ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಲೋಕಾಯುಕ್ತರಾಗಿ ಚಂದ್ರಶೇಖರಯ್ಯ ಪ್ರಮಾಣ

By Srinath
|
Google Oneindia Kannada News

justice-chandrashekaraiah-takes-oath-as-upalokayukta
ಬೆಂಗಳೂರು, ಜ.22: ಎರಡನೇ ಉಪ ಲೋಕಾಯುಕ್ತರಾಗಿ ಹೊಸದಾಗಿ ನೇಮಕಗೊಂಡ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ ಅವರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜಭನವದಲ್ಲಿ ಭಾನುವಾರ ಬೆಳಗ್ಗೆ ಪ್ರಮಾಣವಚನ ಬೋಧಿಸಿದರು.

ಗೃಹ ಸಚಿವ ಆರ್ ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುತೂಹಲದ ಸಂಗತಿಯೆಂದರೆ ನ್ಯಾ. ಚಂದ್ರಶೇಖರಯ್ಯ ಅವರನ್ನೂ ಭೂಕಳಂಕ ಚಕ್ರ ಸುತ್ತಿಕೊಂಡಿದೆ. ನೌಕರರಿಗೆ ಮೀಸಲಾದ ಬಡಾವಣೆಯಲ್ಲಿ 15 ವರ್ಷಗಳ ಹಿಂದೆಯೇ ನ್ಯಾಯಾಧೀಶನಾಗಿ ತಾನೂ ನಿವೇಶನ ಪಡೆದಿರುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ನ್ಯಾ. ಚಂದ್ರಶೇಖರಯ್ಯ ನೇಮಕಕ್ಕೆ ರಾಜ್ಯಪಾಲ ಭಾರದ್ವಾಜ್ ಅವರು ಅಪಸ್ವರ ಎತ್ತರದಿರುವುದು ಆಶ್ಚರ್ಯ ತಂದಿದೆ.

ಕಳೆದ ಜುಲೈ ತಿಂಗಳಲ್ಲಿ ಉಪ ಲೋಕಾಯುಕ್ತ-2 ಹುದ್ದೆ ಸೃಷ್ಟಿಸಲಾಗಿತ್ತು. ಈ ಹುದ್ದೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್ ಗುರುರಾಜನ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಭೂಕಳಂಕಿತರಾಗಿ ಗುರುರಾಜನ್ ಅವರು ಅಕ್ಟೋಬರ್ 13ರಂದು ಹುದ್ದೆಗೆ ರಾಜೀನಾಮೆ ನೀಡಿದ್ದರು.

English summary
Justice Chandrashekaraiah takes oath as 2nd Upalokayukta Karnataka on Jan 22 in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X