ಸಚಿವ ಅಶೋಕ್ ಆಸ್ತಿ ಗೋಲ್ ಮಾಲ್: ಆರೋಪಿಯೇ ಸಾಕ್ಷಿ!

ಈ ಬಗ್ಗೆ ತನಿಖೆ ನಡೆಸುವಂತೆ ನಗರದ ಬನ್ನೇರುಘಟ್ಟ ರಸ್ತೆಯ ಸರಸ್ವತಿಪುರ ನಿವಾಸಿಯಾದ ಜಿ.ಬಿ. ಅತ್ರಿ ಶನಿವಾರ ಲೋಕಾಯುಕ್ತಕ್ಕೆ ದೂರನ್ನೂ (ದೂರು ನಂ.ಬಿಸಿಡಿ/513/2011) ಸಲ್ಲಿಸಿದ್ದಾರೆ.
ಆರೋಪಿಯೇ ಸಾಕ್ಷಿ!: ದೂರಿನಲ್ಲಿ ಅಶೋಕ್ ಅವರೊಬ್ಬರ ವಿರುದ್ಧವೇ ಆರೋಪ ಮಾಡಲಾಗಿದೆ. ಅಚ್ಚರಿಯ ಸಂಗತಿ ಎಂದರೆ ಸಾಕ್ಷಿದಾರರ ಪಟ್ಟಿಯಲ್ಲೂ ಅಶೋಕ್ ಅವರ ಹೆಸರೇ ಇದೆ.
'ಇದೊಂದು ವಿಚಿತ್ರ ಪ್ರಕರಣ. ಲೋಕಾಯುಕ್ತ ಮತ್ತು ಚುನಾವಣಾ ಆಯೋಗಕ್ಕೆ ಅಶೋಕ್ ಅವರೇ ಸಲ್ಲಿಸಿರುವ ಪ್ರಮಾಣ ಪತ್ರಗಳ ಆಧಾರದಲ್ಲಿ ದೂರು ನೀಡಿದ್ದೇನೆ. ಇಲ್ಲಿ ಬೇರೆ ಸಾಕ್ಷಿಗಳ ಅಗತ್ಯವೇ ಇಲ್ಲ. ಸಚಿವರೇ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸಾಕ್ಷ್ಯ ಒದಗಿಸಬೇಕು' ಎಂದು ಅತ್ರಿ ಹೇಳಿದ್ದಾರೆ.












Click it and Unblock the Notifications