ಸ್ವಿಸ್ ಬ್ಯಾಂಕ್ ಖಾತೆ ಲಿಸ್ಟ್ ನಲ್ಲಿ 10 ಸಿನಿಮಾ ಸ್ಟಾರ್ಸ್

Bollywood Celebrities Black money list
ಮುಂಬೈ, ಡಿ.16: ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ತೊಡಗಿಸಿರುವ 100 ಜನ ಮುಂಬೈಕರ್ ಗಳ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದೆ.ಈ ಪಟ್ಟಿಯಲ್ಲಿ 10 ಜನ ಬಾಲಿವುಡ್ ನ ಹೆಸರಾಂತ ಸ್ಟಾರ್ ಗಳು ಇದ್ದಾರೆ. ಉಳಿದಂತೆ ದಕ್ಷಿಣ ಭಾರತದ 5 ಜನ ಗಣ್ಯರನ್ನು ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಸ್ವಿಸ್ ಬ್ಯಾಂಕ್ ನಲ್ಲಿ ಗುಪ್ತ ಖಾತೆ ಹೊಂದಿರುವವರಲಿ ಬಾಲಿವುಡ್ ಹಿರಿಯ ನಟರ ಖಾತೆಗಳಿವೆ. ಇವರಲ್ಲಿ ಹಲವರು ನಿರ್ಮಾಪಕರಾಗಿ ಬದಲಾಗಿದ್ದಾರೆ.ಇನ್ನು ಕೆಲವರು ಈಗ ಕಿರುತೆರೆಯಲ್ಲಿ ಹೆಸರು ಗಳಿಸಿದ್ದಾರೆ. ಇದೇ ರೀತಿ ದಕ್ಷಿಣ ಭಾರತ ಕೆಲ ತಾರೆಗಳು ಪಟ್ಟಿಯಲ್ಲಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಇನ್ನು ಹಲವು ಗಣ್ಯರು ವಿದೇಶಗಳಲ್ಲಿ ಮನೆ, ಕಾಂಪ್ಲೆಕ್ಸ್ ಗಳನ್ನು ಖರೀದಿಸಿ, ಕಪ್ಪು ಹಣವನ್ನು ಚಲಾವಣೆ ಮಾಡುತ್ತಿದ್ದಾರೆ. ನಿಯಮಗಳ ಪ್ರಕಾರ ನಾವು ಯಾವುದೇ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಹೆಸರು ಬಹಿರಂಗಗೊಂಡರೆ ಅವರು ತಮ್ಮ ಖಾತೆಯನ್ನು ಬಂದ್ ಮಾಡಿ, ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಇಲಾಖೆ ಹೇಳಿದೆ.

ಕಪ್ಪು ಹಣವುಳ್ಳರ ಬಗ್ಗೆ ಶ್ವೇತಪತ್ರ ಹೊರಡಿಸಿ, ಜಿನೀವಾದ ಎಚ್ ಎಸ್ ಬಿಸಿ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರ ವಿವರ ಬಹಿರಂಗಪಡಿಸುವಂತೆ ವಿಪಕ್ಷಗಳು ಸಂಸತ್ತಿನಲ್ಲಿ ಒತ್ತಾಯಿಸಿದರೂ, ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+