ಅಸಲಿಗೆ ರೆಡ್ಡಿ ಕುಠೀರದ ವಿಸ್ತೀರ್ಣ ಎಷ್ಟಿದೆ ಅಂದ್ಕೊಂಡ್ರಿ ?

How big is Janardhana Reddy's Bellary Kuteera!
ಬಳ್ಳಾರಿ, ನ.11: ಅಸಲಿಗೆ ರೆಡ್ಡಿ ಮನೆ ಎಷ್ಟಿದೆ ಅಂದ್ಕೊಂಡ್ರಿ !? ಮನೆಯ ವಿಸ್ತೀರ್ಣ 100x50 ಚದರಡಿ. 2007ರಲ್ಲಿ ಕುಠೀರದ ನಿರ್ಮಾಣ ಆರಂಭವಾಯಿತು. ಮನೆಯ ಸುತ್ತ ಬೃಹದಾಕಾರದ ಆರ್ಚ್ ಟೈಪ್ ಕಾಪೌಂಡ್ ಗೋಡೆ ಕಟ್ಟುವ ಕಾರ್ಯ ಈ ಹಿಂದೆ ಆರಂಭಿಸಲಾಗಿತ್ತದಾರೂ ಈಗ ಗೋಡೆ ನಿರ್ನಮಾಣ ಕಾರ್ಯ ನಿಂತುಹೋಗಿದೆ.

ಮೂರು ವರ್ಷಗಳ ಹಿಂದೆ ಕಾಪೌಂಡ್ ಗೋಡೆ ನಿರ್ಮಾಣ ಆರಂಭವಾಯಿತಾದರೂ ಸ್ಥಳೀಯರು ಈ ಎತ್ತರದ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾರ್ಪೊರೇಶನ್ನಿನ ಮಿತಿಮೀರಿ ಎಬ್ಬಿಸುತ್ತಿದ್ದ ಗೋಡೆಗೆ ತೀವವರ ವಿರೋಧ ವ್ಯಕ್ತವಾದಾಗ ರೆಡ್ಡಿ ತಮ್ಮ ಬಾಹುಬಲ ಮತ್ತು ಹಣ ಬಲವನ್ನು ಬಳಸಿ ಅಗತ್ಯ ಅನುಮತಿ ಪಡೆದು ನಿರ್ಮಾಣ ಮುಂದುವರಿಸಿದ್ದರು.

ಮನೆ ಮಂದಿ ಮನೆಯಿಂದ ಹೊರಹೋಗುತ್ತಿಲ್ಲ. ಆಳುಕಾಳುಗಳೇ ಹೊರಗೆ ಹೋಗಿ ಸಣ್ಣ ಪ್ರಮಾಣದಲ್ಲಿ ಬೇಳೆ ಕಾಳು ತರುತ್ತಿದ್ದಾರೆ. ಬಂದು ಹೋಗುವ ಬಂಧುಮಿತ್ರರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅದರ ಬಳಕೆಯೂ ಕಡಿಮೆಯಾಗಿದೆ.

ಕುಠೀರದಲ್ಲಿ ಗಣ್ಯಾತಿಗಣ್ಯ ವ್ಯಕ್ತಿಗಳಿಗೆಂದೇ ವಿಶೇಷವಾದ ಅಡುಗೆ ತಯಾರಿಸಲು ರೆಡ್ಡಿ ಉತ್ತರ ಭಾರತದಿಂದ ಅಡುಗೆಯವನನ್ನು ಕರೆತಂದಿದ್ದರು. ಆತನ ಸಂಬಳ ತಿಂಗಳಿಗೆ 50 ಸಾವಿರ ರುಪಾಯಿಯಷ್ಟಿತ್ತು. ಈತನೀಗ ರೆಡ್ಡಿಗೆ ಸೇರಿದ ಪಂಚತಾರಾ ಹೋಟೆಲಿನಲ್ಲಿ ಆಶ್ರಯ ಕಂಡುಕೊಂಡಿದ್ದಾನೆ ಎಂಬ ಮಾಹಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+