ಬಾಲಕ ರೆಡ್ಡಿಗೆ ಚಂದಮಾಮ ಕಥೆಗಳೆಂದರೆ ಪಂಚಪ್ರಾಣ

ರೆಡ್ಡಿಗೆ ಬಾಲ್ಯದಲ್ಲಿ ಚಂದಮಾಮ ಕಥೆಗಳೆಂದರೆ ಪಂಚಪ್ರಾಣ. ಅದರಲ್ಲಿ ಬರುತ್ತಿದ್ದ ಐಭೋಗ, ವೈಭೋಗ ಕಥೆಗಳನ್ನು ಓದಿ ಮುಂದೊಂದು ದಿನ ತಾನೂ ಹೀಗೇ ಆಗಬೇಕು ಎಂದು ಕನಸು ಕಂಡಿದ್ದ. ರೆಡ್ಡಿ ಶಾಲಾ ಬ್ಯಾಗಿನಲ್ಲಿ ಚಂದಮಾಮ ಪುಸ್ತಕಗಳಿಗೆ ಸದಾ ಜಾಗವಿರುತ್ತಿತ್ತು. ಕತೆಗಳಲ್ಲಿ ವರ್ಣನೆಯಾಗುತ್ತಿದ್ದ ವೈಭವೋಪೇತ ಅರಮನೆಗಳಲ್ಲಿ ಈತ ವಿಹರಿಸುತ್ತಿದ್ದ.
ಮುಂದೆ ಸರಿಯಾಗಿ 44 ವರ್ಷದ ವಯಸ್ಸಿನವನಾದಾಗ ಸಿಬಿಐ ಅಧಿಕಾರಿಗಳು ಜಿ. ಜನಾರ್ಧನ ರೆಡ್ಡಿಯನ್ನು ಆತನ ಮನೆಯಿಂದ ಸೆಪ್ಟೆಂಬರ್ 5ರಂದು ನಿದ್ದೆಯಿಂದ ಎಬ್ಬಿಸಿಕೊಂಡು ಹೋದಾಗ ... ಬಾಲಕ ರೆಡ್ಡಿ ಕಾಣುತ್ತಿದ್ದ ಕನಸುಗಳು ಸಾಕಾರಗೊಂಡಿರುವುದನ್ನು ನೋಡಿ ಸಿಬಿಐ ಅಧಿಕಾರಿಗಳು ಬೆಚ್ಚಿಬಿದ್ದಿದ್ದು ಕಟು ವಾಸ್ತವವಾಗಿತ್ತು. ಕುಠೀರದಲ್ಲಿ ರೆಡ್ಡಿಯದ್ದು ರಾಜ ವೈಭೋಗ ಎಂಬುದು ಅರಿವಿಗೆ ಬರಲು ಸಿಬಿಐನವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.
ಬಳ್ಳಾರಿಯ ಕುಠೀರದಲ್ಲಿ ರಾಜ ವಿಲಾಸ ನಡೆಸುತ್ತಿದ್ದ ರೆಡ್ಡಿ ಹುಟ್ಟುತ್ತಾ ಚಿನ್ನದ ಚಮಚವನ್ನಿಟ್ಟುಕೊಂಡು ಹುಟ್ಟಿರಲಿಲ್ಲ. ಅಂದರೆ ಬಡತನ ಅವರ ತಂದೆಯ ಮನೆಯಲ್ಲಿ ನೆಲೆಸಿತ್ತು. ಅವರಪ್ಪ ಚೆಂಗಾ ರೆಡ್ಡಿ ಕನಿಷ್ಠ ಬಿಲ್ಲೆಯ ಪೇದೆಯಾಗಿದ್ದರು.












Click it and Unblock the Notifications