ಗಣಿಗಾರಿಕೆಯಿಂದ ರೆಡ್ಡಿ ಗಳಿಸಿದ ಲಾಭ 4,635 ಕೋಟಿ ರೂ
ಬಳ್ಳಾರಿ,
ನ.11: ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ಸಲ್ಲಿಸಿರುವ ವರದಿಯ ಪ್ರಕಾರ ಬಹುತೇಕ 10 ವರ್ಷಗಳ ಕಾಲ ಗಣಿ ಧೂಳೆಬ್ಬಿಸಿದ ರೆಡ್ಡಿ ಅದರಿಂದ ಜೇಬಿಗಿಳಿಸಿದ್ದು 4,635 ಕೋಟಿ ರುಪಾಯಿ ಹಣವನ್ನು. id="toptextpromo">ಇಂತಿಪ್ಪ
ರೆಡ್ಡಿ ಜೀವನದಲ್ಲಿ ಎಲ್ಲವೂ ತಿರುವುಮರುವು ಆಗಿದೆ. ಚಕ್ರ ಒಂದು ಸುತ್ತು ಹಾಕಿದೆ. ವಾಸ್ತವ ಏನೆಂಬುದು ರೆಡ್ಡಿ ಅರಿವಿಗೆ ಬರುತ್ತಿದೆ. ವೈಭೋಗ, ದರ್ಪ ದುರ್ಬೀನು ಹಾಕಿಕೊಂಡು ಹುಡುಕಿದರೂ ರೆಡ್ಡಿಯ ಬಳಿ ಗೋಚರವಾಗುತ್ತಿಲ್ಲ. ಒಬ್ಬೇ ಒಬ್ಬ ರೆಡ್ಡಿ ಏಕೆ. ಇಡೀ ಅವರ ಖಾಂದಾನ್ ನಲ್ಲಿ ಕಂಡುಬರುತ್ತಿಲ್ಲ. id='are-slot-1' class='oiad oi-axt oiadv'> id='top-searched-articles'>ಅತ್ತ
ರೆಡ್ಡಿಯ ಅಷ್ಟೂ ಆಸ್ತಿಪಾಸ್ತಿಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಂತೆ ಎಲ್ಲೋ ಬಚ್ಚಿಟ್ಟ ಹಣ ಅಥವಾ ಅತ್ಯಾಪ್ತ ನೆಂಟರು ಕೊಡುತ್ತಿರುವ ಹಣಕಾಸು ನೆರವಿನಿಂದ ರೆಡ್ಡಿ ಕುಟುಂಬದವರು ದಿನದೂಡುವಂತಹ ಶೋಚನೀಯ ಪರಿಸ್ಥಿತಿ ಬಂದೊದಗಿದೆ. ಇನ್ನು ರೆಡ್ಡಿಗಂತೂ ಇಂತಹ ಹಣವನ್ನೂ ಬಳಸುವ ಅವಕಾಶವಿಲ್ಲ. ಕಾನ್ಸ್ ಟೇಬಲ್ ಪುತ್ರ ಜೈಲುಪಾಲಾಗಿರುವುದನ್ನು ವಿಧಿವಿಪರೀತ ಅನ್ನೋಣವೇ?











Click it and Unblock the Notifications