ಲೈಂಗಿಕ ಕಿರುಕುಳ: ಟ್ವೀಟ್ ಮಾಡುತ್ತಾ ಯುವತಿ ಆತ್ಮಹತ್ಯೆ
ಟೆಕ್ಸಾಸ್,
ನ. 14: ಆ ಯುವತಿ ಅಮೆರಿಕ ಟೆಕ್ಸಾಸ್ ನ ಹೋಸ್ಟನ್ ಶಾಲೆಯ 18ರ ಪ್ರಾಯದವಳು. ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸರಿಯಾಗಿ 144 ಬಾರಿ ಟ್ವೀಟ್ ಮಾಡುತ್ತಾ ತನ್ನ ದುಃಖ ದುಮ್ಮಾನ ಹೊರಹಾಕಿದ್ದಾಳೆ. ಇಷ್ಟಕ್ಕೂ ಆ ಯುವತಿ ಯಾಕಪಾ ಹೀಗೆ ಮಾಡಿದಳು ಅಂದರೆ ಲೈಂಗಿಕ ಕಿರುಕುಳದಿಂದ ಅವಳ ಮನಸು ಘಾಸಿಗೊಂಡಿತ್ತು. id="toptextpromo">ಆಶ್ಲೆ
ಬಿಲ್ಲಾಸನೊ ಕಳೆದ ಮಂಗಳವಾರ ಎಂದಿನಂತೆ ಸ್ಕೂಲಿಗೆ ಹೋಗದೆ ಮನೆಯಲ್ಲೇ ಉಳಿದಳು. ಟೆರ್ರಿ ಹೈಸ್ಕೂಲಿನ ಆ ಹಿರಿಯ ವಿದ್ಯಾರ್ಥಿನಿ ಮನೆಯಲ್ಲಿ ತನ್ನ ಟ್ವಿಟ್ಟರ್ ಖಾತೆ ತೆರೆದುಕೊಂಡು ಕುಳಿತಿದ್ದಾಳೆ. ಬರೋಬ್ಬರಿ ಆರು ಗಂಟೆಗಳ ಕಾಲ ಈಕೆ ಟ್ವೀಟ್ ಮಾಡಿದ್ದಾಳೆ. ಈ ಸಮಯದಲ್ಲಿ 500ಕ್ಕೂ ಹೆಚ್ಚು ಮಂದಿ ಆಶ್ಲೆಯನ್ನು ಟ್ವಿಟ್ಟರ್ ಖಾತೆ ಮೂಲಕ ಫಾಲೋ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>'ನನ್ನ
ಮೇಲೆ ಮಾನಭಂಗವಾಗಿದೆ. ನನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದಾರೆ' ಎಂದು ಟ್ವೀಟ್ ಆರಂಭಿಸಿದ ಆಶ್ಲೆ, ಒಂದು ಹಂತದಲ್ಲಿ ನೀವು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದನ್ನು ತಿಳಿಯುವ ಒಳನೋಟ ನನ್ನಲ್ಲಿದೆ. ಆದರೆ ನನಗೆ ಎಲ್ಲವನ್ನೂ ಓದಲಾಗದು ಎಂದು ಮಾರಕ ಅಂತ್ಯದ ಬಗ್ಗೆ ಸುಳಿವು ನೀಡಿದ್ದಾಳೆ. ಕೊನೆಯ ಟ್ವೀಟಿನಲ್ಲಿ 'ಯಸ್ ನನ್ನ ಅಂತ್ಯ ಸಮೀಪಿಸಿತು' ಎಂಬ ಆಘಾತಕಾರಿ ಸಂದೇಶ ರವಾನಿಸಿದ್ದಾಳೆ.











Click it and Unblock the Notifications