ಲೈಂಗಿಕ ಕಿರುಕುಳ: ಆಶ್ಲೆ ಸತ್ತಿದ್ದಾದರೂ ಹೇಗೆ?
ಟೆಕ್ಸಾಸ್,
ನ. 14: ಮಾನಸಿಕವಾಗಿ ಮತ್ತು ದೈಹಿಕವಾಗಿ ತೀವ್ರವಾಗಿ ಜರ್ಜರಿತಗೊಂಡಿದ್ದ ಆ ಯುವತಿ, ಮೊದಲ ಬಾರಿ ತನ್ನ ಮೇಲೆ ಲೈಂಗಿಕ ಆಕ್ರಮಣ ನಡೆದಿದ್ದು ಹೇಗೆ ಎಂಬುದನ್ನು ಸಾಮಾಜಿಕ ಸ್ನೇಹಜಾಲದಲ್ಲಿ ಬಿಂಬಿಸಿದ್ದಾಳೆ. ಮಾನಸಿಕವಾಗಿ ವ್ಯಾಕುಲಗೊಂಡಿದ್ದ ಆಶ್ಲೆ, ತನಗೊದಗಿದ ದುಃಸ್ಥಿತಿಯ ಬಗ್ಗೆ ಎಳೆ ಎಳೆಯಾಗಿ ದಾಖಲಿಸಿದ್ದಾಳೆ. id="toptextpromo">ಇದನ್ನೆಲ್ಲ
ಆಪ್ತ ಸ್ನೇಹಿತೆಯರು, ಶಾಲಾ ಶಿಕ್ಷಕರು ಕೊನೆಗೆ ಪೊಲೀಸರಿಗೆ ಒಂದು ವರ್ಷದಿಂದ ಹೇಳಿಕೊಂಡಿದ್ದನ್ನೂ ಯುವತಿ ಟ್ವಿಟ್ಟರಿನಲ್ಲಿ ಪ್ರಸ್ತಾಪಿಸಿದ್ದಾಳೆ. ಆದರೆ ಪೊಲೀಸರು ಇದಕ್ಕೆಲ್ಲ ಸಾಕ್ಷಿಯ ಕೊರತೆ ಇದೆ. ಆದ್ದರಿಂದ ಏನೂ ಮಾಡಲಾಗದು ಎಂದು ತಮ್ಮ ಅಸಹಾಯಕತೆ ಪ್ರದರ್ಶಿಸಿದರು. id='are-slot-1' class='oiad oi-axt oiadv'> id='top-searched-articles'>ತನಗೆ
ಒದಗಿಬಂದ ದುಃಸ್ಥಿತಿ ಬೇರೆ ಯಾರಿಗೂ ಬರಬಾರದು. ಇದೊಂದು ಎಚ್ಚರಿಕೆಯ ಪಾಠವಾಗಬೇಕು ಎಂದು ಬಯಸಿದ ಆಶ್ಲೆ ಆತ್ಮಹತ್ಯೆ ದಾರಿ ಹಿಡಿದಳು ಎಂದು ಆಕೆಯ ಸ್ನೇಹಿತರು ಮಮ್ಮಲಮರುಗಿದ್ದಾರೆ. ಅಂದಹಾಗೆ ಆಶ್ಲೆ ನವೆಂಬರ್ 7ರಂದು ಉಸಿರುಗಟ್ಟಿಸಿಕೊಂಡು ಸತ್ತಿದ್ದಾಳೆ.











Click it and Unblock the Notifications