ರೆಡ್ಡಿ ಲ್ಯಾಪ್‌ಟಾಪ್ ನಲ್ಲಿದೆ ಮಾಹಿತಿಯ ಗಣಿ: ಸಿಬಿಐ ಅಂತಿಮ ನಗೆ

ಈ ಹಿಂದೆ ಜನಾರ್ದನ ರೆಡ್ಡಿಯ ಲ್ಯಾಪ್‌ಟಾಪ್ ತೆರೆದು ನೋಡಿದಾಗ ಸಿಬಿಐಗೆ ನೂರಾರು ಬ್ಲೂಫಿಲಂಗಳು ಕಾಣಿಸಿದ್ದವು. ಆದರೆ ಈ ಬಾರಿ ರೆಡ್ಡಿ ಆಪ್ತ ಸಹಾಯಕ ಕೆ. ಮೆಹಫೂಜ್ ಅಲಿ ಖಾನ್ (28) ಲ್ಯಾಪ್‌ಟಾಪ್ ಗೆ ಕೈಹಾಕಿದ ಸಿಬಿಐಗೆ ದಾಖಲೆಯ ಗಣಿಯೇ ತೆರೆದಂತಾಗಿದೆ. ಇದರಿಂದ ಬಲವಾದ ಸಾಕ್ಷ್ಯಗಳು ದೊರೆತಿವೆ ಎಂದು ಸಿಬಿಐ ಮೂಲಗಳು ಬುಧವಾರ ತಿಳಿಸಿವೆ.
ಕರ್ನಾಟಕದ ಎರಡು ಗಣಿ ಪ್ರದೇಶಗಳಲ್ಲಿ ಕಬ್ಬಿಣದ ಅದಿರುಗಾರಿಕೆ ಬಗ್ಗೆ ಈ ಲ್ಯಾಪ್‌ಟಾಪ್ ನಲ್ಲಿ ಮಾಹಿತಿ ಇದೆ. ಗಮನಾರ್ಹವೆಂದರೆ ಈ ಎರಡೂ ಗಣಿಗಳಲ್ಲಿ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ (OMC) ಗಣಿಗಾರಿಕೆ ನಡೆಸಿವೆ. ಇದರಿಂದ ರೆಡ್ಡಿ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯ ದೊರೆತಂತಾಗಿದೆ. ಇಲ್ಲಿನ ಅದಿರನ್ನು ಆಂಧ್ರದ ಕೃಷ್ಣಪಟ್ಟಣಂ ಬಂದರು ಮೂಲಕ ರಫ್ತು ಮಾಡಿರುವ ಬಗ್ಗೆಯೂ ಲ್ಯಾಪ್‌ಟಾಪ್ ನಲ್ಲಿ ಮಾಹಿತಿ ಲಭಿಸಿದೆ ಎಂದು ಸಿಬಿಐ ಹೇಳಿದೆ.
ರೆಡ್ಡಿಯ ಆಪ್ತ ಸಹಾಯಕರು ಮತ್ತು ಆತನ ಚಾರ್ಟೆಡ್ ಅಕೌಂಟೆಂಟುಗಳಿಂದ ವಶಪಡಿಸಿಕೊಂಡಿರುವ ಇನ್ನೂ 10 ಲ್ಯಾಪ್‌ಟಾಪ್ ಗಳು ಸಿಬಿಐ ಬಳಿಯಿದ್ದು, ಅವುಗಳಿಂದ ಇನ್ನೂ ಮಾಹಿತಿ ಹೊರತೆಗೆದಿಲ್ಲ ಎನ್ನಲಾಗಿದೆ.











Click it and Unblock the Notifications