುಚ್ಚಿ ಬಾನು ಸನಾ ಅವರು, 'ಪೆದ್ದಿ' ಚಿತ್ರದ ಕುರಿತು ಕೇಳಿ ಬಂದ ಮಾತುಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಸಿನಿಮಾ ಜನರನ್ನು ರಂಜಿಸಬೇಕು. ಜನರ ಸಂಪರ್ಕ ಸಾಧಿಸಬೇಕು ಎಂದು ನಂಬುತ್ತೇನೆ. ಸಿನಿಮಾ ಮೂಲಕ ಯಾರಿಗೂ ತೊಂದರೆ ಕೊಡುವುದು, ಅಗೌರವ ಮಾಡುವ ಉದ್ದೇಶ ನನ್ನದಲ್ಲ. ನಿಮ್ಮ ಟೀಕೆಗಳನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಸಿನಿಮಾದ ಒಳಗೆ, ಹೊರ ಜಗತ್ತಿನಲ್ಲಿ ಮಹಿಳೆ ಕುರಿತು ನನಗೆ ಅಪಾರ ಗೌರವವಿದೆ' ಎಂದಿದ್ದಾರೆ. ಜೊತೆಗೆ ಅಂತಹ ದೃಶ್ಯಗಳ ಬದಲಾವಣೆಗೂ ನಾವು ನಿರ್ಧರಿಸಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಈ ಮೂಲಕ ನಟಿಯ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಮಹಿಳಾ ಪಾತ್ರದ ಮೂಲಕ ಯಾರನ್ನು ಅಗೌರವಿಸುವ ಉದ್ದೇಶ ನನ್ನದಾಗಿರಲಿಲ್ಲ. ಚಿತ್ರದ ಯಾವುದೇ ಭಾಗವನ್ನು ನೀವು ಆ ರೀತಿ ಗ್ರಹಿಸಿದ್ದರೆ ನಿಮ್ಮ ಭಾವನೆ ಗೌರಿಸುವುದರ ಜೊತೆಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಹೆಣ್ಣುಮಕ್ಕಳ ಗೌರವ, ಮೌಲ್ಯ ಎತ್ತಿ ಹಿಡಿಯುವ ಬಲವಾದ ಚಿತ್ರಗಳನ್ನು ತಯಾರಿಸುವಲ್ಲಿ ಬದ್ಧರಾಗಿದ್ದೇವೆ' ಎಂದು ಕೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಚೂರಾಯ್ತು ನಟಿ ಜಾನ್ಸ್ ಸೌತ್ ಸಿನಿಮಾಗಳ ಕನಸು!
ಬಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿ ನಟಿ ಜಾನ್ವಿ ಕಪೂರ್ ಅವರು ಈ ಹಿಂದೆ ನಟ ಜ್ಯೂನಿಯರ್ ಎನ್ಟಿ ಆರ್ ಅವರ 'ದೇವರ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಅಷ್ಟಾಗಿ ಹೆಸರು ಮಾಡಲಿಲ್ಲ. ಬಳಿಕ 'ಪೆದ್ದಿ'ಮೂಲಕ ಮೋಡಿ ಮಾಡಲು ಸಜ್ಜಾಗಿದ್ದರು. ಈ ಮೂಲಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೆಲೆ ಕಾಣಲು ಜಾನ್ವಿ ಮುಂದಾಗಿದ್ದರು. ಅಷ್ಟರಲ್ಲಾಗಲೇ 'ಪೆದ್ದಿ' ಬಗ್ಗೆ ಕೇಳಿ ಬಂದ ಟೀಕೆಗಳು, ಜೊತೆಗೆ ತಮ್ಮನ್ನು ತೋರಿಸಿದ ರೀತಿ ಕಂಡು ಜಾನ್ವಿ ಅವರ ಕನಸು ನುಚ್ಚು ನೂರಾಗಿದೆ ಎನ್ನಬಹುದು.
As a filmmaker, I believe cinema should entertain, inspire, and connect with audiences. It should never make anyone feel uncomfortable or disrespected. We have heard the feedback regarding certain scenes in Peddi and have taken it seriously.
— BuchiBabuSana (@BuchiBabuSana) June 6, 2026
I have always had immense respect for…














Click it and Unblock the Notifications