ಕೋರಮಂಗಲ ICICI ಎಟಿಎಂನಲ್ಲಿ 13 ಲಕ್ಷ ಮಾಯ
ಬೆಂಗಳೂರು,
ಫೆ.7: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎನಿಸಿರುವ ICICI Bankನ ಬೆಂಗಳೂರು ಶಾಖೆಯ ATMನಲ್ಲಿ ಸೋಮವಾರ 13 ಲಕ್ಷ ರುಪಾಯಿ ಮಾಯವಾಗಿದೆ. ಕೋರಮಂಗಲ 80 ಅಡಿ ರಸ್ತೆಯ ಬಿಡಿಎ ಕಾಂಪ್ಲೆಕ್ಸ್ ಸಮೀಪವಿರುವ ಐಸಿಐಸಿಐ ಬ್ಯಾಂಕ್ ATMನಲ್ಲಿ 13 ಲಕ್ಷ ರು. ನಾಪತ್ತೆಯಾಗಿದೆ ಎಂದು ಸೆಕ್ಯುರಿಟಿ ಮ್ಯಾನೇಜರ್ ನರೇಶ್ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ. id="toptextpromo">ಬ್ಯಾಂಕಿನವರು
ಶುಕ್ರವಾರ ಸಂಜೆ ಹಣ ತುಂಬಿಸಿದ್ದಾರೆ. ನಂತರ ಹಲವು ಗ್ರಾಹಕರು ಹಣ ಡ್ರಾ ಮಾಡಿದ್ದು, 13 ಲಕ್ಷ ರು. ನಲ್ಲಿ ಎಷ್ಟು ಡ್ರಾ ಮಾಡಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ ಎನ್ನಲಾಗಿದೆ. ಈ ಬಗ್ಗೆ ಮುಂಬೈನಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಿಂದ ಮಾಹಿತಿ ಬಂದ ಮೇಲೆ ನಿಖರವಾಗಿ ನಾಪತ್ತೆಯಾಗಿರುವ ಮೊತ್ತ ತಿಳಿದುಬರಲಿದೆ ಎಂದು ಇನ್ಸ್‌ಪೆಕ್ಟರ್ ಎಸ್. ಸುಧೀರ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಎಟಿಎಂ ಕೇಂದ್ರ ಅತಿ ಕಿರಿದಾದ ಜಾಗದಲ್ಲಿ ಇದೆ. ಬೆಳಗ್ಗೆ ಮಾತ್ರ ಸೆಕ್ಯುರಿಟಿ ಗಾರ್ಡ್ ಇರುತ್ತಾರೆ. ರಾತ್ರಿ ವೇಳೆ ಅವರು ಇರುವುದೇ ಇಲ್ಲ. ಸೆಕ್ಯುರಿಟಿ ಗಾರ್ಡ್ ನೇಮಿಸಿಕೊಳ್ಳುವಂತೆ ಬ್ಯಾಂಕಿಗೆ ನೊಟಿಸ್ ಸಹ ನೀಡಲಾಗಿದೆ ಎಂದು ಸುಧೀರ್ ಹೇಳಿದ್ದಾರೆ.











Click it and Unblock the Notifications