ಖಜಾನೆಗಾಗಿ ಚಿನ್ನದ ಸುಂಕ ಹೆಚ್ಚಳ ಏಕೆ?

why-import-excise-duties-on-gold-rised
ನವದೆಹಲಿ, ಜ 18: ಕೇಂದ್ರ ಸರಕಾರ ತನ್ನ ಖಜಾನೆ ಖಾಲಿಯಾಗುತ್ತಿರುವುದನ್ನು ಮನಗಂಡು ಮತ್ತು ವಿತ್ತೀಯ ಕೊರತೆಯ ಹೊರೆಯನ್ನು ತಗ್ಗಿಸಿಕೊಳ್ಳುವ ಭರದಲ್ಲಿ ಬಂಗಾರದ ಬೆಲೆ ಹೆಚ್ಚಳ ಬರೆಯನ್ನು ಹಾಕಿದೆ.

ಹಳೆಯ ದರಗಳನ್ನು ಐದು ವರ್ಷಗಳ ಹಿಂದೆ ನಿಗದಿಪಡಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಗಮನಾರ್ಹ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ, ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ತೆರಿಗೆ ದರ ಹೆಚ್ಚಿಸಲಾಗಿದೆ ಎಂದು ಅಬಕಾರಿ ಮತ್ತು ಸೀಮಾ ಸುಂಕದ ಕೇಂದ್ರೀಯ ಮಂಡಳಿ (ಸಿಬಿಇಸಿ) ಅಧ್ಯಕ್ಷ ಎಸ್. ಕೆ. ಗೋಯೆಲ್ ಸಬೂಬು ಹೇಳಿದ್ದಾರೆ.

ತೆರಿಗೆ ಸ್ವರೂಪ ಬದಲಾವಣೆ ಪ್ರಕಾರ, ಚಿನ್ನ ಮತ್ತು ಬೆಳ್ಳಿ ಮೇಲೆ ಸ್ಥಿರ ಮೊತ್ತದ ತೆರಿಗೆ ವಿಧಿಸುವ ಬದಲಿಗೆ, ಈ ಅಪೂರ್ವ ಲೋಹಗಳ ಮೌಲ್ಯ ಆಧರಿಸಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿದಂತೆ ತೆರಿಗೆ ದರವೂ ಹೆಚ್ಚಳಗೊಳ್ಳಲಿದೆ. ಅಂದರೆ ಬೆಲೆ ಏರಿಕೆಯಾದರೆ ಅದಕ್ಕೆ ತಕ್ಕಂತೆ ತೆರಿಗೆಯೂ ಹೆಚ್ಚಲಿದೆ.

ಚಿನ್ನದ ಮೇಲಿನ ಆಮದು ಸುಂಕವನ್ನು ಚಿನ್ನದ ಬೆಲೆಯ ಶೇ 2ರಷ್ಟಕ್ಕೆ ನಿಗದಿಗೊಳಿಸಲಾಗಿದೆ. ಇದಕ್ಕೂ ಮೊದಲು ಪ್ರತಿ 10 ಗ್ರಾಂಗಳಿಗೆ ರೂ. 300 ತೆರಿಗೆ ವಿಧಿಸಲಾಗುತ್ತಿತ್ತು. ಬೆಳ್ಳಿ ಮೇಲೆ ಪ್ರತಿ ಕೆ.ಜಿಗೆ ರೂ. 1,500ರ ಬದಲಿಗೆ ಈಗ ಆಮದು ಸುಂಕವನ್ನು ಶೇ 6ಕ್ಕೆ ನಿಗದಿಪಡಿಸಲಾಗಿದೆ.

ಅಬಕಾರಿ ಸುಂಕ ವಿಧಿಸುವ ವಿಷಯದಲ್ಲಿ, ಈ ಮೊದಲು ತಲಾ 10 ಗ್ರಾಂ ಚಿನ್ನಕ್ಕೆ ರೂ. 200ರಂತೆ ಸುಂಕ ವಿಧಿಸಲಾಗುತ್ತಿತ್ತು. ಈಗ ಅದನ್ನು ಚಿನ್ನದ ಬೆಲೆಯ ಶೇ 1.5ಕ್ಕೆ ನಿಗದಿಪಡಿಸಲಾಗಿದೆ.ಬೆಳ್ಳಿಗೆ ಪ್ರತಿ ಕೆ.ಜಿಗೆ ರೂ.1000ರಂತೆ ಸ್ಥಿರ ಮೊತ್ತದ ಸುಂಕ ವಸೂಲು ಮಾಡಲಾಗುತ್ತಿತ್ತು. ಅದನ್ನು ಈಗ ಶೇ 4ಕ್ಕೆ ಹೆಚ್ಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+