ಡ್ರಾಪ್ ನೆಪದಲ್ಲಿ ಸಾಫ್ಟ್ ವೇರ್ ಟೆಕ್ಕಿ ದೋಚಿದ್ರು

ವಿಕ್ರಮ್ ಬಳಿ ಇದ್ದ ಲ್ಯಾಪ್ ಟಾಪ್, ಸರ, ಮೊಬೈಲ್, ನಗದು ಹಣ ಎಲ್ಲವನ್ನು ಕಸಿದುಕೊಂಡ ಕಳ್ಳರು ನಂತರ ವಿಕ್ರಮ್ ನನ್ನು ಕಾರಿನಿಂದ ಹೊರಕ್ಕೆ ತಳ್ಳಿದ ಘಟನೆ ಎಚ್ ಎಎಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಐಟಿಪಿಎಲ್ ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಿಕ್ರಮ್ ರಾತ್ರಿ 11.30ರ ಸುಮಾರಿಗೆ ಮನೆಗೆ ಹೊರಟಿದ್ದಾನೆ. ಕ್ಯಾಬ್ ವಾಹನದ್ದಂತ್ತಿದ್ದ ಟಾಟಾ ಇಂಡಿಕಾ ಕಾರು ಈತನ ಬಳಿ ಬಂದ ಕಾರಿನ ಚಾಲಕ ಡ್ರಾಪ್ ಕೊಡುವುದಾಗಿ ಹೇಳಿದ್ದಾನೆ. ಅದನ್ನು ನಂಬಿ ಕಾರು ಹತ್ತಿದ ವಿಕ್ರಮ್ ಗೆ ನಂತರ ಜೊತೆಯಲ್ಲೇ ಕೂತಿರುವವರು ದರೋಡೆಕೋರರು ಎಂಬ ಸಂಶಯ ಮೂಡಿದೆ.
ಈ ಸಮಯದಲ್ಲಿ ಪ್ರತಿಭಟನೆಗೆ ಮುಂದಾದ ವಿಕ್ರಮ್ ಮೇಲೆ ಹಲ್ಲೆ ನಡೆಸಿದ ತಂಡ, ಆತನ ಬಳಿ ಇದ್ದ ವಸ್ತುಗಳನ್ನು ದೋಚಿ, ಎಚ್ಎಎಲ್ ಬಳಿ ಇರುವ ಹೆರಿಟೇಜ್ ಕಂಪನಿ ಬಳಿ ಆತನನ್ನು ತಳ್ಳಿ ಪರಾರಿಯಾಗಿದ್ದಾರೆ.
ಈ ಘಟನೆಯಿಂದ ಕಂಗಾಲಾದ ವಿಕ್ರಮ್ ಎಚ್ ಎಎಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗಾಗಿ ಶೋಧಕಾರ್ಯ ನಡೆಸಿದ್ದಾರೆ.












Click it and Unblock the Notifications