ಫೇಸ್ ಬುಕ್ ಮೌಲ್ಯ 100 ಬಿಲಿಯನ್ ಡಾಲರ್ ಗೆ ಏರಿಕೆ?

ಖಾಸಗಿ ಬಂಡವಾಳ ಹೂಡಿಕೆದಾರರಿಗೆ ಫೇಸ್ ಬುಕ್ ಮೇಲೆ ಹಣ ಸುರಿಯಲು ಅವಕಾಶ ನೀಡುವ ಮೂಲಕ ಫೇಸ್ ಬುಕ್ ತನ್ನ ಕಂಪನಿ ಮೌಲ್ಯ ಹೆಚ್ಚಿಸಿಕೊಳ್ಳಲು ಯೋಜಿಸಿದೆ. ಮುಂದಿನ ವರ್ಷದಿಂದ ಪ್ರಾಥಮಿಕ ಸಾರ್ವಜನಿಕ ಷೇರುಗಳನ್ನು ಕೂಡಾ ಹೊರ ಹಾಕುತ್ತಿದೆ.
ಸುಮಾರು 800 ಮಿಲಿಯನ್ ಗೂ ಅಧಿಕ ಸದಸ್ಯರನ್ನು ಹೊಂದಿರುವ ಫೇಸ್ ಬುಕ್ ನ ಮೇಲೆ ಹಣ ಹೂಡಲು ಬ್ಯಾಂಕರ್ ಗಳು ಸಿದ್ಧರಿದ್ದಾರೆ. ಆದರೆ, ಸಿಇಒ ಮಾರ್ಕ್ ಝಕರ್ ಬರ್ಗ್ ಮಾತೇ ಅಂತಿಮ ಎನ್ನುತ್ತಾರೆ ಸಿಎಫ್ ಒ ಡೇವಿಡ್ ಎಬೆರ್ಸ್ಮನ್.
ಹಾರ್ವಡ್ ವಿಶ್ವವಿದ್ಯಾಲಯದ ಡಾರ್ಮೆಂಟರಿ ಕೋಣೆಯೊಂದರಲ್ಲಿ ಸುಮಾರು 2004ರ ವೇಳೆಗೆ ಆರಂಭವಾದ ಸಾಮಾಜಿಕ ಜಾಲ ತಾಣ ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಬಳಸಲ್ಪಡುತ್ತಿರುವ ಆಪ್ತ ವೆಬ್ ತಾಣವಾಗಿದೆ.
ಸದ್ಯಕ್ಕೆ ಸುಮಾರು 41 ಬಿಲಿಯನ್ ಡಾಲರ್ ತೂಗುವ ಕಂಪನಿ ಈಗ ಗೂಗಲ್ ಹಾಗೂ ಅಮೆಜಾನ್ ನಂತರದ ಸ್ಥಾನದಲ್ಲಿದೆ.












Click it and Unblock the Notifications