ಪ್ರಾಮಾಣಿಕ ಮೇಷ್ಟ್ರ ಬ್ಯಾಂಕ್ ಖಾತೆಯಲ್ಲಿ ಇದೇನಿದು?

ಒಂದೆರಡು ಲಕ್ಷ ಹೋಗಲಿ, ಬ್ಯಾಂಕ್ ಅಕೌಂಟಿನಲ್ಲಿ ಹತ್ತು ಸಾವಿರ ರು.ಗೆ ಹೆಚ್ಚು ಕಮ್ಮಿ ಇರಬಹುದಾ ಎಂದು ನೋಡಲು ಹೋದವನಿಗೆ ಖಾತೆಯಲ್ಲಿ 49,000 ಕೋಟಿ ರು. ಇರುವುದು ತಿಳಿದುಬಂದರೆ ಏನಾದೀತು? ಅದೃಷ್ಟ ಆತನ ಹೃದಯ ದುರ್ಬಲವಾಗಿರಲಿಲ್ಲ, ಮನಸ್ಸೂ ಮಲಿನವಾಗಿರಲಿಲ್ಲ, ದುರಾಸೆಯಂತೂ ಇರಲೇ ಇಲ್ಲ.
ಪಾರಿಜಾತ್ ಸಹಾ ಎಂಬ ಮೇಷ್ಟ್ರು ಮಾಡಿದ್ದೇನೆಂದರೆ, ನೇರವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಫೋನಾಯಿಸಿ ಈ ವಿಷಯ ತಿಳಿಸಿದ್ದಾರೆ. ಎಸ್‌ಬಿಐ ಜೊತೆ ಸುರಕ್ಷಿತವಾಗಿ ಬ್ಯಾಂಕಿಂಗ್ ಮಾಡಿ ಎಂದು ಹೇಳುವ ಬ್ಯಾಂಕಿನ ಮ್ಯಾನೇಜರ್ ಇದು ಹೇಗಾಯಿತೆಂದು ಹೇಳಲು ಬಾಯಿ ಬಿಡುತ್ತಿಲ್ಲ. ಈ ಮೊತ್ತ ಕೇಂದ್ರ ಸರಕಾರದ ವಾರ್ಷಿಕ ಶೈಕ್ಷಣಿಕ ಬಜೆಟ್ಟಿಗೆ ಸಮ.
ಸಹಾ ಅವರು ನ್ಯಾಯವಾಗಿ ತಮ್ಮ ಖಾತೆಯಲ್ಲಿದ್ದ ಹಣವನ್ನು ಮಾತ್ರ ವಾಪಸ್ ತೆಗೆದುಕೊಂಡಿದ್ದಾರೆ. ಉಳಿದ ಕೋಟಿ ಕೋಟಿ ಹಣ ಇನ್ನೂ ಖಾತೆಯಲ್ಲೇ ಇದೆ. ಪ್ರಾಮಾಣಿಕತೆಯ ಪರಾಕಾಷ್ಠೆ ಅಂದ್ರೆ ಇದೇನಾ? ಕೋಟಿ ಕೋಟಿ ಕೊಳ್ಳೆ ಹೊಡೆಯುವವರ ನಡುವೆ ಸಹಾನಂಥವರು, ಆಟೋದಲ್ಲಿ ಸಿಕ್ಕ 5 ಲಕ್ಷ ರು. ಹಿಂದಿರುಗಿಸಿದ ಬೆಂಗಳೂರಿನ ಆಟೋ ಚಾಲಕನಂಥವರೂ ಇದ್ದಾರೆ. ಧನ್ಯೋಸ್ಮಿ.












Click it and Unblock the Notifications