ಚಿನ್ನ ತೆರಿಗೆ ಹೆಚ್ಚಳ:ಬೆಲೆ ಬಲು ದುಬಾರಿ
ನವದೆಹಲಿ,
ಜ 18: ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂಗಳ ಮೇಲಿನ ಅಬಕಾರಿ ಮತ್ತು ಸೀಮಾ ಸುಂಕ ಹೆಚ್ಚಿಸಲಾಗಿದ್ದು, ಈ ಹೆಚ್ಚುವರಿ ತೆರಿಗೆ ದರಗಳು ಮಂಗಳವಾರದಿಂದಲೇ ಜಾರಿಗೆ ಬಂದಿವೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ವಜ್ರದ ಮೇಲೆ ಕೂಡ ಶೇ 2ರಷ್ಟು ಆಮದು ಸುಂಕ ವಿಧಿಸಲಾಗಿದೆ. ಇದರಿಂದ ಇವುಗಳ ಬೆಲೆ ಮತ್ತಷ್ಟು ದುಬಾರಿಗೊಳ್ಳಲಿವೆ. id="toptextpromo">ಈ
ತೆರಿಗೆ ಸ್ವರೂಪ ಬದಲಾವಣೆ ಮೂಲಕ ಪ್ರಸಕ್ತ ಹಣಕಾಸು ವರ್ಷದ ಉಳಿದ ಅವಧಿಯಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ರೂ. 600 ಕೋಟಿಗಳಷ್ಟು ಹೆಚ್ಚುವರಿ ವರಮಾನ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಚಿನ್ನ
ಮತ್ತು ಬೆಳ್ಳಿ ಮೇಲಣ ಸುಂಕ ಪದ್ಧತಿ ಬದಲಾಗಿರುವುದರಿಂದ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 250 ರೂ. ಮತ್ತು ಬೆಳ್ಳಿಯ ಬೆಲೆಯಲ್ಲಿ ಕಿ. ಗ್ರಾಂಗೆ 1600 ರೂ. ಹೆಚ್ಚಳವಾಗಲಿದೆ. ಪ್ಲಾಟಿನಂ ಮತ್ತು ವಜ್ರದ ಬೆಲೆಯೂ ಏರಲಿದೆ ಎಂದು ವರ್ತಕರು ಹೇಳಿದ್ದಾರೆ.











Click it and Unblock the Notifications