ಜನಾ ರೆಡ್ಡಿ ಜೈಲುವಾಸ ಇನ್ನೂ ದೀರ್ಘ ದೀರ್ಘ

ಆದರೆ ಸಿಬಿಐ... 'ಆರ್ಥಿಕ ಭಯೋತ್ಪಾದಕ' ಜನಾರ್ದನ ರೆಡ್ಡಿಗೆ ಯಾವುದೇ ಕಾರಣಕ್ಕೂ ಜೈಲಿನಿಂದ ಹೊರಬಾರದಂತೆ 'ನೋಡಿಕೊಳ್ಳುತ್ತಿದೆ'. ರೆಡ್ಡಿಯನ್ನು ಹಾಗಿರಲಿ ಅವರ ಐಷಾರಾಮಿ ವಸ್ತುಗಳನ್ನೂ ವಾಪಸ್ ಕೊಡಲು ಸಿಬಿಐಗೆ ಮನಸ್ಸಿಲ್ಲ. ನನ್ನ ರುಕ್ಮಿಣಿಯನ್ನು (ಹೆಲಿಕಾಪ್ಟರ್) ವಾಪಸ್ ಕೊಡಿ ಎಂದು ರೆಡ್ಡಿ ಕೇಳಿದರೆ 'ರುಕ್ಮಿಣಿಯನ್ನು ನಾವು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವೆ. ರೆಡ್ಡಿಗೆ ಅದರ ಚಿಂತೆ ಬೇಡ' ಎಂದು ಖಡಕ್ಕಾಗಿ ಹೇಳಿದೆ.
ಈ ಮಧ್ಯೆ, ಎಮ್ಮಾರ್ ಟೌನ್ ಷಿಪ್ ಪ್ರಕರಣದಲ್ಲಿ ಆರೋಪಿಯಾಗಿರುವ ಆಂಧ್ರಪ್ರದೇಶ ಗೃಹ ಕಾರ್ಯದರ್ಶಿ ಬಿಪಿ ಆಚಾರ್ಯ ಅವರ ಚಂಚಲಗೂಡ ಜೈಲುವಾಸ ಅವಧಿಯನ್ನು ವಿಸ್ತರಿಸಲಾಗಿದೆ.
ಇದಕ್ಕೆಲ್ಲಕ್ಕಿಂತ ಗಹನವಾದ ವಿಚಾರವೆಂದರೆ ಸಿಬಿಐ ಅಧಿಪತಿ ವಿವಿ ಲಕ್ಷ್ಮಿನಾರಾಯಣ ಅವರ ಕೈಮೇಲಾಗಿರುವುದು. ಅವರೀಗ ನರೇಂದ್ರ ಮೋದಿ ಸಾಹೇಬರ ಕೊರಳಿಗೇ ಗಂಟುಬಿದ್ದಿದ್ದಾರೆ. ಮೋದಿಗೆ ಉರುಳಾಗಬಹುದಾದ ಷೊಹ್ರಾಬುದ್ದೀನ್ ಶೇಕ್ ನಕಲಿ ಎನಕೌಂಟರ್ ಪ್ರಕರಣದ ತನಿಖೆ ನಡೆಸುವಂತೆ ಆಂಧ್ರದ ಸಿಬಿಐ ಜಂಟಿ ನಿರ್ದೇಶಕರಾಗಿರುವ ಲಕ್ಷ್ಮಿನಾರಾಯಣಗೆ ದೆಹಲಿ ಸಿಬಿಐ ಆದೇಶಿಸಿದೆ. ಸುಪ್ರೀಂಕೋರ್ಟ್ ಸುಪರ್ದಿಯಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಸಿಬಿಐ ತನಿಖೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ.
ಈಗಾಗಲೇ ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ, ಎಮ್ಮಾರ್ ಟೌನ್ ಷಿಪ್ ಹಗರಣಗಳ ಬೆನ್ನುಹತ್ತಿರುವ ಲಕ್ಷ್ಮಿನಾರಾಯಣ ಸಾಹೇಬರೇ ಖುದ್ದು ಎಲ್ಲ ಪ್ರಕರಣಗಳನ್ನೂ ನಿಭಾಯಿಸಬೇಕಾಗಿದೆ. ಅಲ್ಲಿಗೆ ಒಂದೇ ಪ್ರಕರಣವನ್ನು ಒಂದೇ ಸಮನೆ ತನಿಖೆ ನಡೆಸುವುದು ಅವರಿಗೆ ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಓಬಳಾಪುರಂ ರೆಡ್ಡಿ ಪ್ರಕರಣ ವಿಚಾರಣೆ ನಿಧಾನಗತಿಯಲ್ಲಿ ಸಾಗಲಿದೆ. ಅಂದರೆ ರೆಡ್ಡಿ ಜೈಲುವಾಸ .............












Click it and Unblock the Notifications