ಇದು ರೆಡ್ಡಿ ಲೈಫ್ ಸ್ಟೈಲ್: ಯಥಾ ಮಾಲೀಕ ತಥಾ ವಾಹನಗಳು
ಬಳ್ಳಾರಿ,
ನ.11: ಕುಠೀರ ಸಮೀಪವಿದ್ದ ಹೆಲಿಪ್ಯಾಡ್ ಈಗ ಬಂದ್ ಆಗಿದೆ. ಹೆಲಿಪ್ಯಾಡ್ ನಲ್ಲಿ ಹುಲ್ಲು ಪೊಗದಸ್ತಾಗಿ ಬೆಳೆಯಲಾರಂಭಿಸಿದೆ. ಹೊರಗೋಡೆ ಪೋಸ್ಟರುಗಳು, ಭಿತ್ತಿಪತ್ರಗಳಿಂದ ವಿಕಾರವಾಗಿ ಕಾಣುತ್ತಿವೆ. ಹೆಲಿಪ್ಯಾಡ್ ದಿನಿನತ್ಯ ಬಳಕೆಯಲ್ಲಿದ್ದಾಗ ಅನುಕ್ಷಣವೂ ಐದಾರು ಕೂಲಿಯಾಳುಗಳಿಂದ ಅದರ ಪಾಲನೆ ನಡೆಯುತ್ತಿತ್ತು. ಈಗ ಮಹಿಳಾ ಕೂಲಿಯಾಳುಗಳು ಬಂದು ಒಂದಷ್ಟು ನೀರು ಹಾಯಿಸಿ, ಗತವೈಭವ ನೆನಪಿಸಿಕೊಂಡು ನಿಟ್ಟುಸಿರುಬಿಡುತ್ತಿದ್ದಾರೆ. id="toptextpromo">ಅಸಲಿಗೆ
ಈ ಗಣಿ ಧಣಿಗಳು ಭೂಮಿ ಮೇಲೆ ಅರ್ಥಾತ್ ರಸ್ತೆ ಮೇಲೆ ಹೆಚ್ಚಾಗಿ ಹೆಜ್ಜೆ ಹಾಕಿಲ್ಲ ಎನ್ನಬಹುದು. ಇಲ್ಲ ಖಡಾಖಂಡಿತವಾಗಿ ಅವರು ನಮ್ಮ ನಿಮ್ಮಂತೆ ಬಸ್ಸು, ಜೀಪುಗಳಲ್ಲಿ ಓಡಾಡುತ್ತಿರಲಿಲ್ಲ. ಊರೊಳಗೇ ರೌಂಡ್ ಹಾಕಬೇಕು ಎಂದರೆ ವಿದೇಶಗಳಿಂದ ತರಿಸಿಕೊಂಡ ಲ್ಯಾಂಡ್ ರೋವರ್, ಬಿ ಎಂಡಬ್ಲ್ಯು ಅಂತಹ ಐಷಾರಾಮಿ ಕಾರುಗಳು, ದುಬಾರಿ ಕ್ರೀಡಾ ಕಾರುಗಳಲ್ಲಿ ಸಂಚರಿಸುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>2008ರ
ಚುನಾವಣೆ ವೇಳೆ ಈ ದುಬಾರಿ ವಾಹನಗಳನ್ನು ರೆಡ್ಡಿ ತರಿಸಿಕೊಂಡಿದ್ದರು. ಇವೆಲ್ಲ ಈಗ ಸಿಬಿಐ ಕಸ್ಟಡಿಯಲ್ಲಿ ಭದ್ರವಾಗಿವೆ. ಯಥಾ ಮಾಲೀಕ ತಥಾ ವಾಹನಗಳು ! ಇಲ್ಲಿ ಒಂದು ವಿಷಯ ಹೇಳಲೇ ಬೇಕು. ಕುಠೀರದ ಹೊರಗೆ ಎಸ್ಕಾರ್ಟ್ ವಾಹನಗಳು, ಕಾರು, ಸಿಬ್ಬಂದಿಗಾಗಿ ಮೀಸಲಾಗಿದ್ದ ಜಾಗ, ಶೆಡ್ ಗಳು ಈಗ ಬಿಕೋ ಎನ್ನುತ್ತಿವೆ. ಮರಮುಟ್ಟು, ಮರಳು, ಇಟ್ಟಿಗೆಗಳಿಂದ ತುಂಬಿವೆ.











Click it and Unblock the Notifications