ಅಂಚೆಕಚೇರಿಯ ಠೇವಣಿ ಬಡ್ಡಿದರ ಹೆಚ್ಚಳ

ಕೇಂದ್ರ ಸರ್ಕಾರವು ಅಂಚೆ ಖಾತೆಯ ಎಲ್ಲಾ ರೀತಿಯ ಹೂಡಿಕೆದಾರರಿಗೆ ನೀಡುತ್ತಿದ್ದ ಬಡ್ಡಿ ದರವನ್ನು ಹೆಚ್ಚಿಸಿಲಿದೆ ಎಂಬ ಪ್ರಕಟಣೆ ನೀಡಿದ್ದು , ಈ ಕುರಿತು ಅಧಿಸೂಚನೆ ಹೊರಬಿದ್ದ ದಿನದಿಂದ ಬಡ್ಡಿ ದರ ಹೆಚ್ಚಾಗಲಿದೆ.
ಕೋಟ್ಯಾಂತರ ಗ್ರಾಹಕರು ಅಂಚೆ ಖಾತೆಯಲ್ಲಿ ಬೇರೆ ಬೇರೆ ರೀತಿಯ ಹಣ ಹೂಡಿಕೆ ಮಾಡಿದ್ದು ಅದರಲ್ಲಿ ಪಿಪಿಎಫ್ ಬಡ್ಡಿ ದರವನ್ನು ಶೇ.8-8.6ಕ್ಕೆ ಏರಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಅಂಚೆ ಉಳಿತಾಯ ಖಾತೆಯ ಬಡ್ಡಿ ದರ ಏರಿಕೆಯು ಈ ಕೆಳಗಿನ ಯೋಜನೆಗಳನ್ನು ಒಳಗೊಂಡಿದೆ .
*ಅಂಚೆ ಎಸ್ ಬಿ ಬಡ್ಡಿ ದರವನ್ನು ಶೇ. 3.5-4ಕ್ಕೆ ಏರಿಸಲಾಗುವುದು.
*ಮಾಸಿಕ ಆದಾಯ ಯೋಜನೆ ಬಡ್ಡಿ ದರಶೇ. 8.2ರಷ್ಟು ಏರಿಕೆ.
*ಪಬ್ಲಿಕ್ ಫ್ರಾವಿಟಡೆಂಟ್ ಫಂಡ್ ಶೇ.8-8.6ಕ್ಕೆ ಹೆಚ್ಚಳ
*ಪಿಪಿಎಫ್ ನಲ್ಲಿ ವಾರ್ಷಿಕ ಇಡಬಹುದಾದ ಗರಿಷ್ಠ ಹಣದ ಮೊತ್ತವನ್ನು 70,00ವನ್ನು 1 ಲಕ್ಷಕ್ಕೆ ಏರಿಸಲಾಗಿದೆ.
* ಒಂದು ವರ್ಷಕ್ಕೆ ಠೇವಣಿಗೆ ನೀಡುತ್ತಿದ್ದ ಬಡ್ಡಿದರ ಶೇ.6.25-7.2ಕ್ಕೆ ಹೆಚ್ಚಳ
*ಇನ್ನು ಮುಂದೆ ಕಿಸಾನ್ ವಿಕಾಸ್ ಪತ್ರಗಳನ್ನು ರದ್ದು ಪಡಿಸಲಾಗುವುದು.
* ಮಾಸಿಕ ಆದಾಯ ಯೋಜನೆ ಅವಧಿಯನ್ನು 6 ರಿಂದ 5ಕ್ಕೆ ಇಳಿಸಲಾಗಿದೆ.
* 10 ವರ್ಷ ಅವಧಿಯ ಹೊಸ ರಾಷ್ಟೀಯ ಉಳಿತಾಯ ಯೋಜನೆ ಬಿಡುಗಡೆ.
*ಮಾಸಿಕ ಆದಾಯ ಯೋಜನೆಗೆ ನೀಡುತ್ತಿದ್ದ ಶೇ. 5 ರ ಬೋನಸ್ ರದ್ದು ಪಡಿಸಲಾಗಿದೆ.
*ಪಿಪಿಎಫ್ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ನೀಡುತ್ತಿದ್ದ ಕಮೀಷನ್ ರದ್ದು ಪಡಿಸಲಾಗಿದೆ.












Click it and Unblock the Notifications