ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಲೋಕಾಯುಕ್ತ ಚಂದ್ರಶೇಖರಯ್ಯ ಯಾರು, ಏನು?

By Srinath
|
Google Oneindia Kannada News

karnataka-upalokayukta-chandrashekaraiah-bio-data
ಬೆಂಗಳೂರು, ಜ.22: ಕರ್ನಾಟಕದ ಎರಡನೆಯ ಉಪ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನ್ಯಾ. ಚಂದ್ರಶೇಖರಯ್ಯ ಅವರು ರೈತ ಕುಟುಂಬದಿಂದ ಬಂದವರು. ಚಂದ್ರಶೇಖಯ್ಯ ಮೈಸೂರು ಜಿಲ್ಲೆಯ ಕೆಆರ್ ನಗರ ತಾಲ್ಲೂಕಿನ ಸಾಲಿಗ್ರಾಮ ಹೋಬಳಿಯ ರಾಂಪುರದ ಒಕ್ಕಲಿಗ ಸಮುದಾಯದ ರೈತ ಕುಟುಂಬದಲ್ಲಿ 1942ರ ಮೇ 20ರಂದು ಜನಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದ ಅವರು, ನಂತರ ಬೆಂಗಳೂರಿನಲ್ಲಿ ಬಿಎಲ್ ಪದವಿ ಶಿಕ್ಷಣ ಪಡೆದರು. 1969ರ ಏಪ್ರಿಲ್ 11ರಿಂದ ವಕೀಲಿ ವೃತ್ತಿ ಆರಂಭಿಸಿದ್ದು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ.

1995ರ ಡಿಸೆಂಬರ್ 18ರಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಚಂದ್ರಶೇಖರಯ್ಯ ಅವರು, 2004ರ ಮೇ 5ರವರೆಗೂ ಈ ಹುದ್ದೆಯಲ್ಲಿದ್ದರು. ದೇಶದ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿದ್ದವರ ಪೈಕಿ ತಮ್ಮ ಸೇವಾವಧಿಯಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ ದಾಖಲೆ ಇವರದು.

2004ರ ಆಗಸ್ಟ್ 6ರಂದು ರಾಜ್ಯ ಗ್ರಾಹಕ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಚಂದ್ರಶೇಖರಯ್ಯ, 2009ರ ಏಪ್ರಿಲ್ 30ರಂದು ನಿವೃತ್ತರಾದರು. ಈ ಅವಧಿಯಲ್ಲೂ ಬಾಕಿ ಇದ್ದ 3,321 ಪ್ರಕರಣಗಳು ಸೇರಿದಂತೆ ಒಟ್ಟು 17,310 ಅರ್ಜಿಗಳ ಪೈಕಿ 16,710 ಪ್ರಕರಣಗಳನ್ನು ಇತ್ಯರ್ಥಪಡಿಸಿದ ದಾಖಲೆಯೂ ಇವರ ಹೆಸರಿನಲ್ಲಿದೆ.

English summary
Justice Chandrashekaraiah takes oath as 2nd Upalokayukta Karnataka on Jan 22 in Bangalore. Upalokayukta Chandrashekaraiah bio-data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X