ರೆಡ್ಡಿ ಆಪ್ತನ ಲ್ಯಾಪ್‌ಟಾಪ್ : ಸುಷ್ಮಾ ಚುನಾವಣೆಗೆ ಗಣಿ ಹಣ ಸಂದಾಯ ಸಾಬೀತು

ಕುತೂಹಲಕರ ಸಂಗತಿಯೆಂದರೆ ಸಿಬಿಐ ಈ ಯಾವುದೇ ಅಂಶಗಳನ್ನು ರೆಡ್ಡಿ ವಿರುದ್ಧದ ಚಾರ್ಜ್ ಷೀಟಿನಲ್ಲಿ ದಾಖಲಿಸದೆ ನೇರವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ರಹಸ್ಯ ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ವೃತ್ತಿಯಿಂದ ಇಂಜಿನಿಯರ್ ಆಗಿರುವ ಅಲಿ ಖಾನ್, ದೇವಿ ಎಂಟರಪ್ರೈಸಸ್ ಮತ್ತು ಆರ್ ಕೆ ಮೈನಿಂಗ್ ಎಂಬ ಬೇನಾಮಿ ಕಂಪನಿಗಳ ಮಾಲೀಕತ್ವವನ್ನೂ ಹೊಂದಿದ್ದು, ಅದರ ಮೂಲಕ ಅಕ್ರಮವಾಗಿ ಅದಿರು ರಫ್ತು ಮಾಡಿರುವುದೂ ಲ್ಯಾಪ್‌ಟಾಪ್ ನಲ್ಲಿ ದಾಖಲಾಗಿದೆ. ಇದರಿಂದ ಮೈನಿಂಗ್ ಮಾಫಿಯಾದಲ್ಲಿ ಅಲಿ ಖಾನ್ ಮಹತ್ವದ ಲಿಂಕ್ ಹೊಂದಿರುವುದು ಸಾಬೀತಾಗಿದೆ ಎನ್ನಲಾಗಿದೆ.
ಅಲಿ ಖಾನ್ ಲ್ಯಾಪ್‌ಟಾಪ್ ಕಾರವಾರ ಮತ್ತು ಹೊಸಪೇಟೆ ಸಮೀಪದ ಕಾಳಹಳ್ಳಿ ಮೈನಿಂಗ್ ಬಗ್ಗೆಯೂ ಸಿಬಿಐ ಮಹತ್ವದ ಮಾಹಿತಿ ನೀಡಿದೆ.












Click it and Unblock the Notifications