ಅಶೋಕ್ ಅಕ್ರಮ ಆಸ್ತಿ ದೂರಿನ ಪ್ರವರ ಏನು?

ದೂರು ಪ್ರವರ ಹೀಗಿದೆ: ಅಶೋಕ್ 2001ರಿಂದ ಇಲ್ಲಿಯವರೆಗೆ ಶಾಸಕರಾಗಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ಮತ್ತು 2008ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರಗಳನ್ನೇ ದೂರಿಗೆ ಆಧಾರವಾಗಿ ನೀಡಿದ್ದಾರೆ.
'2001ರಲ್ಲಿ ತಿಂಗಳ ಆದಾಯ ರೂ 20,000 ಎಂದು ಘೋಷಿಸಿಕೊಂಡಿದ್ದರು. 2005ರಲ್ಲಿ ಮಾಸಿಕ ಆದಾಯ ರೂ 1 ಲಕ್ಷ ತೋರಿಸಿದ್ದಾರೆ. ಅಧಿಕೃತ ಆದಾಯ ಮೂಲಗಳಿಂದ ಈ ಪ್ರಮಾಣದ ಏರಿಕೆ ಸಾಧ್ಯವೇ ಇಲ್ಲ. ಅನಧಿಕೃತ ಮೂಲಗಳನ್ನು ಬಳಸಿಕೊಂಡು ಅಕ್ರಮ ಮಾರ್ಗದಲ್ಲೇ ಆಸ್ತಿ ಸಂಪಾದಿಸಿರುವ ಅನುಮಾನವಿದೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.
'ಲೋಕಾಯುಕ್ತಕ್ಕೆ ಅವರೇ ಸಲ್ಲಿಸಿರುವ ಪ್ರಮಾಣಪತ್ರಗಳ ಪ್ರಕಾರ, ಎಂಟು ವರ್ಷಗಳ ಅವಧಿಯಲ್ಲಿ ಸಚಿವರ ಒಟ್ಟು ಆದಾಯ 46 ಲಕ್ಷ ರೂಪಾಯಿ. ಈ ಅವಧಿಯಲ್ಲಿ ಒಟ್ಟು ರೂ 75 ಲಕ್ಷ ವೆಚ್ಚ ಮಾಡಿದ್ದಾರೆ. 62 ಲಕ್ಷ ರೂಪಾಯಿ ಸಾಲ ತೋರಿಸಿದ್ದಾರೆ. ಆದರೆ, 2008ರಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದ ಪ್ರಕಾರ ಅವರ ಸಾಲದ ಮೊತ್ತ ಕೇವಲ 12.5 ಲಕ್ಷ ರೂಪಾಯಿ. ಇದು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ' ಎಂದು ಅತ್ರಿ ದೂರಿದ್ದಾರೆ.












Click it and Unblock the Notifications