50 ಲಕ್ಷ ಖರ್ಚು ಮಾಡುತ್ತಿದ್ದ ರೆಡ್ಡಿ ಕುಟುಂಬ ಈಗ 5 ಲಕ್ಷಕ್ಕೇ ಸೀಮಿತ
ಬಳ್ಳಾರಿ,
ನ.11: ಚಂದಮಾಮಾದಲ್ಲಿ ಬರುವ ಅರಮನೆಯಂತಹ ಕುಠೀರ ಈಗ ಪಾಳುಬಿದ್ದ ಮನೆಯಾಗಿದೆ. ರೆಡ್ಡಿಯ ಪತ್ನಿ ಅರುಣಾ ಲಕ್ಷ್ಮಿ, ಅವರ ಪುತ್ರ ಕೀರುತಿ ರೆಡ್ಡಿ ಇದ್ದಾರೆ. ಇವರಿಗೆ ನೆರವಾಗಲು, ಮಾನಸಿಕ ಸ್ಥೈರ್ಯ ತುಂಬಲು ನಿಕಟ ಬಂಧುಗಳು ಮನೆಗೆ ಇಳಿದಿದ್ದಾರೆ. ಇನ್ನು ಪುತ್ರಿ ಬ್ರಹ್ಮಿಣಿ ಬೆಂಗಳೂರಿಗೆ ಶಿಫ್ಟ್ ಆಗಿದ್ದಾಳೆ. id="toptextpromo">ಈ
ಹಿಂದೆ ವೈಭವದ ದಿನಗಳಲ್ಲಿ, ಗಣಿಗಾರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕುಟುಂಬದ ಖರ್ಚು ದಿನಕ್ಕೆ 50 ಲಕ್ಷ ರುಪಾಯಿ ಆಗುತ್ತಿತ್ತು. ಅದೀಗ 5 ಲಕ್ಷ ರುಪಾಯಿಗೆ ಇಳಿದಿದೆ. ಹಣಕಾಸಿಗೆ ಕೊರತೆ ಏನೂ ಇಲ್ಲವಾದರೂ ರೆಡ್ಡಿ ಬಂಧನದ ನಂತರ ಕುಠೀರದ ದಿಕ್ಕು ದೆಸೆ ಬದಲಾಗಿದೆ. id='are-slot-1' class='oiad oi-axt oiadv'> id='top-searched-articles'>ರೆಡ್ಡಿ
ಮಗ ಕೀರುತಿ ಕಪಗಲ್ ರಸ್ತೆಯಲ್ಲಿರುವ ಪ್ರತಿಷ್ಠಿತ ಪೀಪುಲ್ ಟ್ರಿ ಸ್ಕೂಲಿಗೆ ತೆರಳುವಾಗ ಈ ಹಿಂದೆ ಐದಾರು ಜೀಪುಗಳು ಹಿಂಬಾಲಿಸುತ್ತಿದ್ದವು. ಆದರೆ ಈಗ ಹೆಚ್ಚೆಂದರೆ 2 ಜೀಪುಗಳು ಕೀರುತಿಯನ್ನು ಹಿಂಬಾಲಿಸುತ್ತವೆ.











Click it and Unblock the Notifications