ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜದಲ್ಲಿ ಜಾತಿಭೇದ ಬಿತ್ತಿದವರು ಬ್ರಾಹ್ಮಣರು

|
Google Oneindia Kannada News

Suresh Gowda & BSY
ಬೆಂಗಳೂರು, ಡಿ 20: ಈ ಸಮಾಜದಲ್ಲಿ ಜಾತಿ ಧರ್ಮ ಭೇದಬಾವ ಬಿತ್ತಿದವರು ಬ್ರಾಹ್ಮಣರು. ಮೇಲ್ವರ್ಗ, ಕೆಳವರ್ಗ ಎಂದು ತಾರತಮ್ಯ ಹುಟ್ಟಿಸಿದವರು ಬ್ರಾಹ್ಮಣರಲ್ಲದೆ ಬೇರೆ ಯಾರೂ ಅಲ್ಲ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ ಸುರೇಶ ಗೌಡ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ವಾಜಪೇಯ ಯಾಗದ ಬಗ್ಗೆ ಜನಶ್ರೀ ವಾಹಿನಿ ನಡೆಸಿದ ಚರ್ಚೆಯಲ್ಲಿ ಮಾತನಾಡುತ್ತಿದ್ದ ಸುರೇಶ ಗೌಡ, ಬಟ್ಟೆ ಒಗೆಯುವವರನ್ನು ಅಗಸರು, ಚಿನ್ನ ಮಾಡುವವರನ್ನು ಅಕ್ಕಸಾಲಿಗರೆಂದು ಪ್ರತ್ಯೇಕಿಸಿ ಅನಾದಿ ಕಾಲದಿಂದ ತಾರತಮ್ಯ ತೋರಿಕೊಂಡು ಬಂದವರು ಬ್ರಾಹ್ಮಣರು ಎಂದು ಚುಚ್ಚಿದರು.

ಈ ವಾಜಪೇಯ ಯಾಗ ಒಂದು ರೀತಿಯ ಮೂಢನಂಬಿಕೆ. ವೈಯಕ್ತಿಕವಾಗಿ ನನಗೆ ಇದರಲ್ಲಿ ಆಸಕ್ತಿ ಇಲ್ಲ. ಈ ಯಾಗದ ಫಲದಿಂದ ಮತ್ತೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾದರೆ ಸಂತೋಷ ಎಂದು ಯಜ್ಞ ಯಾಗಾದಿಗಳಲ್ಲಿ ಸದಾ ಭಾಗವಹಿಸುವ ಯಡಿಯೂರಪ್ಪ ಅವರ ಬಗ್ಗೆ ಅರ್ದ ಸಂತೋಷ ಮತ್ತು ಅರ್ದ ಬೇಸರದಿಂದ ಹೇಳಿದರು.

ಸದಾನಂದ ಗೌಡರ ಜೊತೆ ನನಗೆ ಯಾವುದೇ ವಿರಸವಿಲ್ಲ. ಇನ್ನು ಒಂದೂವರೆ ವರ್ಷದಲ್ಲಿ ಚುನಾವಣೆ ಎದುರಿಸಬೇಕಿದೆ. ಹಾಗಾಗಿ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುವುದು ಸೂಕ್ತ ಎಂದು ಸುರೇಶ ಗೌಡ ಅಭಿಪ್ರಾಯ ಪಟ್ಟಿದ್ದಾರೆ. ಸುರೇಶ ಗೌಡ ಅವರ ಈ ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು ? ಸಮಾಜಕ್ಕೆ ತಿಳಿಸಬಾರದೇ?

English summary
It is the brahmin community which divided the society on cast lines. This has led to disparities in our society - A statement by BJP MLA Suresh Gowda, Tumkur rural constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X