ಅಕ್ರಮ ಆಸ್ತಿ ಅಫಿಡವಿಟ್: ಅಶೋಕ್ ಶಾಸಕ ಸ್ಥಾನಕ್ಕೆ ಸಂಚಕಾರ

ಅಶೋಕ್ ಪ್ರಕರಣ ನೋಡಿದಾಗ ಜನಪ್ರತಿನಿಧಿಗಳು ಆಸ್ತಿ ವಿವರ ಅಫಿಡವಿಟ್ ಸಲ್ಲಿಸುವುದು ಕಾಟಾಚಾರಕ್ಕೆ ಎಂಬುದು ಸಾಬೀತಾಗಿದೆ. ಅಫಿಡವಿಟಿನಲ್ಲಿ ಜನಪ್ರತಿನಿಧಿಗಳು ಏನೇ ಲೆಕ್ಕಾಚಾರ ತೋರಿಸಿದ್ದರೂ ಸುಮ್ಮನೆ ಕಣ್ಣುಮುಚ್ಚಿ ತೆಗೆದುಕೊಳ್ಳುವುದಕ್ಕಾ ಈ ವ್ಯವಸ್ಥೆ, ಸಂಸ್ಥೆಗಳು ಇರುವುದು? ಎಂಬ ಪ್ರಶ್ನೆಗಳು ಕಾಡುತ್ತಿವೆ.
ರೂಢಿಗತವಾಗಿ, ಲೋಕಾಯುಕ್ತ ಕಾಯಿದೆಯಂತೆ ಜನಪ್ರತಿನಿಧಿಗಳು ಪ್ರತಿವರ್ಷ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಸಂಸ್ಥೆಗೆ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಕುತೂಹಲದ ಸಂಗತಿಯೆಂದರೆ ಒಂದುವೇಳೆ ಆಸ್ತಿ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿದರೆ ಅಂಥ ಜನಪ್ರತಿನಿಧಿಗಳ ವಿರುದ್ಧ ಲೋಕಾಯುಕ್ತರಿಗೆ ಸ್ವ ಪ್ರೇರಣೆಯಿಂದ ಕ್ರಮ ಜರುಗಿಸುವ ಅಧಿಕಾರವಿಲ್ಲ!
ಆದರೆ, ಈ ಬಗ್ಗೆ ಸಾರ್ವಜನಿಕರು ಯಾರಾದರೂ ದೂರು ಕೊಟ್ಟರೆ ಅಂಥ ಸಂದರ್ಭದಲ್ಲಿ ಲೋಕಾಯುಕ್ತರಿಗೆ ಆರೋಪದ ಕುರಿತು ತನಿಖೆ ನಡೆಸಿ ಕ್ರಮ ಜರುಗಿಸುವ ಅಧಿಕಾರವಿದೆ. ಒಂದೊಮ್ಮೆ ಘೋಷಣೆ ಮಾಡಿದ ಆಸ್ತಿ ಲೆಕ್ಕಾಚಾರ ತಪ್ಪು ಎಂದು ಕಂಡುಬಂದರೆ ಆಗ ಅಂಥವರ ಶಾಸಕ ಸ್ಥಾನ ರದ್ದುಗೊಳ್ಳುವ ಸಾಧ್ಯತೆಯಿದೆ.
ಹೀಗಿರುವಾಗ, ಸಚಿವ ಆರ್. ಅಶೋಕ್ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಮತ್ತೂಂದು ತನಿಖೆ ಎದುರಿಸಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ.












Click it and Unblock the Notifications