'ಕ್ಯೂರಿಯಾಸಿಟಿ' ಹಗ್ಗದಿಂದ ಮಂಗಳ ಗ್ರಹದ ಮೇಲೆ

nasa-curiosity-to-hang-down-by-cables-on-mars
ಫ್ಲೋರಿಡಾ, ನ.24: ದೈತ್ಯಾಗಾರದ ಉಪಗ್ರಹ ವಾಹನ ತಾಂತ್ರಿಕವಾಗಿ ಅತ್ಯಂತ ಸಬಲವಾಗಿದ್ದು, ಹಿಂದಿನ ದಾಖಲೆಗಳನ್ನೆಲ್ಲ ಮುರಿದಿದೆ. ಅಂದಹಾಗೆ ಈ ಹಿಂದೆಯೂ ನಾಸಾ ಇಂತಹ ಎರಡು ವಾಹನಗಳನ್ನು ಕಳಿಸಿಕೊಟ್ಟಿದೆ. 'ಸ್ಪಿರಿಟ್' ಮತ್ತು 'ಆಪರ್ಟುನಿಟಿ' ಎಂದು ಅವುಗಳನ್ನು ಹೆಸರಿಸಲಾಗಿತ್ತು.

'ಕ್ಯೂರಿಯಾಸಿಟಿ' 1 ಟನ್ ತೂಕವಿದ್ದು, ಈ ಹಿಂದೆ ಮಂಗಳ ಗ್ರಹ ಸುತ್ತುಹಾಕಿದ್ದ ಸ್ಪಿರಿಟ್ ಮತ್ತು ಆಪರ್ಟುನಿಟಿ ತೂಕಕ್ಕಿಂತ 5 ಪಟ್ಟು ಹೆಚ್ಚಾಗಿದೆ. ಸ್ಪಿರಿಟ್ ಮತ್ತು ಆಪರ್ಟುನಿಟಿಗಳಲ್ಲಿ 5 ವೈಜ್ಞಾನಿಕ ಸಾಧನಗಳಿದ್ದರೆ ಈ ಬಾರಿ 'ಕ್ಯೂರಿಯಾಸಿಟಿ' ಯಲ್ಲಿ 10 ಸಾಧನಗಳಿರುತ್ತವೆ.

ಮುಖ್ಯ ವಿಷಯವೆಂದರೆ ಕೆಂಪುಗಲ್ಲು ಗ್ರಹವನ್ನು ತೂತು ಮಾಡಿ ಆಳದಲ್ಲಿ ನೀರಿನ ಕುರುಹುಗಳೇನಾದರೂ ಇದೆಯಾ ಎಂಬುದನ್ನು ಪತ್ತೆಹಚ್ಚಲು ಒಂದು ಡ್ರಿಲ್ಲರ್ ಅನ್ನು ಸಹ ಈ ಸಾಧನಗಳ ಜತೆಗಿಡಲಾಗಿದೆ! ಕ್ರೇನ್ ನಿಂದ ಹಗ್ಗ ಹಾಕಿ ಯಂತ್ರಗಳನ್ನು ಇಳಿಸಿದಂತೆ 1 ಟನ್ ತೂಕದ 'ಕ್ಯೂರಿಯಾಸಿಟಿ'ಯನ್ನು ಕೇಬಲ್ ಸಹಾಯದಿಂದ ಉಪಗ್ರಹದಿಂದ ಮಂಗಳ ಗ್ರಹದ ಮೇಲೆ ಸಾವಕಾಶವಾಗಿ ಇಳಿಸಲಾಗುತ್ತದೆ. ಇದೇ ಮೊದಲ ಬಾರಿಗೆ ಕೇಬಲ್ ವಿಧಾನ ಬಳಸಲಾಗಿದೆ.

ಈ ಸ್ಕೈ ಕ್ರೇನ್ ಉಪಗ್ರಹ ಉಡಾವಣೆಯನ್ನು ಕಂಪ್ಯೂಟರ್ ಮೂಲಕ ಫಲಪ್ರದವಾಗಿ ಪ್ರಯೋಗಗಳಿಗೆ ಒಳಪಡಿಸಲಾಗಿದೆ. ಆದ್ದರಿಂದ ಮಂಗಳ ಗ್ರಹದಲ್ಲಿ ಯಾವುದೇ ಧಕ್ಕೆಯಿಲ್ಲದೆ ಸರಾಗವಾಗಿ ಇಳಿಯಲಿದೆ ಎಂಬುದು ಅಪಾರ ಶ್ರಮ ಹಾಕಿರುವ ನಾಸಾ ವಿಜ್ಞಾನಿಗಳ ತುಂಬು ವಿಶ್ವಾಸದ ಮಾತು. ವೈಫಲ್ಯ ಎಂಬುದು ಮಂಗಳ ಗ್ರಹದಾಚೆಗಿನ ದೂರದ ಮಾತಾದರೂ ಏನು ಅಪಾಯ ಕಾದಿದೆಯೋ ಎಂಬ ಆತಂಕವಂತೂ ಇದ್ದೇ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+