ಶನಿವಾರ ಚಂದ್ರಗ್ರಹಣ, ನಿಮ್ಮ ರಾಶಿ ಯಾವುದು?

Lunar Eclipse
ಮಾರ್ಗಶಿರ ಮಾಸ ಶುಕ್ಲ ಹುಣ್ಣಿಮೆಯ ದಿನವಾದ ಶನಿವಾರ (ಡಿಸೆಂಬರ್ 10) ದಂದು ವೃಷಭ ರಾಶಿಯಲ್ಲಿ ಚಂದ್ರನಿಗೆ ಕೇತು ಗ್ರಹಣವಾಗಲಿದೆ. ಈ ಗ್ರಹಣವು ಏಷ್ಯಾ,ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್,ಯುರೋಪ್,ಉತ್ತರ ಅಮೇರಿಕಾ ಮತ್ತು ಕೆನಡಾ ಖಂಡದಲ್ಲಿ ಗೋಚರಿಸಲಿದ್ದು, ರಾಜ್ಯದಲ್ಲಿ ಕೂಡಾ ಸಂಪೂರ್ಣ ಗ್ರಹಣ ವೀಕ್ಷಿಸ ಬಹುದಾಗಿದೆ. ಇದು ಖಗ್ರಾಸ ಸಂಪೂರ್ಣ ಚಂದ್ರಗ್ರಹಣ.

ರೋಹಿಣಿ ನಕ್ಷತ್ರದಲ್ಲಿ ಗ್ರಹಣ ಆರಂಭವಾಗಿ ಮೃಗಶಿರ ನಕ್ಷತ್ರದಲ್ಲಿ ಮೋಕ್ಷವಾಗಲಿದೆ. ಪಂಚಾಂಗದ ಪ್ರಕಾರ ಈ ಗ್ರಹಣವು ಕೃತ್ತಿಕಾ, ರೋಹಿಣಿ, ಮೃಗಶಿರಾ, ಹಸ್ತಾ, ಚಿತ್ರಾ, ಶ್ರವಣ, ಧನಿಷ್ಠಾ ನಕ್ಷತ್ರದವರಿಗೂ ಮೇಷ, ವೃಷಭ, ಮಿಥುನ, ಕನ್ಯಾ, ಮಕರ ರಾಶಿಯವರಿಗೆ ಅನಿಷ್ಟಕರ.

ಕಟಕ, ಮೀನಾ, ಸಿಂಹ, ಧನು ರಾಶಿಯವರಿಗೆ ಮಂಗಳಕರವಾಗಲಿದೆ. ಕನ್ಯಾ, ವೃಶ್ಚಿಕ ರಾಶಿಯವರಿಗೆ ಮಿಶ್ರಫಲ ಒದಗಲಿದೆ. ಈ ದಿನ ಹಗಲು ಭೋಜನ ನಿಷಿದ್ದ ಹಾಗೂ ಸಾಂವ್ಸರಿಕ ಶ್ರಾದ್ದ ಮರುದಿನ. ಒಟ್ಟಾರೆ ಗ್ರಹಣದ ಅವಧಿಯಲ್ಲಿ ಭೋಜನ ಕಡ್ಡಾಯವಾಗಿ ನಿಷೇಧಿಸಿ.

ಸ್ಪರ್ಷಕಾಲ: ಸಂಜೆ 06.15
ಮಧ್ಯಕಾಲ: ರಾತ್ರಿ 08.04
ಮೋಕ್ಷಕಾಲ: ರಾತ್ರಿ 09.53
ಗ್ರಹಣದ ಅವಧಿ: 3 ಗಂಟೆ 32 ನಿಮಿಷ

ರೋಹಿಣಿ ಮತ್ತು ಮೃಗಶಿರ ನಕ್ಷತ್ರದವರು ಗ್ರಹಣಶಾಂತಿ ನಡೆಸುವುದು ಸೂಕ್ತ. ವಿಷ್ಣು ಸಹಸ್ರನಾಮ, ನರಸಿಂಹ ಕವಚಂ, ಖುಣ ವಿಮೋಚನಾ ಸ್ತೋತ್ರ, ಆಂಜನೇಯ ಸ್ತೋತ್ರ, ರುದ್ರ ಮುಂತಾದ ಶ್ಲೋಕ ಪಠಿಣದ ಮೂಲಕ ಗ್ರಹಣ ದೋಷ ಪರಿಹಾರ ನಡೆಸಬಹದು. ಮುಖ್ಯವಾಗಿ ಈ ಕೆಳಗಿನ ಮಂತ್ರ ಪಠಿಸಿ ಬಿಂಬದಾನ ಮಾಡಿದರೆ ಶ್ರೇಷ್ಠ.

ಚಂದ್ರಾಂತರ್ಯಾಮಿ ಶ್ರೀ ಲಕ್ಷ್ಮೀನಾರಸಿಂಹ ಪ್ರೇರಣಾಯ |
ಶ್ರೀ ಲಕ್ಷ್ಮೀನಾರಸಿಂಹ ಪ್ರೀತ್ಯರ್ಥಂ ||
ಚಂದ್ರೋಪರಾಗ ಪೀಡಾ ಪರಿಹಾರಾರ್ಥಂ |
ಸನಾಗ ಚಂದ್ರ ಬಿಂಬದಾನಮಹಂ ಕರಿಷ್ಯೇ ||

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+