ಮಂಗಳ ಗ್ರಹದತ್ತ ಹೊರಟಿದೆ ನಾಸಾದ ದೈತ್ಯ ವಾಹನ
ಫ್ಲೋರಿಡಾ,
ನ. 24: ಮಂಗಳ ಗ್ರಹದಲ್ಲಿ ಈ ಹಿಂದೆ ಅಥವಾ ಮುಂದೆ ಸೂಕ್ಷ್ಮಾಣು ಜೀವಿಗಳು ಇದ್ದವೇ, ಇರಲು ಸಾಧ್ಯವೇ ಎಂಬುದನ್ನು ಕಂಡುಹಿಡಿಯಲು ಅಮೆರಿಕದ ನಾಸಾ ವಿಜ್ಞಾನ ಸಂಸ್ಥೆ ಸಂಚಾರಿ ರೊಬೋ ವಾಹನವನ್ನು ಇದೇ ವಾರಾಂತ್ಯ ಉಡಾವಣೆ ಮಾಡಲು ಅಂತಿಮ ಸಿದ್ಧತೆ ನಡೆಸಿದೆ. 'ಕ್ಯೂರಿಯಾಸಿಟಿ' ಹೆಸರಿನ, ಕಾರಿನಷ್ಟು ದೊಡ್ಡದಾದ ಈ 'ಕುತೂಹಲದ ಮೂಟೆ' ಕೆಂಪು ಗ್ರಹದತ್ತ ನಾಳಿದ್ದು ಉಪಗ್ರಹದ ಮೂಲಕ ಮಂಗಳಕರವಾಗಿ ಚಿಮ್ಮಲಿದೆ. id="toptextpromo">ಈ
ವಾಹನ ಉಡಾವಣೆಗಾಗಿ ಅಮೆರಿಕದ ನಾಸಾ ಸಂಸ್ಥೆ ಸರಿಯಾಗಿ ಒಂದು ದಶಕದಷ್ಟು ಸಿದ್ಧತೆ ನಡೆಸಿದೆ. ಲೆಕ್ಕಕ್ಕೆ ನಿಲುಕದಷ್ಟು ಹಣ ಖರ್ಚಾಗಿ ಹೋಗಿದೆ. ಜತೆಗೆ ಎರಡು ವರ್ಷ ವಿಳಂಬವಾಗಿ (ಇದರಿಂದ ಯೋಜನೆಯ ವೆಚ್ಚ ಶೇ. 56ರಷ್ಟು ಅಧಿಕಗೊಂಡಿದೆ) ಈ 'ಕ್ಯೂರಿಯಾಸಿಟಿ' ವಾಹನ ಉಡಾವಣೆಯಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ಕಾರು
ಗಾತ್ರದ 'ಕ್ಯೂರಿಯಾಸಿಟಿ' ಮಂಗಳಕರ ವಾಹನಕ್ಕೆ ಬರೋಬ್ಬರಿ 2.5 ಶತಕೋಟಿ ಡಾಲರ್ (12,500 ಕೋಟಿ ರೂ.) ವೆಚ್ಚ ತಗುಲಿದೆ. ಫ್ಲೋರಿಡಾದ ವಾಯುನೆಲೆಯಿಂದ ಅಟ್ಲಾಸ್ 5 ರಾಕೆಟಿನಲ್ಲಿ ಬೆಚ್ಚಗೆ ಕುಳಿತುಕೊಂಡು 'ಕ್ಯೂರಿಯಾಸಿಟಿ' ಮಂಗಳಮುಖಿಯಾಗಿ ಶನಿವಾರ (ನ.26) ಹಾರಲಿದೆ! ನಾಸಾ ತನ್ನ ಹಿಂದಿನ ವೈಫಲ್ಯಗಳನ್ನು ಪ್ರಜ್ಞಾಪೂರ್ವಕವಾಗಿ ಮರೆಯುತ್ತಾ 'ಸೂಕ್ಷ್ಮಾಣು ಜೀವಿಗಳು ಮಂಗಳ ಗ್ರಹದಲ್ಲಿ ಬದುಕಿರಲು ಸಾಧ್ಯವೇ?' ಎಂಬುದನ್ನಷ್ಟೆ ತಿಳಿದುಕೊಳ್ಳುವ 'ಕುತೂಹಲ'ವನ್ನು 'ಕ್ಯೂರಿಯಾಸಿಟಿ' ಹೊತ್ತಿದೆ.











Click it and Unblock the Notifications