ವಧುವರರೇ ಮದುವೆಯಾಗಬೇಕೆ? ಪರೀಕ್ಷೆ ಪಾಸಾಗಿ

Premarital licenses in Saudi
ದುಬೈ, ಫೆ 18: ಭಾರತದಲ್ಲಿ ವಧುವರಾನ್ವೇಷಣೆಯಲ್ಲಿ ತೊಡಗಿರುವವರು ಚಿಂತಿಸಾಬೇಕಾದ ವಿಷಯವಿದಲ್ಲ. ಮದುವೆಯಾಗ ಬೇಕಾದರೆ ಪರೀಕ್ಷೆಯಲ್ಲಿ ಪಾಸಾಗಬೇಕು ಎಂಬ ನಿಯಮ ಜಾರಿಯಾದರೆ ಹೇಗಿರುತ್ತೆ ? ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಸೌದಿ ಅರೇಬಿಯಾ ಸರಕಾರ ತೀವ್ರ ಚಿಂತನೆಯಲ್ಲಿ ತೊಡಗಿದೆ.

ಮದುವೆಯಾದ ಬಳಿಕ ಕೌಟುಂಬಿಕವಾಗಿ ಬರುವ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುವ ಬಗ್ಗೆ ತಿಳುವಳಿಕೆ ನೀಡುವುದು ಈ ಪರೀಕ್ಷೆಯ ಉದ್ದೇಶ ಎನ್ನುವುದು ಸೌದಿ ಸರಕಾರ ಸ್ಪಷ್ಟ ಪಡಿಸಿದೆ. ಸೌದಿ ಅರೇಬಿಯಾದ ಕೋರ್ಟ್ ಗಳಲ್ಲಿ ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದ ಪ್ರಕರಣ ಹೆಚ್ಚುತ್ತಿರುವುದು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ ಎಂದು ಸೌದಿ ನ್ಯಾಯ ಸಚಿವ ಮುಹಮ್ಮದ್ ಅಲ್ ಇಸ್ಸಾ ಹೇಳಿಕೆ ನೀಡಿದ್ದಾರೆ.

ವಿವಾಹ ವಾಗಲಿರುವ ನವಜೋಡಿಗಳಿಗೆ ಪರೀಕ್ಷೆ ನಡೆಸಬೇಕೇ, ಬೇಡವೇ ಎನ್ನುವ ವಿಚಾರ ಪರಿಶೀಲನೆ ಹಂತದಲ್ಲಿದೆ. ಒಂದು ವೇಳೆ ಸರಕಾರದಿಂದ ಇದಕ್ಕೆ ಅನುಮೋದನೆ ಸಿಕ್ಕಿದರೆ ವಧುವರರು ಪರೀಕ್ಷೆ ಬರೆದು ತೇರ್ಗಡೆಯಾಗ ಬೇಕಾಗುತ್ತದೆ ಎಂದು ಅರೇಬಿಕ್ ದೈನಿಕ ಅಲ್ ವಾತನ್ ಪತ್ರಿಕೆ ಮಾಡಿದ ವರದಿಯನ್ನು ಉಲ್ಲೇಖಿಸಿ ಜೀ ನ್ಯೂಸ್ ವರದಿ ಮಾಡಿದೆ.

ಪರೀಕ್ಷೆಯಲ್ಲಿ ಪಾಸಾದ ನಂತರ ವಿವಾಹ ನೋಂದಣಾಧಿಕಾರಿಗಳ ಬಳಿ ತೆರಳಿ ಪರವಾನಿಗೆ ಪಡೆದು ವಿವಾಹ ಆಗಬೇಕಾಗುತ್ತದೆ. ಒಂದು ರೀತಿಯಲ್ಲಿ ಗಾಡಿ ಚಲಾಯಿಸಲು RTO ಅನುಮತಿ ಬೇಕಲ್ವೇ ? ಒಂದು ಲೆಕ್ಕದಲ್ಲಿ ಇದೂ ಹಾಗೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+